ನಗರಗಳು ಬೆಳೆದಂತೆ ಅನೇಕರಿಗೆ ಅನೇಕ ಬಗೆಯ ಸ್ಥಳೀಯ ಹಣ್ಣುಗಳ ಪರಿಚಯವೇ ಇಲ್ಲದಂತೆ ಆಗಿದೆ‌. ಅವುಗಳ ಪರಿಚಯವೇ ಇಲ್ಲದಿರುವಾಗ ಇನ್ನು ಅವುಗಳ ಮಹತ್ವ ತಾನೇ ಹೇಗೆ ತಿಳಿದಿರಲು ಸಾಧ್ಯ. ಗ್ರಾಮೀಣ ಭಾಗದ ಜನರಿಗೆ ಬಹಳಷ್ಟು ಪರಿಚಯ ಇರುವ ಆದರೆ ನಗರ ಪಟ್ಟಣಗಳ ಜನರು ತಿಳಿಯದೇ ಇರುವ ಒಂದು ಹಣ್ಣು ಎಂದರೆ ಅತ್ತಿ ಹಣ್ಣು. ಅನೇಕರು ಇದನ್ನು ಹತ್ತಿ ಹಣ್ಣೆಂದೇ ಉಚ್ಛಾರಣೆ ಮಾಡುತ್ತಾರೆ. ಈ ಹಣ್ಣು ಕೂಡಾ ನಮಗೆ ಅದೆಷ್ಟೋ ರೀತಿಯಲ್ಲಿ ಸಹಾಯವನ್ನು ಮಾಡುವ ಜೊತೆಗೆ ನಮ್ಮ ಆರೋಗ್ಯ ರಕ್ಷಣೆಯಲ್ಲಿ ಕೂಡಾ ಪ್ರಮುಖ ಪಾತ್ರವನ್ನು ವಹಿಸುತ್ತವೆ‌. ಸಹಜವಾಗಿಯೇ ಹಣ್ಣುಗಳು ಆರೋಗ್ಯ ವರ್ಧಕಗಳು ಎಂಬುದು ನಮಗೆಲ್ಲಾ ಈಗಾಗಲೇ ತಿಳಿದಿದೆ. ಹಾಗಾದರೆ ಒಮ್ಮೆ ಈ ಅತ್ತಿ ಹಣ್ಣಿನ ಬಗ್ಗೆ ಕೂಡಾ ತಿಳಿಯೋಣ ಬನ್ನಿ.

ಅತ್ತಿಹಣ್ಣಿನಲ್ಲಿ ಕ್ಯಾಲ್ಸಿಯಂ ಮತ್ತು ಪೊಟ್ಯಾಶಿಯಂ ಅಂಶವು ಹೆಚ್ಚಾಗಿರುವ ಕಾರಣ ಇದು ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅವರ ರಕ್ತದೊತ್ತಡವು ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ.
ಅತ್ತಿ ಹಣ್ಣಿನ ಮರದ ತಾಜಾ ಎಲೆಗಳನ್ನು ಅರೆದು ಮೊಸರಿನ ಜೊತೆ ಸೇರಿಸಿ, ಸೈಂದವ ಲವಣ ಸೇರಿಸಿ ಕುಡಿಯುವುದರಿಂದ ಮೂಲವ್ಯಾಧಿ ನಿವಾರಣೆ ಆಗುತ್ತದೆ ಎಂದು ಹೇಳಲಾಗಿದೆ. ಕೆಲವರಿಗೆ ಮೂಗಿನಿಂದ ರಕ್ತಸ್ರಾವ ಆಗುತ್ತದೆ. ಅಂತಹವರು ಇನ್ನೂ ಹಣ್ಣಾಗದ ಅತ್ತಿ ಹಣ್ಣನ್ನು ಜೇನುತುಪ್ಪದ ಜೊತೆ ಸೇರಿಸಿ ಸೇವನೆ ಮಾಡಿದರೆ ರಕ್ತಸ್ರಾವವಾಗುವುದು ನಿಲ್ಲುತ್ತದೆ.

 

ಉಷ್ಣದಿಂದ ಬಾಯಿ ಹುಣ್ಣು ಆದರೆ ಅತ್ತಿ ಎಲೆಯ ಮೇಲೆ ಕಂಡುಬರುವ ಉಬ್ಬಿ ಹರಳುಗಳನ್ನು ಹೋಲುವ ಕಾಳುಗಳನ್ನು, ಕಲ್ಲು ಸಕ್ಕರೆ ಜೊತೆ ಸೇರಿಸಿ ಅರೆದು ಸೇವಿಸಿದರೆ ಬಾಯಿ ಹುಣ್ಣು ವಾಸಿಯಾಗುತ್ತದೆ. ಸಿಹಿ ಮೂತ್ರ ರೋಗಕ್ಕೆ ಕೂಡಾ ಇದು ಮದ್ದು ಎನ್ನಲಾಗಿದೆ ಅತ್ತಿ ಹಣ್ಣಿನ ರಸವನ್ನು ಸೂಕ್ತ ವೈದ್ಯರ ಸಲಹೆ ಪಡೆದು ನಿರ್ಧಿಷ್ಟ ಅವಧಿಯ ವರೆಗೆ ಸೇವಿಸಿದರೆ ಸಿಹಿಮೂತ್ರ ರೋಗ ನಿವಾರಣೆ ಆಗುತ್ತದೆ. ಅತ್ತಿ ಎಲೆಗಳನ್ನು ಜಗಿದರೂ ಕೂಡಾ ಬಾಯಿಯ ದುರ್ವಾಸನೆ ದೂರವಾಗುವುದು ಹಾಗೂ ಬಾಯಿ ಹುಣ್ಣು ವಾಸಿಯಾಗುವುದು. ಅತ್ತಿ ಹಣ್ಣಿನ ಈ ಅಮೋಘ ಗುಣಗಳನ್ನು ತಿಳಿದ ಮೇಲೆ ಅದು ಕೂಡಾ ಇನ್ನು ವಿಶೇಷವೇ ಹಣ್ಣೇ ಎನಿಸುತ್ತದೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here