ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮದುವೆ ಎನ್ನುವುದು ಅತೀ ಪವಿತ್ರವಾದದ್ದು . ಸಾಂಪ್ರದಾಯಿಕವಾಗಿ ಶಾಸ್ತ್ರ ಬದ್ದವಾಗಿ ಮದುವೆ ಮಾಡಿಕೊಂಡು ಮೊದಲ ರಾತ್ರಿಗಾಗಿಯೇ ವಿಶೇಷ ಮುಹೂರ್ತ ನಿಗದಿಪಡಿಸಿ ಮೊದಲರಾತ್ರಿ ಏರ್ಪಡಿಸುತ್ತಾರೆ. ಅದರಲ್ಲೂ ಮೊದಲ ರಾತ್ರಿ ಎಂದರೆ ನವದಂಪತಿಗಳಿಬ್ಬರನ್ನು ಹೊರತುಪಡಿಸಿ ಇನ್ಯಾರು ಅವರ ಅಕ್ಕಪಕ್ಕದಲ್ಲಿ ಸಹ ಸುಳಿಯುವುದಿಲ್ಲ.ಖಾಸಗಿ ಜೀವನದ ಮುಖ್ಯವಾದ ಸಮಯವನ್ನ ದಂಪತಿಗಳು ಇಬ್ಬರೇ ಕಳೆಯಲು ಇಚ್ಚಿಸುತ್ತಾರೆ.ಇದು ಪ್ರಪಂಚದ ಎಲ್ಲಾ ಕಡೆ ನಡೆಯುವ ಪದ್ದತಿ‌. ಮೊದಲ ರಾತ್ರಿಯ ಸಮಯದಲ್ಲ ಗಂಡ ಹೆಂಡತಿಯ ರೂಮಿಗೆ ಯಾರೂ ಪ್ರವೇಶ ಮಾಡುವುದಿಲ್ಲ.

ಆದರೆ ಇಲ್ಲೊಂದು ವಿಚಿತ್ರ ಕಥೆ ಇದೆ. ಲಂಡನ್ನಿನ ಇಬ್ಬರ ಲವರ್ ಗಳು ಒಂದು ವಿಚಿತ್ರ ಆಸೆಯಿಂದ ಮದುವೆ ದಿನಾಂಕವನ್ನು ಮುಂದೂಡುತ್ತಿದ್ದಾರೆ.ಲಂಡನ್ನಿನ ಯುವ ಜೋಡಿಗಳು ತಾವು ಮದುವೆ ಮಾಡಿಕೊಂಡ ಬಳಿಕ ನಡೆಯುವ ಮೊದಲ ರಾತ್ರಿಯ ವೇಳೆ ಫಸ್ಟ್ ನೈಟ್ ವೀಡಿಯೋ ಚಿತ್ರೀಕರಿಸಲು ವೀಡಿಯೋಗ್ರಾಫರ್ ಬೇಕು ನಮ್ಮಿಬ್ಬರ ಹಸಿಬಿಸಿ ವೀಡಿಯೋ ಚಿತ್ರೀಕರಿಸುವ ವೀಡಿಯೋಗ್ರಾಫರ್ ಗೆ ಎರಡು ಲಕ್ಷ ನೀಡುವುದಾಗಿ ತಿಳಿಸಿದ್ದಾರೆ. ಮೊದಲ ರಾತ್ರಿಯಲ್ಲಿ ಮಧ್ಯರಾತ್ರಿ 1 ರಿಂದ 3 ಗಂಟೆಯವರೆಗೆ ಎರಡು ಗಂಟೆಗಳ ಕಾಲ ಚಿತ್ರೀಕರಿಸಿ ಕೊಡುವಂತೆ ಆಫರ್ ಕೊಟ್ಟಿದ್ದಾರೆ.

ಆದರೆ ಇದುವರೆಗೂ ಯಾರೂ ಈ ಆಫರ್ ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ. ಆದರೆ ವೀಡಿಯೋಗ್ರಾಫರ್ ಸಿಗುವ ತನಕ ನಾವು ಮದುವೆ ಫಸ್ಟ್ ನೈಟ್ ಮಾಡಿಕೊಳ್ಳುವುದಿಲ್ಲ ಎಂದು ಈ ಜೋಡಿಗಳು ತಿಳಿಸಿದ್ದಾರೆ. ಯಾಕೆ ನಿಮಗೆ ಈ ಆಸೆ ಎಂದು ಕೇಳಿದವರಿಗೆ ಈ ಜೋಡಿ ಕೊಟ್ಟ ಉತ್ತರ ಹೀಗಿತ್ತು.ಮದುವೆ ಹಾಗು ಮೊದಲರಾತ್ರಿ ಎಂಬುದು ಜೀವನದ ಅದ್ಬುತವಾದ ಕ್ಷಣಗಳು ನಾವಿಬ್ಬರು ಪರಸ್ಪರ ಪ್ರೀತಿಸಿ ಮದುವೆ ಆಗುತ್ತಿರುವುದರಿಂದ ನಮ್ಮ ಜೀವನದ ಪ್ರತಿ ಕಣ ನೆನಪಿರಬೇಕು ಹೀಗಾಗಿ ನಾವಿಬ್ಬರು ಒಪ್ಪಿ  ಈ ನಿರ್ಧಾರ ಮಾಡಿದ್ದೇವೆ ಎಂದಿದ್ದಾರೆ‌. ಈ ಜೋಡಿಯ ಈ ವಿಚಿತ್ರ ಬೇಡಿಕೆ ಈಗ ಫುಲ್ ವೈರಲ್ ಆಗುತ್ತಿದೆ.

Photo Credit :- Google

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here