ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಯಾವಾಗಲೂ ಒಂದಲ್ಲಾ ಒಂದು ಕಾರಣದಿಂದಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಸುದ್ದಿಯಾಗಿ ಚಾಲ್ತಿಯಲ್ಲಿ ಇರುತ್ತಾರೆ. ಈಗ ಮತ್ತೊಮ್ಮೆ ಆಗ ತನ್ನ ಮಾತಿನಿಂದ ಸುದ್ದಿಯಾಗಿದ್ದಾರೆ. ಕೆಲವು ದಿನಗಳ ಹಿಂದೆ ಸ್ವರಾ ಭಾಸ್ಕರ್ ‘ಸನ್ ಆಫ್ ಎಬಿಷ್ ‘ ಎಂಬ ಚಾಟ್ ಶೋ ಗೆ ಬಂದಂತಹ ಸಂದರ್ಭದಲ್ಲಿ, ತಮ್ಮ ಸಂದರ್ಶನ ನೀಡುವಾಗ ನಾಲ್ಕು ವರ್ಷದ ಬಾಲಕನ ಬಗ್ಗೆ ಕೆಟ್ಟ ಪದವನ್ನು ಬಳಕೆ ಮಾಡಿ ನಿಂದನೆ ಮಾಡುವ ಮೂಲಕ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ ಸ್ವರಾ ಭಾಸ್ಕರ್. ಆಕೆಯ ಮಾತು ಕೇಳಿದ ಜನ ಅವರ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ತನ್ನ ವೃತ್ತಿ ಜೀವನದ ಆರಂಭದಲ್ಲಿ ಸ್ವರಾ ಅವರು ಹಲವು ಜಾಹೀರಾತು ಗಳಲ್ಲಿ ನಟಿಸಿದ್ದರು. ಆ ವಿಚಾರದ ಬಗ್ಗೆ ಸಂದರ್ಶಕರೊಡನೆ ಮಾತನಾಡುತ್ತಾ ಸ್ವರಾ ಅವರು ಹಿಂದೊಮ್ಮೆ ಒಂದು ಜಾಹೀರಾತಿನಲ್ಲಿ ನಟಿಸುವಾಗ, ಅವರ ಜೊತೆ ಅದೇ ಜಾಹೀರಾತಿನಲ್ಲಿ ಇದ್ದ ನಾಲ್ಕು ವರ್ಷದ ಬಾಲಕನೊಬ್ಬ ಅವರನ್ನು ಆಂಟಿ ಎಂದು ಕರೆದಿದ್ದನಂತೆ‌. ಆಗ ಅವನ ಮಾತು ಕೇಳಿ ಸ್ವರಾ ಅವರಿಗೆ ಬಹಳ ಸಿಟ್ಟು ಬಂದಿತ್ತಂತೆ. ಅಲ್ಲದೆ ಅವನೊಬ್ಬ ಕೆಟ್ಟ ಬುದ್ಧಿಯ ಹುಡುಗ ಎಂದು ನಾಲ್ಕು ವರ್ಷದ ಹುಡುಗನ ಬಗ್ಗೆ ಆಕೆ ಮಾತನಾಡಿದ್ದಾರೆ.

ಸ್ವರಾ ಸಂದರ್ಶನದ ವೇಳೆ ಬಾಲಕನ ಬಗ್ಗೆ ಮಾತನಾಡುವಾಗ ಅವಹೇಳನಕಾರಿ ಪದವನ್ನು ಕೂಡಾ ಬಳಸಿದ್ದು, ಆ ವಿಡಿಯೋ ಕ್ಲಿಪ್ಪಿಂಗ್ ವೈರಲ್ ಆಗಿ, ಈಗ ಟ್ರೋಲಿಂಗ್ ಗೆ ಗುರಿಯಾಗಿದ್ದಾರೆ. ಈಗ ಸಾಮಾಜಿಕ ಜಾಲತಾಣಗಳಲ್ಲಿ #ಸ್ವರಾ ಆಂಟಿ ಎಂಬ ಟ್ರೆಂಡ್ ಆರಂಭವಾಗಿದೆ‌. ನಾಲ್ಕು ವರ್ಷದ ಬಾಲಕ ಆಂಟಿ ಎಂಬುದರ ಬಗ್ಗೆ ಈ ರೀತಿ ಮಾತನಾಡುವ ನಟಿಗೆ ಸೌಜನ್ಯ ಅಥವಾ ತಾಳ್ಮೆ ಎನ್ನುವುದು ಎಲ್ಲವೇ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here