ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿಯವರು 77ನೇ ಸ್ವತಂತ್ರ ದಿನಾಚರಣೆಯ ಅಂಗವಾಗಿ ಇಂದು ಆರ್. ಟಿ. ನಗರದ ತಮ್ಮ ನಿವಾಸದಲ್ಲಿ ಧ್ವಜಾರೋಹಣ ನೆರವೇರಿಸಿದರು.
ಧ್ವಜಾರೋಹಣ ಮಾಡಿದ ಬಳಿಕ ಮಾತನಾಡಿದ ಅವರು, ಈ ದೇಶದಲ್ಲಿ ಸ್ವಾತಂತ್ರ್ಯ ಕಿಚ್ಚು ಹಚ್ಚಿದ್ದು ಮೊದಲು ರೈತರು. ಇವತ್ತಿನ ದಿನ ನಾಡಿನ ಜನ ಮಲಗೋದಿಲ್ಲ. ಎಲ್ಲೆಲ್ಲೂ ಸಂಭ್ರಮ ಇದೆ. ರಾಜ್ಯದಲ್ಲಿ, ದೇಶದಲ್ಲಿ ಸಾವಿರಾರು ಜನ ಅನಾಮಧೇಯ ಹೋರಾಟಗಾರರಿದ್ದಾರೆ. ಸ್ವಾತಂತ್ರ್ಯ ಮಾಡುವ ನಿಟ್ಟಿನಲ್ಲಿ ಹೋರಾಟ ಮಾಡಬೇಕು ಅಂತ ತಮ್ಮ ಜೀವನ ತ್ಯಾಗ ಮಾಡಿದ್ದಾರೆ ಎಂದು ಸ್ವಾತಂತ್ರ್ಯ ಹೋರಾಟ ಶುರುವಾಗಿದ್ದು 1947 ರಲ್ಲಿ. 1924 ರಾಣಿ ಚೆನ್ನಮ್ಮ ಮೊದಲು ಸ್ವಾತಂತ್ರ್ಯ ಹೋರಾಟ ಶುರು ಮಾಡಿದರು.
ಲೋಕಮಾನ್ಯ ತಿಲಕ್, ಲಾಲ ಲಜಪಾತ್ ರಾಯ್, ಸುಭಾಸ್ ಚಂದ್ರ ಬೋಸ್, ಚಂದ್ರಶೇಖರ ಆಜಾದ್, ಭಗತ್ ಸಿಂಗ್ ಇವರು ನಿಜವಾದ ಹೊರಟಗಾರರು. ಇವರನ್ನು ನೆನೆಸುವುದು ನಮ್ಮ ಕರ್ತವ್ಯ. ಸ್ವಾತಂತ್ರ್ಯ ಹೋರಾಟದ ಹೆಸರಿನಲ್ಲಿ ಯಾರ್ಯಾರು ಏನೇನ್ ಮಾಡಿದ್ದಾರೆ ಎಲ್ಲರಿಗೂ ಗೊತ್ತೇ ಇದೆ ಎಂದು ಹೇಳಿದರು.
Disclaimer: This Story is auto-aggregated by a Syndicated Feed and has not been Created or Edited By City Big News Staff.