ಅಭಿಮಾನ ಎನ್ನುವುದು ಸಂದರ್ಭವೊದಗಿ ಬಂದಾಗ ಹೊರಗೆ ಬರುತ್ತದೆ. ಆಗ ಅಭಿಮಾನಿಗಳ ಅಭಿಮಾನವನ್ನು ಕಂಡು ಎಲ್ಲರೂ ಬೆರಗಾಗುವುದೂ ಉಂಟು ಹಾಗೂ ತಮ್ಮ‌ ಮೆಚ್ಚಿನ ನಟನ ಮೇಲೆ ಇಂತಹ ಸಹೃದಯವಂತರಾದ ಅಭಿಮಾನಿಗಳು ಯಾವ ಮಟ್ಟದ ಅಭಿಮಾನವನ್ನು ಹೊಂದಿದ್ದಾರೆ ಎಂಬುದು ಎಲ್ಲರಿಗೂ ತಿಳಿಯುವುದರ ಜೊತೆಜೊತೆಗೆ ಒಬ್ಬ ನಟನಿಗೆ ಅಭಿಮಾನಿಗಳು ಯಾವ ಮಟ್ಟದಲ್ಲಿ ತಮ್ಮ ಪ್ರೀತಿಯನ್ನು ತೋರುತ್ತಾರೆ ಎಂಬುದಕ್ಕೆ ಉದಾಹರಣೆಯಾಗುತ್ತದೆ. ಈಗ ಇಂತಹುದೊಂದು ಮನಮುಟ್ಟುವ ಘಟನೆ ನಡೆದಿದ್ದು, ಅಭಿಮಾನಿಗಳು ತಮ್ಮ ಅಭಿಮಾನ ನಟನಿಗಾಗಿ ಗಂಟೆಗಳ ಕಾಲ ಕಾದು ನಿಂತಿರುವ ಬಗ್ಗೆ ವರದಿಯಾಗಿದೆ.

ನಿನ್ನೆಯಿಂದ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಸುದ್ದಿಯಾಗಿ, ಸಂಚಲನ ಸೃಷ್ಟಿಸಿರುವ ಪ್ರಮುಖ ವಿಷಯ ಐಟಿ ಧಾಳಿ‌. ಚಿತ್ರ ರಂಗದ ಪ್ರಮುಖ ನಟ ಹಾಗೂ ನಿರ್ಮಾಪಕರ ಮೇಲೆ ನಡೆಸಿದ ಐಟಿ ಧಾಳಿಗಳ ಭಾಗವಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಮನೆಯ ಮೇಲೂ ಧಾಳಿ ನಡೆಸಿದ್ದರು. ಈ ಸಂಬಂಧ ಅಥವಾ ಹಿನ್ನೆಲೆಯಲ್ಲಿ ಶಿವಣ್ಣನವರ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಅವರ ಮನೆಯ ಮುಂದೆ ಜಮಾಯಿಸಿ ಶಿವಣ್ಣನವರನ್ನು ನೋಡಬೇಕೆನ್ನುವ ಬೇಡಿಕೆಯನ್ನು ಮುಂದಿಟ್ಟಿದ್ದರು.

ಇನ್ನು ಟಿವಿ ಯಲ್ಲಿ ಐಟಿ ಧಾಳಿಗಳ ಬಗ್ಗೆ ನೋಡಿದ ಶಿವಣ್ಣನವರ ಅಭಿಮಾನಿಯೊಬ್ಬರು ಬಾಣಂತಿಯಾಗಿದ್ದರೂ ತಮ್ಮ ಮಗುವಿನ ಸಮೇತ ಕೊರೆಯುವ ಚಳಿಯಲ್ಲೇ ಶಿವಣ್ಣನನ್ನು ನೋಡಲು ಬಂದಿದ್ದಾರೆ.  ಅವರು ಶಿವರಾಜ್ ಕುಮಾರ್ ಅವರ ಮನೆಯಿರುವ ಪ್ರದೇಶದಲ್ಲೇ ಇರುವ ತಣಿಸಂದ್ರದ ನಿವಾಸಿಗಳೆಂದು ತಿಳಿದು ಬಂದಿದೆ. ತಮಗೆ ಸಹಾಯ ಕೂಡಾ ನೀಡಿದ ತಮ್ಮ ಅಭಿಮಾನ ನಟನ ಮೇಲೆ ನಡೆದ ಐಟಿ ಧಾಳಿಯ ಸಂದರ್ಭದಲ್ಲಿ ಅದರಿಂದ ಆತಂಕಗೊಂಡ ಈ ಅಭಿಮಾನಿ ತನ್ನ ಮಗುವಿನ ಜೊತೆಗೆ ಬಂದು ಶಿವಣ್ಣನವರ ಮನೆಯ ಮುಂದೆ ನಿಂತಿದ್ದ ದೃಶ್ಯ ಎಲ್ಲರನ್ನು ಸೆಳೆದಿತ್ತು. ಒಟ್ಟಾರೆ ಶಿವಣ್ಣನವರ ಅಭಿಮಾನಿಗಳ ಈ ಅಭಿಮಾನ ನಿಜಕ್ಕೂ ಶಿವಣ್ಣನವರ ಮೇಲೆ  ಜನರು ಇಟ್ಟಿರುವ ಪ್ರೀತಿಗೆ ಸಾಕ್ಷಿಯಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here