ವಿಶ್ವಕಪ್ ಟೂರ್ನಮೆಂಟ್ ಗೆ ಅತಿ ರೋಚಕ ರೀತಿಯ ತೆರೆ ಬಿದ್ದಿದೆ. ಕೊನೆಗೂ ಕ್ರಿಕೆಟ್ ಜನಕ ಇಂಗ್ಲೆಂಡ್‌ ಕ್ರಿಕೆಟ್ ನಲ್ಲಿ ವಿಶ್ವಕಪ್ ಗೆಲ್ಲುವ ಮೂಲಕ ಕನಸು ನನಸು ಮಾಡಿಕೊಂಡಿದೆ.ಕ್ರಿಕೆಟ್ ಕಾಶಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ 2019ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೂಪರ್ ಓವರ್ ಗಳಲ್ಲಿ ಅತಿ ಹೆಚ್ಚು ಬೌಂಡರಿಗಳನ್ನು ಗಳಿಸಿದ ಆಧಾರದ ಮೇಲೆ ಇಂಗ್ಲೆಂಡ್ ತಂಡ ವಿಶ್ವಕಪ್ ಟ್ರೋಪಿಯನ್ನು ತನ್ನದಾಗಿಸಿಕೊಂಡಿದೆ. ಆ ಮೂಲಕ ಇಂಗ್ಲೆಂಡ್ ತಂಡವು ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ವಿಶ್ವಕಪ್ ಟ್ರೋಪಿಯನ್ನು ಗೆದ್ದಿದೆ.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡವು 50 ಓವರ್ ಗಳಲ್ಲಿ 8 ವಿಕೆಟ್ 241 ರನ್ ಗಳಿಸಿತು. 242 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡ 50 ಓವರ್ ಗಳಲ್ಲಿ ಎಲ್ಲ ವಿಕೆಟ್ ಗಳನ್ನು ಕಳೆದು ಕೊಂಡು 241 ರನ್ ಗಳನ್ನು ಗಳಿಸುವುದರ ಮೂಲಕ ರೋಚಕ ಟೈ ಕಂಡಿತು.

ಇಂಗ್ಲೆಂಡ್ ತಂಡದ ಪರ ಭರ್ಜರಿ ಬ್ಯಾಟಿಂಗ್ ಮಾಡಿದ ಬೆನ್ ಸ್ಟೋಕ್ 98 ಎಸೆತಗಳಲ್ಲಿ ಅಜೇಯ 84 ರನ್ ಗಳಿಸಿದರು. ನ್ಯೂಜಿಲೆಂಡ್ ಪರವಾಗಿ ಲಾಕಿ ಫ್ಯಾರ್ಗುಸನ್ ಹಾಗೂ ಜೇಮ್ಸ್ ನಿಶಾಮ್ ತಲಾ ಮೂರು ವಿಕೆಟ್ ಗಳನ್ನು ಕಬಳಿಸುವ ಮೂಲಕ ಪಂದ್ಯವನ್ನು ರೋಚಕ ಅಂತ್ಯಕ್ಕೆ ತೆಗೆದುಕೊಂಡು ಹೋದರು. ಪಂದ್ಯ ರೋಚಕ ಟೈ ಕಂಡಿದ್ದರಿಂದಾಗಿ ಸೂಪರ್ ಓವರ್ ಮೂಲಕ ವಿಜೇತರನ್ನು ನಿರ್ಣಯಿಸಲು ತೀರ್ಮಾನಿಸಲಾಯಿತು. ಆಗ ಇಂಗ್ಲೆಂಡ್ ತಂಡದ ಪರವಾಗಿ ಬ್ಯಾಟಿಂಗ್ ಆರಂಭಿಸಿದ ಬೆನ್ ಸ್ಟೋಕ್ ಮೂರು ಎಸೆತಗಳಲ್ಲಿ 8 ರನ್ ಗಳಿಸಿದರು, ಇನ್ನೊಂದೆಡೆ ಗೆ ಜೋಸ್ ಬಟ್ಲರ್ ಮೂರು ಎಸೆತಗಳಲ್ಲಿ 7 ರನ್ ಗಳಿಸಿದರು. ಆ ಮೂಲಕ ಒಂದು ಓವರ್ ನಲ್ಲಿ ಎರಡು ಬೌಂಡರಿ ಸಹಿತ 15 ರನ್ ಗಳನ್ನುಗಳಿಸಿದರು.16 ರನ್ ಗಳ ಗೆಲುವಿನ ಗುರಿ ಬೆನ್ನತಿದ ನ್ಯೂಜಿಲೆಂಡ್ ಕೂಡ ಮತ್ತೆ 15 ರನ್ ಗಳನ್ನು ಗಳಿಸಿತು.

ಆ ಮೂಲಕ ಪಂದ್ಯ ಮತ್ತೆ ಟೈ ಆಯಿತು. ನ್ಯೂಜಿಲೆಂಡ್ ಪರವಾಗಿ ಬ್ಯಾಟಿಂಗ್ ಆರಂಭಿಸಿದ ಜೇಮ್ಸ್ ನೀಶಾಂ ಅವರು 5 ಎಸೆತಗಳಲ್ಲಿ ಒಂದು ಸಿಕ್ಸರ್ ನೊಂದಿಗೆ 13 ರನ್ ಗಳಿಸಿದರು. ಮಾರ್ಟಿನ್ ಗುಪ್ಟಿಲ್ ಅವರು ಒಂದು ರನ್ ಗಳಿಸಿದರು.ಆ ಮೂಲಕ ಪಂದ್ಯ ಮತ್ತೆ ಟೈ ನೊಂದಿಗೆ ಕೊನೆಕೊಂಡಿತು.ಸೂಪರ್ ಓವರ್ ನಿಯಮದನ್ವಯ ಒಂದು ಓವರ್ ನಲ್ಲಿ ಅತಿ ಹೆಚ್ಚು ಬೌಂಡರಿ ಹೊಡೆದಿರುವ ತಂಡವನ್ನು ವಿಜೇತ ತಂಡ ಎಂದು ಘೋಷಿಸಲಾಯಿತು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here