ಇದೇ ಶುಕ್ರವಾರ ರಾಜ್ಯಾದ್ಯಂತ ಡಾ.ಶಿವರಾಜಕುಮಾರ್ ನಟನೆಯ ಬಹುನಿರೀಕ್ಷೆಯ ರುಸ್ತುಂ ಸಿನಿಮಾ ತೆರೆಗೆ ಬರುತ್ತಿದೆ. ರುಸ್ತುಂ ಕನ್ನಡ ಚಿತ್ರೋದ್ಯಮ ಮಾತ್ರವಲ್ಲದೆ ಬಾಲಿವುಡ್ ಟಾಲಿವುಡ್ ಅಂಗಳದಲ್ಲಿ ಸಹ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಭಾರತದ ಪ್ರಸಿದ್ಧ ಸಾಹಸ ನಿರ್ದೇಶಕ ರವಿವರ್ಮ ಮೊದಲ ಬಾರಿಗೆ ನಿರ್ದೇಶನ ಮಾಡುವ ಮೂಲಕ ರುಸ್ತುಂ ಚಿತ್ರದಿಂದ ನಿರ್ದೇಶನದಲ್ಲಿ ಅಗ್ನಿ ಪರೀಕ್ಷೆಗೆ ಇಳಿದಿದ್ದಾರೆ. ಖ್ಯಾತ ನಿರ್ಮಾಣ ಸಂಸ್ಥೆಯಾದ ಜಯಣ್ಣ ಕಂಬೈನ್ಸ್ ನಿರ್ಮಾಣ ಮಾಡಿರುವ ರುಸ್ತುಂ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಮತ್ತು ಟಗರು ಖ್ಯಾತಿಯ ಮಹೇನ್ ಸಿಂಹ ಕ್ಯಾಮರಾಮೆನ್ ಆಗಿ ಮತ್ತೆ ಶಿವಣ್ಣ ಜೊತೆ ಕೆಲಸ ಮಾಡಿದ್ದಾರೆ.

ಕನ್ನಡ ಚಿತ್ರರಂಗ ಸೇರಿದಂತೆ ಬಾಲಿವುಡ್ ಮತ್ತು ಟಾಲಿವುಡ್ ನಲ್ಲೂ ಸಾಕಷ್ಟು ಹೆಸರು ಮಾಡಿರುವ ರವಿವರ್ಮ ಅವರ ಮೊದಲ ನಿರ್ದೇಶನದ ಕನಸಿನ ಚಿತ್ರಕ್ಕೆ  ಡಾ.ಶಿವಣ್ಣ ಜೀವ ತುಂಬಿದ್ದಾರೆ. ರುಸ್ತುಂ ಚಿತ್ರದಲ್ಲಿ ಡಾ. ಶಿವರಾಜಕುಮಾರ್ ಅವರ ಜೊತೆಗೆ ಬಾಲಿವುಡ್ ನ ಖ್ಯಾತ ನಟ ವಿವೇಕ್ ಓಬೆರಾಯ್ , ಶ್ರದ್ಧಾ ಶ್ರೀನಾಥ್ , ಮಯೂರಿ ಮತ್ತು ವಿಶೇಷ ಪಾತ್ರದಲ್ಲಿ ರಚಿತಾರಾಮ್ ಸಹ ಅಭಿನಯಿಸಿದ್ದಾರೆ.

ಟಗರು ಚಿತ್ರದ ಬಳಿಕ ಶಿವರಾಜಕುಮಾರ್ ಅವರು ಮತ್ತೊಮ್ನೆ ಪೋಲಿಸ್ ಅಧಿಕಾರಿಯಾಗಿದ್ದು ರುಸ್ತುಂ ಸಿನಿಮಾವನ್ನು ಬಿಹಾರ್ , ಪುಣೆ , ಗೋವಾ ಸೇರಿದಂತೆ ಹಲವಾರು ಭಾಗಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಈಗಾಗಲೇ ರುಸ್ತುಂ ಚಿತ್ರದ ಮೂರು ಹಾಡುಗಳು‌ ಬಿಡುಗಡೆಯಾಗಿ ಸಾಕಷ್ಟು ಹೆಸರು ಮಾಡಿದ್ದು ಇಂದು ರುಸ್ತುಂ ಚಿತ್ರದ ಟೈಟಲ್ ಟ್ರಾಕ್ ರಿಲೀಸ್ ಆಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here