Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

G20 ಶೃಂಗಸಭೆ: ವಿವಿಧ ದೇಶಗಳ ಗಣ್ಯರ ಸ್ವಾಗತಕ್ಕೆ ಸಿದ್ದಗೊಂಡ ನವದೆಹಲಿ

ನವದೆಹಲಿ: ಸೆಪ್ಟೆಂಬರ್​ 9 ರಿಂದ ಆರಂಭವಾಗುವ ಜಿ-20 ಶೃಂಗಸಭೆಗೆ ನವದೆಹಲಿ ಸಜ್ಜುಗೊಂಡಿದೆ. ಭಿತ್ತಿ ಚಿತ್ರಗಳು, ಬೀದಿ ದೀಪಗಳಿಂದ ಇಡೀ ನಗರ ಮದುವಣಗಿತ್ತಿಯಂತೆ ಕಂಗೋಳಿಸುತ್ತಿದೆ. ವಿವಿಧ ರಾಷ್ಟ್ರಗಳಿಂದ ಆಗಮಿಸುವ ಗಣ್ಯರ ಸ್ವಾಗತಕ್ಕೆ ಸಿದ್ದಗೊಂಡಿದೆ.

ಭಾರತದ ಅಧ್ಯಕ್ಷತೆಯಲ್ಲಿ ನಡೆಯುವ ಐತಿಹಾಸಿಕ ಜಿ20 ಶೃಂಗಸಭೆಯಲ್ಲಿ 29 ರಾಷ್ಟ್ರಗಳ ಮುಖ್ಯಸ್ಥರು ಮತ್ತು ಯುರೋಪಿಯನ್ ಒಕ್ಕೂಟದ ಉನ್ನತ ಅಧಿಕಾರಿಗಳು ಮತ್ತು ಆಹ್ವಾನಿತ ದೇಶಗಳು ಮತ್ತು 14 ಅಂತಾರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಮಹತ್ವದ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುನೈಟೆಡ್ ಕಿಂಗ್‌ಡಮ್, ಯುನೈಟೆಡ್ ಸ್ಟೇಟ್ಸ್– ಮತ್ತು ಯುರೋಪ್‌ ಸೇರಿದಂತೆ 19 ದೇಶಗಳು ಭಾಗವಹಿಸಲಿದ್ದಾರೆ.ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಸ್ಪ್ಯಾನಿಷ್ ಅಧ್ಯಕ್ಷ ಪೆಡ್ರೊ ಸ್ಯಾಂಚೆಝ್ ಜಿ 20 ಶೃಂಗಸಭೆಯಿಂದ ದೂರ ಉಳಿಯಲಿದ್ದಾರೆ ಎನ್ನಲಾಗಿದೆ.

ಸೆಪ್ಟೆಂಬರ್ 9-10 ರಂದು ಎರಡು ದಿನಗಳ ಶೃಂಗಸಭೆಯು ಪ್ರಗತಿ ಮೈದಾನದಲ್ಲಿ ಹೊಸದಾಗಿ ನಿರ್ಮಿಸಲಾದ ಅಂತರರಾಷ್ಟ್ರೀಯ ಸಮಾವೇಶ ಮತ್ತು ಪ್ರದರ್ಶನ ಕೇಂದ್ರ ನಡೆಯಲಿದೆ. 100,000 ಕ್ಕೂ ಹೆಚ್ಚು ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಗಳು, ಫೈಟರ್ ಜೆಟ್‌ಗಳು, ಸುಧಾರಿತ AI- ಆಧಾರಿತ ಕ್ಯಾಮೆರಾಗಳು, ಜ್ಯಾಮಿಂಗ್ ಸಾಧನಗಳು ಮತ್ತು ಸ್ನಿಫರ್ ಡಾಗ್‌ಗಳು ಇಲ್ಲಿ ಕಾರ್ಯ ನಿರ್ವಹಿಸಲಿದೆ.

ನಗರದಾದ್ಯಂತ ಅಳವಡಿಸಲಾಗಿರುವ 5,000 ಸಿಸಿಟಿವಿ ಕ್ಯಾಮೆರಾಗಳ ನೆಟ್‌ವರ್ಕ್‌ನ ಸಹಾಯದಿಂದ ದೆಹಲಿ ಪೊಲೀಸರು ಶೃಂಗಸಭೆಯ ಸಮಯದಲ್ಲಿ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಲಿದ್ದಾರೆ ಎನ್ನಲಾಗಿದೆ.