ಚಿತ್ರನಟಿ, ಮಾಜಿ ಶಾಸಕಿ ಜಯಸುಧಾ ಬಿಜೆಪಿಗೆ ಸೇರ್ಪಡೆ.!
ದೆಹಲಿ: ಚಿತ್ರನಟಿ, ಮಾಜಿ ಶಾಸಕಿ ಜಯಸುಧಾ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ದೆಹಲಿಯ ಬಿಜೆಪಿ ಕಚೇರಿಯಲ್ಲಿ ಅವರನ್ನು ತೆಲಂಗಾಣ ಅಧ್ಯಕ್ಷ ಕಿಶನ್ ರೆಡ್ಡಿ ಮತ್ತು ತೆಲಂಗಾಣ ಬಿಜೆಪಿ ಉಸ್ತುವಾರಿ ತರುಣ್ ಚುಗ್ ಬಿಜೆಪಿಗೆ ಆಹ್ವಾನಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ನಟಿ ಭೇಟಿ ಮಾಡಿದ್ದರು. ಜಯಸುಧಾ ಕನ್ನಡದ ನೀ ತಂದ ಕಾಣಿಕೆ, ತಾಯಿಯ ಮಡಿಲು, ಜನನಿ, ವಜ್ರಕಾಯ ಚಿತ್ರಗಳಲ್ಲಿ ನಟಿಸಿದ್ದಾರೆ.