ಭಾರತದಲ್ಲಿ ನಿನ್ನೆ 74ನೇ ಸ್ವಾತಂತ್ರ್ಯ ದಿನಾಚರಣೆಯ ಪರ್ವ ದಿನ‌‌. ದೇಶದಾದ್ಯಂತ ಈ ಸಂಭ್ರಮವನ್ನು ದೇಶ ವಾಸಿಗಳು ಆಚರಿಸಿ ಸಂತಸ ಪಟ್ಟಿದ್ದಾರೆ. ಈ ಬಾರಿ ಸ್ವಾತಂತ್ರ್ಯ ದಿನಾಚರಣೆಗೆ ಒಂದು ವಿಶೇಷ ಕೂಡಾ ಇದೆ‌. ಇದೇ ಮೊದಲ ಬಾರಿಗೆ ನ್ಯೂಯಾರ್ಕ್​ನ ಪ್ರತಿಷ್ಠಿತ ಟೈಮ್ಸ್ ​ಸ್ಕ್ವೇರ್​ನಲ್ಲೂ ಕೂಡಾ ಭಾರತದ ತ್ರಿವರ್ಣ ಧ್ವಜವು ಹಾರಿದೆ‌. ಇತಿಹಾಸದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ತ್ರಿವರ್ಣವನ್ನು ಹಾರಿಸಲಾಗಿದೆ. ಸ್ವತಂತ್ರ್ಯ ದಿನದ ಈ ಸಂಭ್ರಮದಲ್ಲಿ ಅಮೆರಿಕಾದಲ್ಲಿ ನೆಲೆಸಿರುವಂತಹ 200 ಕ್ಕೂ ಅಧಿಕ ಭಾರತೀಯರು ಭಾಗವಹಿಸಿ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

ನೆರೆದಿದ್ದವರು ಎಲ್ಲರೂ ದೇಶಭಕ್ತಿಯ ಘೋಷಣೆಗಳನ್ನು ಮೊಳಗಿಸುಚ ಮೂಲಕ ತಮ್ಮ ದೇಶ ಭಕ್ತಿಯನ್ನು ವ್ಯಕ್ತಪಡಿಸಿದರು. ನ್ಯೂಯಾರ್ಕ್​​ನಲ್ಲಿರುವ ಕನ್ಸುಲ್ ಜನರಲ್ ಆಫ್ ಇಂಡಿಯಾ ರಣಧೀರ್ ಜೈಸ್ವಾಲ್ ಅವರು ತ್ರಿವರ್ಣ ಧ್ವಜದ ಧ್ವಜಾರೋಹಣ ವನ್ನು ನೆರವೇರಿಸಿದರು. ನಿನ್ನೆಯ ಈ ಕ್ಷಣಗಳು ಒಂದು ಅದ್ಭುತ ಸ್ಮರಣೆಗಳಾಗಿದ್ದು, ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯರು ಸ್ವತಂತ್ರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here