ಸುಪ್ರಸಿದ್ಧವಾದ ಹಾಗೂ ಅಪಾರ ಭಕ್ತರ ಆರಾಧನೆಗೆ ಹೆಸರಾಗಿರುವ ಹಾಸನಾಂಬ ದೇವಿಯ ದರ್ಶನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಾಳೆಯಿಂದ ದೇವಿಯು ತನ್ನ ದರ್ಶನಕ್ಕಾಗಿ ನಾಡಿದ ವಿವಿಧ ಭಾಗಗಳಿಂದ ಬರುವ ತನ್ನ ಭಕ್ತರಿಗೆ ದರ್ಶನ ನೀಡಲಿದ್ದಾಳೆ.
ಅಕ್ಟೋಬರ್ 17 ರಿಂದ 29 ರವರೆಗೆ ಈ ಬಾರಿ ಹಾಸನಾಂಬಾ ದೇವಿಯನ್ನು ದರ್ಶಿಸಬಹುದಾಗಿದ್ದು, ಆಲಯದ ಬಾಗಲು ನಾಳೆ ತೆರೆಯಲಿದೆ. ಒಟ್ಟು, ಹದಿಮೂರು ದಿನಗಳ ಕಾಲ ಹಾಸನಾಂಬೆಯು ತನ್ನ ಭಕ್ತರಿಗೆ ದರ್ಶನ ನೀಡಲಿದ್ದಾಳೆ. ಹದಿಮೂರು ದಿನಗಳಲ್ಲಿ ಮೊದಲ ಹಾಗೂ ಕೊನೆಯ ದಿನ ಭಕ್ತರಿಗೆ ದೇವಿಯ ದರ್ಶನ ಇರುವುದಿಲ್ಲ. ಇನ್ನುಳಿದ ದಿನಗಳಲ್ಲಿ ಭಕ್ತರ ದರ್ಶನಕ್ಕೆ ಅವಕಾಶವನ್ನು ನೀಡಲಾಗುತ್ತಿದೆ.

ನಾಳೆ ಅಂದರೆ ಅಶ್ವೀಜ ಮಾಸದ ಮೊದಲ ಗುರುವಾರ ಮಧ್ಯಾಹ್ನ 12.30 ಕ್ಕೆ ಅಮನವರ ಆಲಯದ ಗರ್ಭಗುಡಿ ಬಾಗಿಲು ತೆರೆಯಲಿದ್ದು, ದೇವಿಯ ದರ್ಶನಕ್ಕೆ ರಾಜ್ಯದ ಇತರೆ ಜಿಲ್ಲೆಗಳು ಮಾತ್ರವಲ್ಲದೆ, ಹೊರ ರಾಜ್ಯಗಳಿಂದಲೂ ಕೂಡ ಭಕ್ತರು ದೇವಿಯ ದರ್ಶನ ಪಡೆಯಲು ಬರವರು. ಆಲಯದ ಬಾಗಿಲು ತೆರೆದ ಮೇಲೆ ಇಲ್ಲಿಗೆ ಭಕ್ತಸಾಗರ ಹರಿದು ಬರುವುದು ಪ್ರತಿ ಬಾರಿಯ ವಿಶೇಷವೇ ಆಗಿದೆ. ಹಾಸನಾಂಬೆಯ ದರ್ಶನ ವರ್ಷಕ್ಕೊಮ್ಮೆ ಮಾತ್ರ ಸಾಧ್ಯವಿರುತ್ತದೆ. ಆದ್ದರಂದಲೇ ಪ್ರತಿ ವರ್ಷ ಸಾವಿರಾರು ಭಕ್ತರು ಇಲ್ಲಿಗೆ ವಿವಿಧ ಸ್ಥಳಗಳಿಂದ ಆಗಮಿಸುತ್ತಾರೆ.

ದೇವಿಯ ದರ್ಶನ ಪ್ರತಿದಿನ ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 1.30 ಮತ್ತು ಮಧ್ಯಾಹ್ನ 3.30 ರಿಂದ ದಿನ ಮುಕ್ತಾಯದವರೆಗೂ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಅಲ್ಲದೆ ವಿಶೇಷ ದರ್ಶನಕ್ಕಾಗಿ 300 ಹಾಗೂ 1000 ರೂ. ಗಳ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ಹಾಸನ ಜಿಲ್ಲಾಡಳಿತ ಕೂಡಾ ಭಕ್ತರಿಗೆ ಅಗತ್ಯವಿರುವ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವತ್ತ ಸೂಕ್ತವಾದ ಗಮನ ವಹಿಸಿದೆ. ದೇವಾಲಯದೊಳಗೆ ಹಾಗೂ ಸುತ್ತಮುತ್ತ ಸಿಸಿ ಟಿವಿ ಅಳವಡಿಸಲಾಗಿದ್ದು, ಬಿಗಿ ಪೋಲಿಸ್ ಬಂದೋಬಸ್ತ್ ಕೂಡಾ ನೀಡಲಾಗಿದೆ.‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here