ಕೆ.ಆರ್.ಪುರ: ಇಂದು ರಾಜ್ಯದಾದ್ಯಂತ ಆಯುಧ ಪೂಜೆಯನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅದೇ ರೀತಿ ಕೆಆರ್ ಪುರಂನ ಜನನಾಯಕ ಮಾಜಿ ಸಚಿವ ಬಿ ಎ ಬಸವರಾಜ್ ಅವರು ದುರ್ಗಾದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಆಯುಧ ಪೂಜೆಯನ್ನು ನೆರವೇರಿಸಿದರು.
ಜನಪ್ರಿಯ ಅಸೋಸಿಯೇಷನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೆ.ಆರ್.ಪುರ ಕ್ಷೇತ್ರದ ವಿಜಿನಾಪುರ ದಲ್ಲಿ ಏರ್ಪಡಿಸಿದ್ದ ದುರ್ಗಾ ದೇವಿಯ ಪೂಜಾ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಬೈರತಿ ಬಸವರಾಜ್ ಅವರು ಪೂಜೆ ಸಲ್ಲಿಸಿದರು. ಪೂಜೆ ಸಲ್ಲಿಸಿ ಮಾತನಾಡಿದ ಮಾಜಿ ಸಚಿವ ಬೈರತಿ ಬಸವರಾಜ್ ಅವರು, ದಸರಾ ಹಬ್ಬದ ಅಂಗವಾಗಿ ದುರ್ಗ ಮಾತೆಯ ಪೂಜೆಯನ್ನು ಕ್ಷೇತ್ರದ ಹಲವೆಡೆ ಹಮ್ಮಿಕೊಂಡಿರುವುದು ಸಂತಸ ತಂದಿದೆ ಎಂದು ಹೇಳಿದರು.
ಕೆ.ಆರ್.ಪುರ ಕ್ಷೇತ್ರದಲ್ಲಿ ದಸರಾ ಹಬ್ಬ ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ, ದುರ್ಗಾದೇವಿ, ಗಣೇಶ ಸೇರಿದಂತೆ, ಹಲವು ದೇವರುಗಳ ಪ್ರತಿಷ್ಠಾಪನೆ ಹಾಗೂ ಮೆರವಣಿಗೆ ಕಾರ್ಯಗಳು ನಡೆಯುತ್ತಿರುವುದು ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ನೀಡಲು ಸಹಾಯಕವಾಗಿದೆ ಎಂದು ನುಡಿದರು.
ನಮ್ಮ ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ಕಾರ್ಯ ಯುವ ಪೀಳಿಗೆ ಮಾಡಬೇಕಾಗಿದ್ದು, ಇದಕ್ಕೆ ಹಿರಿಯರ ಮಾರ್ಗದರ್ಶನ ಅವಶ್ಯಕ ವಾಗಿದೆ ಎಂದು ವಿವರಣೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ವಿಜಿನಾಪುರ ವಾರ್ಡನ ಬಿಜೆಪಿ ಮುಖಂಡರಾದ ಪ್ರದೀಪ್ ಗೌಡ ಅವರು, ಹಲವು ವರ್ಷಗಳಿಂದ ದುರ್ಗಾದೇವಿ ಪ್ರತಿಷ್ಠಾಪನೆ ಮಾಡಿ ಪೂಜೆ ನೇರವೇರಿಸಲಾಗುತ್ತಿದ್ದು, ಲೋಕಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದೆವೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖಂಡ ರಾದ ಪ್ರದೀಪ್ ಗೌಡ, ಸಂಜಯ್ ಸಿನ್ಹಾ ಇದ್ದರು.
Disclaimer: This Story is auto-aggregated by a Syndicated Feed and has not been Created or Edited By City Big News Staff.