ಕೊರೊನಾ ವಿರುದ್ಧ ಹೋರಾಟದಲ್ಲಿ ದೇಶದಾದ್ಯಂತ ಅಳವಡಿಸಲಾಗಿದ್ದ ಲಾಕ್ ಡೌನ್ ನಲ್ಲಿ ಇದೀಗ
ಕೇಂದ್ರದ ಮಾರ್ಗಸೂಚಿಯಂತೆ ಕೆಲವೊಂದಕ್ಕೆ ಸಡಿಲಿಕೆ ಮಾಡಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ. ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಸಡಿಲಿಕೆ ಇವತ್ತು ಮಧ್ಯರಾತ್ರಿಯಿಂದಲೇ ಜಾರಿಯಾಗುವುದೆಂದು ತಿಳಿಸಿದ್ದಾರೆ. ಕೇಂದ್ರ ಗೃಹ ಇಲಾಖೆಯ ಮಾರ್ಗಸೂಚಿ ಮತ್ತು ಅನುಮತಿಯ ಮೇರೆಗೆ ನಮ್ಮ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದೂ ಯಡಿಯೂರಪ್ಪ ಹೇಳಿದ್ದಾರೆ. ಈ ಸಡಿಲಿಕೆ ರೆಡ್ ಜೋನ್ ಅಥವಾ ಕಂಟೈನ್ಮೆಂಟ್ ಜೋನ್ ಮತ್ತು ಹಾಟ್ ಸ್ಪಾಟ್ ಗಳಿಗೆ ಅನ್ವಯ ಆಗುವುದಿಲ್ಲ ಎಂದು ತಿಳಿಸಿದ್ದಾರೆ.

ಲಾಕ್ ಡೌನ್ ಸಡಿಲಿಕೆಯಲ್ಲಿ ವಿನಾಯಿತಿ ದೊರೆತಿರುವುದು ಯಾವುವೆಂದರೆ, ಕೃಷಿ, ಮೀನುಗಾರಿಕೆ, ಬಿತ್ತನೆ ಬೀಜ ಸಾಗಾಟ, ಮಾರಾಟಕ್ಕೂ ಮತ್ತು ಎಪಿಎಂಸಿ ಗಳಿಗೂ ಲಾಕ್ ಡೌನ್ ನಿಂದ ಸಂಪೂರ್ಣ ವಿನಾಯಿತಿ ಇದೆ. ಶೇ.50 ರಬ್ಬರ್ ಬೆಳೆ ಕಾರ್ಮಿಕರಿಗೆ ಅನುಮತಿ ಇದೆ ಆದರೆ ಅವರ ಬಳಿ, ಪಾಸ್ ಇರಬೇಕು. ನರೇಗಾ ಯೋಜನೆ ಮೂಲಕ ನೀರಾವರಿ ಕಾಮಗಾರಿಗಳಿಗೆ ಅನುಮತಿ ನೀಡಲಾಗಿದೆ.
ಆರೋಗ್ಯ ಸಂಬಂಧಿ ಸೇವೆಗಳಿಗೆ ವಿನಾಯಿತಿ, ಔಷಧ ಮಳಿಗೆ, ಮಾರಾಟಕ್ಕೂ ಅನುಮತಿ ಇದೆ.
ಪ್ಲಂಬರ್ ಸೇವೆ, ಲಾರಿ ಡ್ರೈವರ್ ಗಳಿಗೆ, ವಾಹನ ರಿಪೇರಿಗಾಗಿ ಅವಕಾಶ ಉಂಟು ಕೇಬಲ್ ಆಪರೇಟರ್ ಗಳ ಓಡಾಟಕ್ಕೆ ವಿನಾಯಿತಿ ಇದೆ. ಕಾರ್ಪೆಂಟರ್, ಇತರೆ ಸೇವೆಗಳಿಗೆ, ಡಾಬಾಗಳಿಗೆ ಅನುಮತಿ ನೀಡಲಾಗಿದೆ.
ಆದರೆ ಮಾಸ್ಕ್ ಧರಿಸುವುದು ಕಡ್ಡಾಯ.

ಆಯಾ ಜಿಲ್ಲೆಗಳ ಒಳಗೆ ಕಾರ್ ಗಳ ಸಂಚಾರಕ್ಕೆ ಅನುಮತಿ ಇದೆ. ಅಂತರ್ ಜಿಲ್ಲಾ ಸಂಚಾರಕ್ಕೆ ಅವಕಾಶವನ್ನು ನೀಡಲಾಗಿಲ್ಲ. ಕಟ್ಟಡ ಕಾರ್ಮಿಕರಿಗೆ ಅವಕಾಶ ನೀಡಲಾಗಿದೆ. ಬ್ಯಾಂಕಿಂಗ್ ಸೇವೆ ಮತ್ತು ಎಲ್ಲ ಸರ್ಕಾರಿ ಕಚೇರಿಗಳಿಗೂ ಲಾಕ್ ಡೌನ್ ನಿಂದ ವಿನಾಯಿತಿ ನೀಡಲಾಗಿದೆ. ಮನೆಯಿಂದ ಆಫೀಸ್ ಗಳಿಗೆ ಓಡಾಡಲು ಅನುಮತಿ ಇದೆ. ಎಟಿಎಂಗಳೂ ಕಾರ್ಯ ನಿರ್ವಹಿಸುತ್ತವೆ. ಎಟಿಎಂ ಗಳಿಗೆ ಹಣ ಸಾಗಾಟ ಮಾಡೋ ವಾಹನಗಳಿಗೂ ವಿನಾಯಿತಿ ನೀಡಲಾಗಿದೆ. ತುರ್ತು ಮತ್ತು ಅಗತ್ಯ ಸೇವೆಗಳಿಗೆ ಸರ್ಕಾರ ಅನುಮತಿ ನೀಡಲಾಗಿದೆ.
ರಸ್ತೆ, ಕಟ್ಟಡ ಕಾಮಗಾರಿಗೆ ಸಂಬಂಧಿಸಿದಂತೆ ಸಿಮೆಂಟ್, ಜಲ್ಲಿ ಕಲ್ಲು ,ಮಣ್ಣು, ಕಬ್ಬಿಣ ಸೇರಿದಂತೆ ಕೆಲ ಸಾಮಗ್ರಿಗಳ ಸಾಗಾಟಕ್ಕೆ ಅವಕಾಶವಿದೆ.
ಫುಡ್ ಡೆಲಿವರಿ ಮಾಡೋ ಹೋಟೇಲ್ ಮತ್ತು ಸಿಬ್ಬಂದಿಗೆ ಅವಕಾಶವಿದೆ. ಸ್ವ – ಉದ್ಯೋಗಸ್ಥ ಅಂಗಡಿಗಳಿಗೆ, ಸಣ್ಣ ಪುಟ್ಟ ವ್ಯಾಪಾರಕ್ಕೆ ಮತ್ತು ಅಗತ್ಯ ದಿನಸಿ (ಕಿರಾಣಿ) ಅಂಗಡಿಗಳಿಗೆ ವಿನಾಯಿತಿ
ಸಿಮೆಂಟ್ ಅಂಗಡಿಗಳಿಗೂ ವಿನಾಯಿತಿ.
ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು 20 ಜನರಿಗೆ ಮಾತ್ರ ಅವಕಾಶ.

ಲಾಕ್ ಡೌನ್ ಸಡಿಲಿಕೆ ನಂತರ ವಿನಾಯ್ತಿ ಯಾವುದಕ್ಕೆ ನೀಡಲಾಗಿಲ್ಲ ಎನ್ನುವುದಾದರೆ, ಬಸ್, ರೈಲು, ವಿಮಾನ, ಆಟೋ, ಕ್ಯಾಬ್, ಸಂಚಾರಕ್ಕೆ ಲಾಕ್ ಡೌನ್ ಸಡಿಲಿಕೆ ಇಲ್ಲ. ಮಾರ್ಗಸೂಚಿಯ ಅನ್ವಯ ಪಾಸ್ ಪಡೆದ ಬೈಕ್ ಸಂಚಾರ ಹೊರತುಪಡಿಸಿ ಬೆರೆ ಯಾವುದೇ ಬೈಕ್ ಗಳ ಸಂಚಾರಕ್ಕೆ ಅನುಮತಿ ಇಲ್ಲ,
ಚಿತ್ರಮಂದಿರಗಳು, ಮಾಲ್ ಗಳು, ಸಲೂನ್ ಗಳು ತೆರೆಯಲು ಅವಕಾಶವಿಲ್ಲ. ಮದ್ಯ ಮಾರಾಟಕ್ಕೂ ಅವಕಾಶವಿಲ್ಲ. ಐಟಿ – ಬಿಟಿ ವಲಯಕ್ಕೆ ಕೂಡಾ ಯಾವುದೇ ರೀತಿಯಲ್ಲಿ ವಿನಾಯಿತಿ ನೀಡಿಲ್ಲ.
ಶಾಲಾ – ಕಾಲೇಜುಗಳನ್ನು ಪ್ರಾರಂಭಿಸುವುದಕ್ಕೂ ಅನುಮತಿ ಇಲ್ಲ. ಯಾವುದೇ ಸಭೆ, ಸಮಾರಂಭಗಳನ್ನು ನಡೆಸುವಂತಿಲ್ಲ.‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here