ರಾಹುಲ್​ ಗಾಂಧಿ ಹಾಗೂ ಪ್ರತಿಪಕ್ಷ ನಾಯಕರ ತಂಡ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದು ಮಾಡಿದ ನಂತರ, ಅಲ್ಲಿನ ಪರಿಸ್ಥಿತಿ ಹೇಗಿದೆ? ಎಂದು ನೋಡಲು ನಿನ್ನೆ ಕಾಶ್ಮೀರಕ್ಕೆ ತೆರಳಿದ್ದರಾದರೂ, ಅವರನ್ನು ವಿಮಾನ ನಿಲ್ದಾಣದಿಂದಲೇ ದೆಹಲಿಗೆ ವಿಮಾನದಲ್ಲಿ ವಾಪಸ್ಸು ಕಳುಹಿಸಲಾಯಿತು. ಆ ಸಂದರ್ಭದಲ್ಲಿ ಅವರು ದೆಹಲಿಗೆ ಮರಳುವಾಗ, ವಿಮಾನದಲ್ಲಿ ಒಬ್ಬ ಮಹಿಳೆ ನಿಂತುಕೊಂಡು ಅಳುತ್ತ ತಮ್ಮ ಕಷ್ಟ ಹೇಳುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಆಕೆ ಮಾತನಾಡುವಾಗ ಸುತ್ತಲೂ ಜನರು ನೆರೆದಿದ್ದಾರೆ. ಕೆಲವರು ಅವರನ್ನು ಸಮಾಧಾನ ಮಾಡುತ್ತಿದ್ದರೆ, ಹಲವರು ಅದನ್ನು ವಿಡಿಯೋ ಮಾಡಿಕೊಳ್ಳುತ್ತಿರುವುದನ್ನು ಗಮನಿಸಬಹುದಾಗಿದೆ.

ಆಕೆ ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ಹೇಳುತ್ತಾ ನಮ್ಮ ಮಕ್ಕಳು ಮನೆಯಿಂದ ಹೊರಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಅಲ್ಲದೆ ನನ್ನ ಸೋದರ ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆದರೆ ಕಳೆದ 10 ದಿನಗಳಿಂದ ನಮಗೆ ಆಸ್ಪತ್ರೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಆಕೆ ದುಃಖ ಹೊರಹಾಕಿದ್ದಾರೆ. ನಾವು ತುಂಬ ಬಹಳ ತೊಂದರೆ ಅನುಭವಿಸುತ್ತಿದ್ದೇವೆ ಎಂದಿದ್ದಾರೆ ಆಕೆ. ಮಾತ್ರವಲ್ಲದೆ ಆಕೆ ಸಿಟ್ಟಿನಿಂದ ರಾಹುಲ್​ ಗಾಂಧಿ ಅವರ ಬಳಿ ಮಾತನಾಡಿರುವುದು ಅಲ್ಲಿ ತಿಳಿಯುತ್ತಿದರೆ. ಆಕೆಯ ಮಾತು ಕೇಳಿದ ರಾಹುಲ್​ ಗಾಂಧಿ ಅವರು ಆಕೆಯ ಕೈ ಹಿಡಿದು ಸಮಾಧಾನ ಮಾಡಿದರು.

ಈ ವೇಳೆ ಅಲ್ಲಿದ್ದ ಗುಲಾಂ ನಬಿ ಆಜಾದ್​, ಆನಂದ್ ಶರ್ಮಾ, ಕೆ.ಸಿ.ವೇಣುಗೋಪಾಲ್​ ಮತ್ತಿತರರೂ ಕೂಡ ಸಮಾಧಾನದಿಂದ ಮಹಿಳೆಯು ಹೇಳಿದ ಮಾತುಗಳನ್ನು ಕೇಳಿಸಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಜಮ್ಮುಕಾಶ್ಮೀರ ರಾಜ್ಯಪಾಲ ಸತ್ಯಪಾಲ ಮಲ್ಲಿಕ್​ ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸಿದೆ ಎಂದು ರಾಹುಲ್​ ಗಾಂಧಿ ಅವರಿಗೆ ಕಾಶ್ಮೀರಕ್ಕೆ ಆಹ್ವಾನ ನೀಡಿದ ಹಿನ್ನೆಲೆಯಲ್ಲಿ ನಿನ್ನೆ ಅವರು ಅಲ್ಲಿಗೆ ತೆರಳಿದ್ದರು. ಆದರೆ ಅವರನ್ನು ವಿಮಾನ ನಿಲ್ದಾಣದಿಂದಲೇ ವಾಪಸ್ಸು ಕಳುಹಿಸಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here