ತೊಂಬತ್ತರ ದಶಕದಲ್ಲಿ ತನ್ನ ಒಂದು ಎನ್.ಜಿ.ಓ ಮೂಲಕ ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ಬಳಸಿ ದೈಹಿಕ ಶೋಷಣೆ ಮಾಡುವ ಮಾನವ ಕಳ್ಳ ಸಾಗಾಣಿಕೆ ವಿರುದ್ಧ ಕಾರ್ಯಾಚರಣೆಯನ್ನು ಆರಂಭಿಸಿದ ಮಹಿಳೆಯೊಬ್ಬರು, ಕಳೆದ 26 ವರ್ಷಗಳಲ್ಲಿ ಸುಮಾರು 5000 ಹೆಣ್ಣು ಮಕ್ಕಳನ್ನು ಅವರ ಸಂಕಷ್ಟಗಳಿಂದ ಸಂರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ಇಂದು ಕೂಡಾ ಹೆಣ್ಣು ಮಕ್ಕಳ ಹಾಗೂ ಮಹಿಳೆಯರ ರಕ್ಷಣೆಗಾಗಿ ಆಕೆ ದುಡಿಯುತ್ತಿದ್ದು, ಆಕೆಗೆ ಜೊತೆಯಾಗಿದ್ದಾರೆ ಅವರ ಪತಿ ಕೂಡಾ. ಇಂತಹ ಒಂದು ಮಾನವೀಯ ಕಾರ್ಯವನ್ನು ಮಾಡುತ್ತಿರುವ ಆ ಮಹಿಳೆಯ ಬಗ್ಗೆ ತಿಳಿಯೋಣ ಬನ್ನಿ.

ಆಕೆಯ ಹೆಸರು ತ್ರಿವೇಣಿ ಆಚಾರ್ಯ, ಅವರ ಪತಿ ಬಾಲಕೃಷ್ಣ ಆಚಾರ್ಯ‌. ಇಬ್ಬರೂ ಮುಂಬೈನ ನಿವಾಸಿಗಳು. ಪತಿಯು ಮಿಲಿಟರಿಯಿಂದ ನಿವೃತ್ತಿ ಹೊಂದಿದ ಮೇಲೆ ಮುಂಬೈಗೆ ಬಂದ ತ್ರಿವೇಣಿ ಹಾಗೂ ಅವರ ಪತಿ ಅಲ್ಲೇ ನೆಲೆಸಿದರು‌. ಪತ್ರಕರ್ತೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಈಕೆ, ಒಮ್ಮೆ ಪ್ರಾಜೆಕ್ಟ್ ವಿಷಯವಾಗಿ ರೆಡ್ ಲೈಟ್ ಏರಿಯಾಗೆ ಹೋದಾಗ, ಅಲ್ಲಿ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳಿಗೆ ಕೆಲಸದ ಆಮಿಷ ತೋರಿಸಿ, ದೂರದ ಊರುಗಳಿಂದ ಕರೆ ತಂದು ವೇಶ್ಯಾವಾಟಿಕೆ ನಡೆಸಿರುವ ವಿಚಾರ ತಿಳಿದ ಮೇಲೆ ಆಕೆ ಅಂತಹವರ ರಕ್ಷಣೆಗೆ ಮುಂದಾದರು. ಪತಿಯ ನೆರವಿನೊಂದಿಗೆ ಒಂದು ರಕ್ಷಣಾ ಎನ್.ಜಿ.ಓ ಸ್ಥಾಪನೆ ಮಾಡಿದರು‌. ಇವರ ಎನ್.ಜಿ.ಓ.ಗಾಗಿ ಕೆಲಸ ಮಾಡುವ ಗೂಢಾಚಾರರಂತ ವ್ಯಕ್ತಿಗಳು ಇವರಿಗೆ ಮಾಹಿತಿ ನೀಡುತ್ತಾರೆ.

ಆಗ ಇವರು ಹೆಣ್ಣು ಮಕ್ಕಳನ್ನು ಸಂಪರ್ಕಿಸಿ, ಒತ್ತಾಯಪೂರ್ವಕವಾಗಿ ವಾಗಿ ದಂಧೆಗೆ ಇಳಿಸಿರುವುದು ಗೊತ್ತಾದ ಕೂಡಲೇ,ಕಾನೂನಿನ ನೆರವು ಪಡೆದು, ನರಕ ಕೂಪಗಳಿಂದ ಹೆಣ್ಣು ಮಕ್ಕಳನ್ನು ಹೊರತರುವ ಬಹಳ ಉತ್ತಮವಾದ ಕಾರ್ಯವನ್ನು ಮಾಡುತ್ತಿದ್ದು, ತಮ್ಮ ಸಂಸ್ಥೆ ಮೂಲಕ ಇಲ್ಲಿಯವರೆಗೆ 5000 ಹೆಣ್ಣು ಮಕ್ಕಳನ್ನು ರಕ್ಷಿಸಿದ್ದಾರೆ. ಆಕೆಯ ಸಾಧನೆಯನ್ನು ಮೆಚ್ಚಿ 2010 ಎಲ್ಲಿ ಏಷ್ಯಾ ಡೆಮಾಕ್ರಸಿ ಅಂಡ್ ಹ್ಯುಮನ್ ರೈಟ್ಸ್ ಅವಾರ್ಡ್ , 2011 ರಲ್ಲಿ ಸಿವಿಲ್ ಕರೇಜ್ ಅವಾರ್ಡ್ ಮತ್ತು 2013 ರಲ್ಲಿ ವರ್ಲ್ಡ್ ಆಫ್ ಚಿಲ್ಡ್ರನ್ ಹ್ಯಮಾನಿಟೇರಿಯನ್ ಅವಾರ್ಡ್ ನೀಡಿ ಸನ್ಮಾನಿಸಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here