ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರು ನೀಡಿರುವ ಕರೆಗೆ ಓಗೊಟ್ಟಿರುವ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದಿನಿಂದ ಉಪವಾಸ ಮಾಡುವ ನಿರ್ಧಾರವನ್ನು ಮಾಡಿದ್ದಾರೆ. ಬಿಜೆಪಿ ಸಂಸ್ಥಾಪನಾ ದಿನವಾದ ನಿನ್ನೆ ಬಿಜೆಪಿಯ ರಾಷ್ಟ್ರಾಧ್ಯಕ್ಷರು ತಮ್ಮ 18 ಕೋಟಿ ಕಾರ್ಯಕರ್ತರಿಗೆ ಸಂದೇಶವೊಂದನ್ನು ರವಾನಿಸಿದ್ದರು. ಇಡೀ ದೇಶ ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ಬಡವರು, ನಿರ್ಗತಿಕರು, ದಿನಗೂಲಿ ಕಾರ್ಮಿಕರು ಒಂದು ಹೊತ್ತಿನ ಊಟಕ್ಕಾಗಿ ಕೂಡಾ ಪರದಾಡುವಂತಹ ಪರಿಸ್ಥಿತಿ ಎದುರಾಗಿದ್ದು, ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿನಿತ್ಯ ಒಂದು ಹೊತ್ತು ಉಪವಾಸ ಮಾಡಿ ಎಂದು ಕರೆ ನೀಡಿದ್ದರು.

ಹೀಗೆ ಒಂದು ಹೊತ್ತು ಉಪವಾಸ ಮಾಡುವ ಜೊತೆಗೆ ಬಿಜೆಪಿ ಕಾರ್ಯಕರ್ತರು ಪ್ರತಿಯೊಬ್ಬರು ಪ್ರತಿದಿನ ಅಗತ್ಯವಿರುವ ಐದು ಜನಕ್ಕೆ ಆಹಾರದ ಪೊಟ್ಟಣಗಳನ್ನು ಹಂಚುವಂತೆ ಕೂಡಾ ಸಂದೇಶವನ್ನು ನೀಡಲಾಗಿತ್ತು. ಇದೇ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದಿನಿಂದ ತಾವು ಒಂದು ಹೊತ್ತು ಉಪವಾಸವನ್ನು ಮಾಡಲು ಮುಂದಾಗಿದ್ದಾರೆ. ಲಾಕ್ ಡೌನ್ ಮುಗಿಯುವ ತನಕ ರಾತ್ರಿ ಒಂದು ಹೊತ್ತು ಅವರು ತಮ್ಮ ಉಪವಾಸ ಮಾಡಲಿದ್ದಾರೆ. ಅಲ್ಲದೆ ಅವಶ್ಯಕತೆ ಇರುವವರಿಗೆ ಆಹಾರ ಪೊಟ್ಟಣಗಳನ್ನು ನೀಡುವ ನಿರ್ಧಾರ ಕೂಡಾ ಮಾಡಿದ್ದಾರೆ ಎನ್ನಲಾಗಿದೆ.

ಮುಖ್ಯಮಂತ್ರಿ ಅವರು ಮಾತನಾಡುತ್ತಾ ದೇಶದಲ್ಲಿ ಒಟ್ಟು 18 ಕೋಟಿ ಬಿಜೆಪಿ ಕಾರ್ಯಕರ್ತರು ಇದ್ದು ಅವರ ಮೇಲೆ ಯಾವುದೇ ರೀತಿಯ ಒತ್ತಡವನ್ನು ಹೇರಲಾಗಿಲ್ಲ. ರಾಷ್ಟ್ರೀಯ ಅಧ್ಯಕ್ಷರು ನೀಡಿರುವ ಕರೆಗೆ ಸ್ವಯಂ ಪ್ರೇರಿತನಾಗಿ ತಾನು ಉಪವಾಸ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ. ಈ ಕಾರ್ಯ ಬಿಜೆಪಿಗೆ ಮಾತ್ರ ಸೀಮಿತವಾಗಿರದೆ ರಾಷ್ಟ್ರದ ಎಲ್ಲಾ ರಾಜಕೀಯ ಪಕ್ಷಗಳು, ಹಾಗೂ ಉಳ್ಳವರು ಕೂಡಾ ಮಾಡಿದರೆ ಲಾಕ್ ಡೌನ್ ಅವಧಿಯಲ್ಲಿ ಯಾರೂ ಹಸಿವಿನಿಂದ ಕಂಗಲಾಗಲಾರರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here