ಭಾರತ ಮತ್ತು ಪಾಕ್ ನ ಗಡಿಯಲ್ಲಿ ಮಾತ್ರವಲ್ಲದೇ ಕಾಶ್ಮೀರದಲ್ಲೂ ಕೂಡಾ ತೀವ್ರವಾದ ಹಿಮಪಾತವಾಗಿದ್ದು, ಈಗಾಗಲೇ ಹಿಮದಡಿಗೆ ಸಿಲುಕಿ ಕೆಲವರು ಪ್ರಾಣವನ್ನು ಕೂಡಾ ಕಳೆದುಕೊಂಡಿದ್ದಾರೆ. ಸಂಕಷ್ಟ ಪರಿಸ್ಥಿತಿಯಲ್ಲಿ ಜನರು ಜೀವನ ನಡೆಸುವ ಪರಿಸ್ಥಿತಿ ಅಲ್ಲಿದೆ. ಅನೇಕರು ಗಾಯಗೊಂಡರೆ, ಮತ್ತಷ್ಟು ಜನರು ಹಿಮಪಾತದ ಕಾರಣದಿಂದ ಕಣ್ಮರೆಯಾಗಿದ್ದಾರೆ. ಇಂತಹ ಒಂದು ಪರಿಸ್ಥಿತಿಯಲ್ಲಿ ಕೂಡಾ ಭಾರತೀಯ ಸೈನಿಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಮಾನವೀಯತೆಯನ್ನು ಮೆರೆದಿರುವ ಘಟನೆ ನಡೆದಿದ್ದು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಕೂಡಾ ಸೈನಿಕರ ಸಾಧನೆಗೆ ಮೆಚ್ಚಿದ್ದಾರೆ.

ಕಾಶ್ಮೀರದಲ್ಲಿ ಭಾರೀ ಹಿಮಪಾತದ ಸಮಯದಲ್ಲಿ, ಶ್ರೀಮತಿ ಶಮಿಮಾ ಎನ್ನುವ ತುಂಬು ಗರ್ಭಿಣಿಯನ್ನು ತುರ್ತಾಗಿ ಆಸ್ಪತ್ರೆಗೆ ಸೇರಿಸುವ ಅಗತ್ಯವಿತ್ತು. ಆಗ ಆಕೆಯ ನೆರವಿಗೆ ಧಾವಿಸಿದ ನೂರಕ್ಕೂ ಹೆಚ್ಚು ಜನ ಸೈನಿಕರು 4 ಗಂಟೆಗಳ ಕಾಲ 30 ಜನ ಸ್ಥಳೀಯ ನಾಗರಿಕರು ಅವಳೊಂದಿಗೆ ಸ್ಟ್ರೆಚರ್‌ನಲ್ಲಿ ಭಾರೀ ಹಿಮದಲ್ಲಿ ನಡೆಯುವ ಮೂಲಕವೇ ಆಸ್ಪತ್ರೆಗೆ ಸಾಗಿಸುವಲ್ಲಿ ಯಶಸ್ವಿಯಾದರು. ಆಸ್ಪತ್ರೆಯಲ್ಲಿ ಜನಿಸಿದ ಮಗು, ತಾಯಿ ಮತ್ತು ಮಗು ಇಬ್ಬರೂ ಕ್ಷೇಮದಿಂದ ಇದ್ದು, ಈ ಕುರಿತು ಚಿನಾರ್ ಕಾರ್ಪ್ಸ್ ಇಂಡಿಯನ್ ಆರ್ಮಿ ಟ್ವೀಟ್ ಕೂಡಾ ಮಾಡಿದೆ.

ಈ ಘಟನೆ ಬಗ್ಗೆ ತಿಳಿದ ಪ್ರಧಾನಿ ಮೋದಿ ಅವರು
ನಮ್ಮ ಸೈನ್ಯವು ಶೌರ್ಯ ಮತ್ತು ವೃತ್ತಿಪರತೆಗೆ ಹೆಸರುವಾಸಿಯಾಗಿದೆ. ಅದರ ಮಾನವೀಯ ಮನೋಭಾವಕ್ಕೂ ಕೂಡಾ ನಾವು ಗೌರವ ನೀಡಬೇಕಿದೆ. ಜನರಿಗೆ ಸಹಾಯ ಬೇಕಾದಾಗಲೆಲ್ಲಾ, ನಮ್ಮ ಸೈನ್ಯವು ಈ ಸಂದರ್ಭಕ್ಕೆ ಜನರನ್ನು ತಲುಪಿ ಸಾಧ್ಯವಿರುವ ಎಲ್ಲವನ್ನೂ ಮಾಡಿದೆ!
ನಮ್ಮ ಸೈನ್ಯ ನಮ್ಮ ಹೆಮ್ಮೆ. ಶಮಿಮಾ ಮತ್ತು ಅವರ ಮಗುವಿನ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here