ವೈಲ್ಡ್ ಲೈಫ್ ಸರ್ವೈವರ್ ಬೇರ್ ಗ್ರಿಲ್ಸ್ ದಟ್ಟಾರಣ್ಯದಲ್ಲಿ ಬದುಕಿಗೆ ಸವಾಲೊಡ್ಡಿ ಬರುವ ಸಾಹಸ ಕೆಲಸಗಳನ್ನು ಮಾಡುತ್ತಿರುತ್ತಾರೆ. ಇಂತಹ ಬೇರ್ ಗ್ರಿಲ್ಸ್ ಜೊತೆ ಕಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಣಿಸಿಕೊಂಡಿರುವುದು ಸದ್ಯ ದೇಶದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಡಿಸ್ಕವರಿ ಚಾನೆಲ್ ನಲ್ಲಿ ಬೇರ್ ಗ್ರಿಲ್ಸ್ ಸಾಹಸದ ವಿಡಿಯೋಗಳು ಬಿತ್ತರವಾಗುತ್ತವೆ. ಇನ್ನು ಬೇರ್ ಗ್ರಿಲ್ಸ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಡಿನಲ್ಲಿ ಸುತ್ತುತ್ತಿರುವ ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ..ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಹುಲಿ ಗಣತಿ ವರದಿಯನ್ನು ಬಿಡುಗಡೆ ಮಾಡಿದರು.

ನಂತರ ಅವರು ಮ್ಯಾನ್ v/s ವೈಲ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಈ ವಿಶೇಷ ಎಪಿಸೋಡ್​ ಆಗಸ್ಟ್​ 12ರಂದು 180 ದೇಶಗಳಲ್ಲಿ ಡಿಸ್ಕವರಿ ಚಾನಲ್​ನಲ್ಲಿ ಪ್ರಸಾರವಾಗಲಿದೆ.ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ನರೇಂದ್ರ ಮೋದಿ, ಹಲವು ವರ್ಷಗಳ ಕಾಲ ನಾನು ಪ್ರಕೃತಿ, ಪರ್ವತಗಳು ಮತ್ತು ಅರಣ್ಯದಲ್ಲಿ ಬದುಕಿದ್ದೇನೆ. ಆ ಸಮಯ ನನ್ನ ಜೀವನದ ಅತ್ಯಮೂಲ್ಯ ಕ್ಷಣಗಳು. ಹಾಗಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ನನ್ನನ್ನು ಕೋರಿದಾಗ ನಾನು ಅದಕ್ಕೆ ಕೂಡಲೇ ಒಪ್ಪಿಗೆ ಸೂಚಿಸಿದೆ.

ಈ ಕಾರ್ಯಕ್ರಮದ ಮೂಲಕ ಭಾರತದ ಕಾಡುಗಳನ್ನು ಪ್ರಪಂಚಕ್ಕೆ ಪರಿಚಯಿಸಲು ಹಾಗೂ ಪರಿಸರ ಸಂರಕ್ಷಣೆ ಪ್ರಾಮುಖ್ಯತೆ ಕುರಿತು ಸಂದೇಶ ನೀಡುವ ಅವಕಾಶ ಸಿಕ್ಕಿದೆ. ಬೆಲ್​ ಗ್ರಿಲ್ಸ್​ ಜತೆ ಕಾಡಿನಲ್ಲಿ ಸುತ್ತಾಡಿದ ಅನುಭವ ಖುಷಿ ತಂದಿತು ಎಂದು ತಿಳಿಸಿದ್ದಾರೆ.ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್​ ಒಬಾಮ, ಹಾಲಿವುಡ್​ ತಾರೆಯರಾದ ಜಾಕ್​ ಎಫ್ರಾನ್​, ಚಾನ್ನಿಂಗ್​ ಟಾಟಮ್​, ಬೆನ್​ ಸ್ಟಿಲ್ಲರ್​, ಮೈಕಲ್​ ಬಿ ಜೋರ್ಡನ್​ ಸೇರಿದಂತೆ ಹಲವರು ಬೇರ್​ ಗ್ರಿಲ್ಸ್​​ ಜತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here