ತನ್ನ ತಾಯಿಯ ಪ್ರಾಣ ಉಳಿಸಲು ತನ್ನ ಪ್ರಾಣವನ್ನೂ ಲೆಕ್ಕಿಸದೆ ಚಿರತೆಯೊಂದಿಗೆ ಹೋರಾಡಿದ್ದಾಳೆ ಒಬ್ಬ ಯುವತಿ.ಈ ಹೋರಾಟದಲ್ಲಿ ತಾನು #ತೀವ್ರ ಗಾಯಗೊಂಡರೂ ಚಿರತೆಯೊಂದಿಗೆ ಹೋರಾಡಿ ತನ್ನ ತಾಯಿಯನ್ನು ರಕ್ಷಿಸಿಕೊಂಡಿದ್ದಾಳೆ.

ಮಹಾರಾಷ್ಟ್ರದ_ಸಕೋಲಿ ಸಮೀಪದ ಉಸ್ಗಾವ್ ನಲ್ಲಿ ಮಾರ್ಚ್ 24 ರ ರಾತ್ರಿ 10 ಗಂಟೆ ಸಮಯದಲ್ಲಿ ಮೇಕೆಗಳನ್ನು ಕಟ್ಟಿದ್ದ ಪ್ರದೇಶದಿಂದ ಏನೋ ಶಬ್ದವಾಗಿದ್ದರಿಂದ

ಜೀಜಾಬಾಯಿ ಮತ್ತು ಆಕೆಯ ಮಗಳು ರೂಪಾಲಿ(21) ಅದೇನೆಂದು ನೋಡಲು ಮನೆಯಿಂದ ಹೊರಬಂದರು.ಅದಾಗಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೇಕೆ ಮರಿಗಳನ್ನು ಚಿರತೆ ತಿನ್ನುತ್ತಿತ್ತು.

ಶಬ್ದ ನೋಡಿ ಏನೆಂದು ನೋಡಲು ಬಂದಿದ್ದ ತಾಜಿ ಜೀಜಾಬಾಯಿ ಮತ್ತು ಮಗಳು ರೂಪಾಲಿಯನ್ನು ನೋಡುತ್ತಿದ್ದಂತೆ ಚಿರತೆ ಅವರ ಮೇಲೆ ಮುಗಿಬಿದ್ದಿದೆ.ಆದರೆ ಹೆದರದ ರೂಪಾಲಿ ಧೈರ್ಯದಿಂದ ಒಂದು ಬಡಿಕೆ ಹಿಡಿದು ಚಿರತೆ ಮೇಲೆ ಹೋರಾಡಿದ್ದಾಳೆ.

ಸುಮಾರು 15 ನಿಮಿಷಗಳ ಕಾಲ ಹೀಗೆ ಒಂದು ಕೈಯಲ್ಲಿ ಚಿರತೆಯ ಮೇಲೆ ದಾಳಿ ನಡೆಸುತ್ತಾ, ಮತ್ತೊಂದು ಕೈಯಲ್ಲಿ ತನ್ನ ತಾಯಿಯನ್ನು ಹಿಂದೆ ತಳ್ಳುತ್ತಾ ಕೊನೆಗೆ ಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡರು.

ಇದಾದ ಕೆಲ ಹೊತ್ತಿನಲ್ಲಿ ಚಿರತೆ ಅಲ್ಲಿಂದ ಹೊರಟು ಹೋಗಿದೆ.ಇತ್ತ ಚಿರತೆಯ ದಾಳಿಯಿಂದ ಗಾಯಗೊಂಡ ರೂಪಾಲಿಯನ್ನು ನಾಗ್ಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು.

ಒಂದು ವಾರ ಅಲ್ಲಿ ಚಿಕಿತ್ಸೆ ಪಡೆದ ರೂಪಾಲಿಯನ್ನು ಮಂಗಳವಾರ ಡಿಸ್ಚಾರ್ಜ್ ಮಾಡಿದ್ದಾರೆ.ತನ್ನ ತಾಯಿಯನ್ನು ರಕ್ಷಿಸಿಕೊಳ್ಳಲು ತನ್ನ ಜೀವವನ್ನೇ ಪಣಕ್ಕಿಟ್ಟ ರೂಪಾಲಿಯನ್ನು ಸ್ಥಳೀಯರು ಅಭಿನಂದಿಸುತ್ತಿದ್ದಾರೆ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here