ಸಿನಿಮಾ ರಂಗದಲ್ಲಿ ಸದಾ ಒಂದಲ್ಲಾ ಒಂದು ಸುದ್ದಿ, ಗಾಸಿಪ್ ಗಳು , ವಿವಾದಗಳು ಇದ್ದಿದ್ದೇ. ಅಲ್ಲದೆ ಸದಾ ಸುದ್ದಿಯಲ್ಲಿ ಇರಬೇಕು ಅಂದ್ರೆ ಒಂದರ ಹಿಂದೆ ಮತ್ತೊಂದು ಸಕ್ಸಸ್ ಫುಲ್ ಸಿನಿಮಾ ಮಾಡಬೇಕು ಅಥವಾ ಯಾವುದಾದರೊಂದು ವಿವಾದದಲ್ಲಿ ಸಿಲುಕಬೇಕು. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ನಡುವೆ ಒಂದಲ್ಲಾ ಒಂದು ಚರ್ಚೆ, ವಾದಗಳು ನಡೆದು ಅಭಿಮಾನಿಗಳ ನಡುವೆ ಫೈಟ್ ಗಳು ನಡೆಯುವುದು ಸಾಮಾನ್ಯ ಎನಿಸಿದೆ. ಆದರೆ ಇಂತಹ ವಿವಾದಗಳು ಅಥವಾ ಗಾಸಿಪ್ ಗಳಿಂದ ದೂರವಿದ್ದು, ಕೇವಲ ಯಶಸ್ವಿ ಸಿನಿಮಾದ ಮೂಲಕವೇ ಸದ್ದು ಮಾಡುವವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು.

ತಿಪಟೂರು ಮೂಲದ ದೃಷ್ಟಿ ಸಮಸ್ಯೆಯ ಹೊರತಾಗಿ ಎಂಎ ಮಾಡಿರುವ ಪ್ರದೀಪ್ ಅವರು ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಪುನೀತ್ ಅವರನ್ನು ಸ್ಟಾರ್ ಗಿರಿ ನಡುವೆ ವಿವಾದಗಳನ್ನು ಮ್ಯಾನೇಜ್ ಮಾಡುವುದು ಹೇಗೆ ಎಂಬ ಪ್ರಶ್ನೆ ಕೇಳಿದಾಗ ಪುನೀತ್ ರಾಜ್ ಕುಮಾರ್ ಅವರು ಅದಕ್ಕೆ ಉತ್ತರವನ್ನು ನೀಡಿದ್ದಾರೆ. ಪ್ರದೀಪ್ ಅವರು ಕಾರ್ಯಕ್ರಮದ ವೇದಿಕೆ ಮೇಲೆ ಪುನೀತ್ ಅವರನ್ನು ನಮ್ಮಲ್ಲಿ ಹಲವು ನಾಯಕ ನಟರಿದ್ದಾರೆ, ಅವರಿಗೆ ದೊಡ್ಡ ಮಟ್ಟದಲ್ಲಿ ಫ್ಯಾನ್ ಫಾಲೋಯಿಂಗ್ ಕೂಡಾ ಇದೆ. ಅದ್ರ ಜೊತೆ ಜೊತೆಗೆ ಹಗ್ಗ-ಜಗ್ಗಾಟ, ಫ್ಯಾನ್ಸ್ ವಾರ್ ನಡೆಯುತ್ತಲೇ ಇರುತ್ತದೆ. ಆದರೆ ಇದೆಲ್ಲದರ ನಡುವೆ ನೀವು ಮಾತ್ರ ಯಾವುದೇ ಫ್ಯಾನ್ಸ್ ವಾರ್ ನಲ್ಲಿ ವಿವಾದಕ್ಕೀಡಾಗಿಲ್ಲ. ವಿವಾದ ಮಾಡಿಕೊಳ್ಳದೇ ಹೇಗೆ ಎಲ್ಲಾ ನಿಭಾಯಿಸ್ತಾ ಇದ್ದೀರಾ ಎಂದು ಕೇಳಿದ್ದಾರೆ.

ಪುನೀತ್ ರಾಜ್‍ಕುಮಾರ್ ಅವರು ಉತ್ತರಿಸುತ್ತಾ, ಇಮಸೋಷಿಯಲ್ ಮೀಡಿಯಾದಲ್ಲಿ ಎಲ್ಲಾ ಅವರವರ ಖುಷಿಗೆ ಏನೇನೋ ಹಾಕ್ಕೊಳ್ತಾರೆ. ಆದರೆ ಜನರ ಪ್ರೀತಿ, ಜಯಕಾರವನ್ನೆಲ್ಲ ನಾನು ಹುಟ್ಟಿನಿಂದ ಅಂದರೆ ನನ್ನ ತಂದೆಯವರಿಂದ ನೋಡಿಕೊಂಡು ಬಂದಿದ್ದು, ಕಳೆದ ಐವತ್ತು ವರ್ಷಗಳಿಂದ ಜನ ನಮ್ಮ ಮೇಲೆ ಅವರ ಪ್ರೀತಿ ವಿಶ್ವಾಸ ತೋರಿಸಿಕೊಂಡು, ನಮ್ಮನ್ನು ಬೆಳೆಸಿರುವಾಗ, ಜನರ ಪ್ರೀತಿ ಇರುವಾಗ ನಾವ್ಯಾಕೆ ಕಾಂಟ್ರವರ್ಸಿ ಮಾಡಿಕೊಳ್ಳಬೇಕು ಎನ್ನುವ ಮೂಲಕ ವಿವಾದ ನಮಗೆ ಬೇಡದೇ ಇರುವ ವಿಚಾರ ಎಂದು ಹೇಳಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here