ಎರಡು ತಲೆಯ ಹಾವು ಕಾಣಿಸಿಕೊಂಡರೆ ಅದೊಂದು ಅದ್ಭುತವೇ ಸರಿ. ಇಂತಹ ಒಂದು ಅದ್ಭುತವಾದ ಹಾವು ಕಾಣಿಸಿಕೊಂಡಿದೆ ಪಶ್ಚಿಮ ಬಂಗಾಳದ ಗ್ರಾಮವೊಂದರಲ್ಲಿ. ಕಪ್ಪು ಬಣ್ಣದ ಎರಡು ತಲೆಯ ಈ ಹಾವು ಮಿಡ್ನಾಪುರದ ಬೆಲ್ಡ್ ಅರಣ್ಯ ಪ್ರದೇಶದಲ್ಲಿರುವ ಏಕಾರುಖಿ ಗ್ರಾಮದಲ್ಲಿ ಕಂಡು ಬಂದಿದೆ. ಇಂತಹ ವಿಶೇಷ ಹಾವು ಕಾಣಿಸಿಕೊಂಡಿರುವ ವಿಚಾರ ತಿಳಿದ ಅರಣ್ಯ ಇಲಾಖೆ ಅದನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಲು ಬಂದಾಗ ಗ್ರಾಮಸ್ಥರು ಅದನ್ನು ಅರಣ್ಯ ಇಲಾಖೆಯ ವಶಕ್ಕೆ ನೀಡಲು ನಿರಾಕರಣೆ ಮಾಡಿದ್ದಾರೆ.

ಗ್ರಾಮಸ್ಥರು ಹಾವನ್ನು ಅರಣ್ಯ ಇಲಾಖೆ ವಶಕ್ಕೆ ನೀಡದಿರಲು ಕಾರಣವೂ ಇದೆ. ಗ್ರಾಮಸ್ಥರು ಈ ಹಾವನ್ನು ದೈವಿಕ, ದೈವ ಸ್ವರೂಪ ಎಂದೇ ನಂಬಿದ್ದು ಅದನ್ನು ನೀಡಲು ನಿರಾಕರಿಸಿದ್ದಾರೆ. ಗ್ರಾಮಸ್ಥರ ಇಂತಹ ನಂಬಿಕೆಯಿಂದಾಗಿ ಆ ಹಾವನ್ನು ರಕ್ಷಣೆ ಮಾಡಲಾಗಲಿಲ್ಲ ಎಂದು ಉರಗ ತಜ್ಞ ಕೌಸ್ತವ್ ಚಕ್ರವರ್ತಿ ಅವರು ತಿಳಿಸಿದ್ದಾರೆ. ಇನ್ನು ವೈಜ್ಞಾನಿಕವಾಗಿ ಹೇಳುವುದಾದರೆ ಇದು ಯಾವುದೇ ದೈವಾಂಶವುಳ್ಳ ಹಾವಲ್ಲ. ಮನುಷ್ಯರಲ್ಲಿ ಸಯಾಮಿಗಳಿದ್ದಂತೆ ಹಾವುಗಳಲ್ಲಿ ಕೂಡಾ ಸಯಾಮಿಗಳಿರುತ್ತವೆ.‌
ಅದೇ ರೀತಿ ಈ ಹಾವು ಕೂಡಾ ಸಯಾಮಿ ಆಗಿರಬಹುದು ಎನ್ನಲಾಗಿದೆ.

ಭ್ರೂಣ ವಿಭಜನೆಯ ಸಂದರ್ಭದಲ್ಲಿ ಇಂತಹ ಬೆಳವಣಿಗೆಗಳು ಉಂಟಾಗುವ ಸಾಧ್ಯತೆಗಳಿರುತ್ತವೆ. ಇನ್ನೂ ಕೆಲವೊಮ್ಮೆ ಪರಿಸರದ ಪ್ರಭಾವ ಕೂಡಾ ಇರುತ್ತದೆ ಎನ್ನಲಾಗಿದೆ. ಇಂತಹ ವಿಶೇಷ ಹಾವುಗಳನ್ನು ಸೂಕ್ತವಾಗಿ ಸಂರಕ್ಷಿಸಿ ಇಟ್ಟರೆ ಅವುಗಳು ಹೆಚ್ಚು ಕಾಲ ಬದುಕಿರಲು ಸಾಧ್ಯವಿರುತ್ತದೆ. ಆದರೆ ದೈವಿಕ ಅಂಶ ಎಂಬ ಕಾರಣದಿಂದ ಅದನ್ನು ಗ್ರಾಮಸ್ಥರು ಉಳಿಸಿಕೊಂಡಿದ್ದು ಸೂಕ್ತವಾದ ಕ್ರಮವಲ್ಲ. ಈ ಹಾವು ಬೆಂಗಾಳ್ ಖಾರಿಸ್ ಜಾತಿಯದ್ದು ಎಂದು, ಇದು ಬಹಳ ವಿಷಕಾರಿ ಹಾವು ಎಂದು ಕೂಡಾ ಹೇಳಿದ್ದಾರೆ. ಉರಗ ತಜ್ಞ ಕೌಸ್ತವ್.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here