ಡಾ. ಶಂಕರೇ ಗೌಡ, ಹೀಗೆ ಹೇಳುವುದಕ್ಕಿಂತ ಐದು ರೂಪಾಯಿ ಡಾಕ್ಟರ್ ಎಂದರೆ ಥಟ್ಟನೆ ಎಲ್ಲರಿಗೂ ನೆನಪಾಗುತ್ತಾರೆ ಮಂಡ್ಯದ ಐದು ರೂಪಾಯಿ ಡಾಕ್ಟರ್ ಎಂದೇ ಪ್ರಖ್ಯಾತರಾದ ಡಾ.ಶಂಕರೇ ಗೌಡರು. ಇವರ ಸೇವೆ ಹಾಗೂ ಜನರ ಬಗೆಗೆ ಅವರು ತೋರುವ ಆತ್ಮೀಯತೆ ಮತ್ತು ಕೇವಲ ಐದೇ ರೂಪಾಯಿಗಳನ್ನು ಪಡೆದು ಚಿಕಿತ್ಸೆ ನೀಡುವ ಇವರ ಸರಳತೆಯಿಂದಾಗಿ ಅನೇಕ ಜನರ ಪ್ರೀತಿ,ಆದರ ಹಾಗೂ ನಂಬಿಕೆಗೆ ಪಾತ್ರರಾಗಿದ್ದಾರೆ. ಶಂಕರೇ ಗೌಡರ ಸೇವೆ ಹಾಗೂ ಸಾಧನೆ ಬಹಳ ಶ್ರೇಷ್ಠವಾದುದಾಗಿದೆ.

ಸಾಮಾನ್ಯವಾಗಿ ಸೇವೆ ಸಲ್ಲಿಸಲು ಅಲ್ಲ, ಹಣ ಮಾಡಲು ವೈದ್ಯರಾಗುತ್ತಾರೆ ಎಂಬುದು ಇತ್ತೀಚಿನ ದಿನಗಳಲ್ಲಿ ಎಲ್ಲರೂ ಹೇಳುವ ಮಾತುಗಳು, ಆದರೆ ಇದನ್ನು ಸುಳ್ಳು ಮಾಡಿದವರು ಈ ಶಂಕರೇಗೌಡರು. ಮಂಡ್ಯದ ಬೀದಿ ಬೀದಿಗಳಲ್ಲಿ ಶಂಕರೇ ಗೌಡರ ಬಗ್ಗೆ ಗೊತ್ತಿಲ್ಲದ ಜನರಿಲ್ಲ ಎಂದೇ ಹೇಳಬಹುದು. ಜನ ಇವರನ್ನು ಹುಡುಕಿಕೊಂಡು ಬಂದು ಚಿಕಿತ್ಸೆ ಪಡೆಯುತ್ತಾರೆ ಹಾಗೂ ಅವರ ಹಸ್ತವಾಸಿಯಿಂದ ಅನೇಕ ಜನರ ಚರ್ಮ ರೋಗಗಳು ವಾಸಿಯಾಗಿದೆ. ಬಡವರ ವೈದ್ಯರಾದ ಇವರಿಗೆ ಜೀ ಕನ್ನಡ ಚಾನೆಲ್ ಹೆಮ್ಮೆಯ ಕನ್ನಡಿಗ ಎಂಬ ಪ್ರಶಸ್ತಿಯನ್ನು ಕೂಡಾ ನೀಡಿ ಗೌರವಿಸಿದೆ.

ರಾಜಕೀಯದಲ್ಲಿ ಕೂಡಾ ಸಕ್ರಿಯವಾಗಿ ತೊಡಗಿಕೊಂಡಿರುವ ಇವರು ತಮ್ಮ ಕ್ಷೇತ್ರದಲ್ಲಿ ಅನೇಕ ಜನಪಯೋಗಿ ಕೆಲಸಗಳನ್ನು ಮಾಡಿ , ಜನ ಮನ್ನಣೆಯನ್ನು ಗಳಿಸಿದ್ದಾರೆ. ಈಗ ಇದೇ ಶಂಕರೇ ಗೌಡರು ಕರ್ನಾಟಕದ ಅತಿ ದೊಡ್ಡ ಹಾಗೂ ರಿಯಾಲಿಟಿ ಶೋಗಳಲ್ಲೇ ನಂಬರ್ ವನ್ ಖ್ಯಾತಿಗೆ ಪಾತ್ರವಾಗಿರುವ ಬಿಗ್ ಬಾಸ್ ರಿಯಾಲಿಟಿ ಶೋ ನ ಸ್ಪರ್ಧಿಗಳಲ್ಲಿ ಒಬ್ಬರಾಗಲು ಹೊರಟಿದ್ದಾರೆ ಎಂಬ ದೊಡ್ಡ ಸುದ್ದಿ ಎಲ್ಲೆಡೆ ಸದ್ದು ಮಾಡಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಈ ಮೊದಲೇ ಶಂಕರೇ ಗೌಡರು ಬಿಗ್ ಬಾಸ್ ಶೋ ಗೆ ಬರುವರೆಂಬ ಚರ್ಚೆಗಳು ನಡೆದಿತ್ತಾದರೂ, ಅಧಿಕೃತವಾಗಿ ಅದು ಖಾತರಿಯಾಗಿರಲಿಲ್ಲ.

ಬಿಗ್ ಬಾಸ್ ಶೋ ಆರಂಭವಾಗುವ ಮೊದಲೇ ಈ ಬಾರಿಯ ಪ್ರತಿಸ್ಪರ್ಧಿಗಳು ಯಾರಾಗುವರೆಂಬ ಚರ್ಚೆ ಗಳು ಪ್ರತಿಬಾರಿಯೂ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತವೆ. ಈಗ ಪ್ರಸ್ತುತ ಈ ಬಾರಿ ಬಿಗ್ ಬಾಸ್ ನಲ್ಲಿ ಭಾಗವಹಿಸಲಿರುವ ಸ್ಪರ್ಧಿಗಳ ಇಂತಹುದೇ ಒಂದು ಪಟ್ಟಿ ಸಿದ್ದವಾಗಿದ್ದು, ಅದರ ಪ್ರಕಾರ ಐದು ರೂಪಾಯಿ ವೈದ್ಯರಾದ ಶಂಕರೇ ಗೌಡ ಅವರು ಕೂಡಾ ಅಲ್ಲಿ ಸ್ಥಾನ ಪಡೆಯಲಿದ್ದಾರೆ. ಹಾಗಾದರೆ ಶಂಕರೇ ಗೌಡರು ಬಿಗ್ ಬಾಸ್ ನಲ್ಲಿ ಹೇಗೆ ತಮ್ಮನ್ನು ತಾವು ಬಿಂಬಿಸುವರು ಎಂಬುದನ್ನು ಕಾದು ನೋಡಬೇಕಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here