ಕನ್ನಡ ಚಿತ್ರರಂಗದ ಈ ವರ್ಷದ ನಿರೀಕ್ಷಿತ ಸಿನಿಮಾ “ಐ ಲವ್ ಯು” ಇದೇ ಶುಕ್ರವಾರ ಎರಡು ಭಾಷೆಗಳಲ್ಲಿ ಏಕಕಾಲಕ್ಕೆ ಸುಮಾರು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿದೆ. ಈಗಾಗಲೇ ಟ್ರೈಲರ್ ಮತ್ತು ಹಾಡುಗಳಿಂದ ಸಂಚಲನ ಸೃಷ್ಟಿಸಿರುವ ರಿಯಲ್ ಸ್ಟಾರ್ ಉಪೇಂದ್ರ , ರಚಿತಾರಾಮ್ ಅಭಿನಯದ ,ಸ್ಟಾರ್ ನಿರ್ದೇಶಕ ಆರ್.ಚಂದ್ರು ನಿರ್ದೇಶನದ ಐ ಲವ್ ಯು ಚಿತ್ರದ ಬಗ್ಗೆ ಈಗಾಗಲೇ ಉತ್ತಮ ಟಾಕ್ ಇದೆ. ಟ್ರೈಲರ್ ನೋಡಿರುವ ಸಿನಿ ರಸಿಕರು ಐ ಲವ್ ಯು ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚು ಮಾಡಿದ್ದರು. ಕರ್ನಾಟಕ ಮಾತ್ರವಲ್ಲದೇ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಸಹ ಐ ಲವ್ ಯು ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಾಗಿದ್ದು ಸಿನಿ ರಸಿಕರು ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದರು.

ಇದೀಗ ಉಪೇಂದ್ರ ಅಭಿಮಾನಿಗಳಿಗೆ ಚಿತ್ರಮಂದಿರಗಳಲ್ಲಿ ಉಪೇಂದ್ರ ಮತ್ತು ಆರ್.ಚಂದ್ರು ಕಾಂಬಿನೇಷನ್ ಕಣ್ತುಂಬಿಕೊಳ್ಳುವ ಅವಕಾಶ ಒದಗಿ ಬಂದಿದೆ. ಈ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ, ರಚಿತಾರಾಮ್ ,ಸೋನು ಗೌಡ ಜೊತೆಗೆ ತೆಲುಗಿನ ಖ್ಯಾತ ನಟರಾದ ಬ್ರಹ್ಮಾನಂದಂ ಸಹ ಅಭಿನಯಿಸಿದ್ದಾರೆ. ಕುಟುಂಬ ಸಮೇತ ನೋಡುವ ಸದಭಿರುಚಿಯ ಸಿನಿಮಾ ನಿರ್ದೇಶಿಸಿ ಹೆಸರುವಾಸಿಯಾಗಿರುವ ಆರ್.ಚಂದ್ರು ಈ ಸಿನಿಮಾ ಮೂಲಕ ಯುವ ಜನತೆ ಹಾಗೂ ಸಾಮಾಜಿಕವಾಗಿ ಒಂದೊಳ್ಳೆ ಸಂದೇಶ ನೀಡುವ ಸಿನಿಮಾ ಮಾಡಿರುವುದು ಟ್ರೈಲರ್ ಮೂಲಕ ಗೊತ್ತಾಗುತ್ತಿದೆ.

ಆದರೆ ಇದು ಉಪೇಂದ್ರ ಅಭಿಮಾನಿಗಳನ್ನು ಗಮನದಲ್ಲಿರಿಸಿಕೊಂಡು ಸಹ ಸಿನಿಮಾ ಮಾಡಲಾಗಿದ್ದು ಐ ಲವ್ ಯು ಉಪ್ಪಿ ಸ್ಟೈಲ್ ನ ಚಂದ್ರು ಟಚ್ ಸಿನಿಮಾ ಎಂಬ ಮಾತುಗಳಿದ್ದು ಎಲ್ಲಾ ಕುತೂಹಲಕ್ಕೂ ಇದೇ ಶುಕ್ರವಾರ ತೆರೆ ಬೀಳಲಿದೆ. ಅಂದಹಾಗೆ ಕನ್ನಡದ ಬ್ಲಾಕ್‌ಬಸ್ಟರ್ ಕೆಜಿಎಫ್ ಚಿತ್ರದ ನಂತರ ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಆರ್. ಚಂದ್ರು ತಮ್ಮ ಕನಸಿನ ಐ ಲವ್ ಯೂ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಕೋಟ್ಯಾಂತರ ವೆಚ್ಚದಲ್ಲಿ ಐ ಲವ್ ಯು ಚಿತ್ರವನ್ನು ನಿರ್ಮಾಣ ಮಾಡಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here