ತಿಥಿ ಸಿನಿಮಾ ಮೂಲಕ ಕನ್ನಡ ಪ್ರೇಕ್ಷಕರಿಗೆ ಹೊಸ ಪಾತ್ರದ ಪರಿಚಯವಾಯಿತು. ಹಾಗೆ ಪರಿಚಯ ಆದ ಹೆಸರೇ ಗಡ್ಡಪ್ಪ. ಗಡ್ಡಪ್ಪ ಅವರ ಪಾತ್ರ ತಿಥಿ ಚಿತ್ರಕ್ಕಿಂತ ಜನಪ್ರಿಯವಾಯಿತು. ನಂತರ ಗಡ್ಡಪ್ಪ ಅವರಿಗೇ ಆದ ಅಭಿಮಾಬಿ ವರ್ಗ ಸೃಷ್ಟಿಯಾಯಿತು. ಗಡ್ಡಪ್ಪ ಅವರ ಬಗ್ಗೆ ಸೋಷಿಯಲ್ ಮೀಡಿಯಾ ಗಳಲ್ಲಿ ಸಾಕಷ್ಟು ಟ್ರೆಂಡ್ ಕ್ರೀಯೇಟ್ ಆಯಿತು.ಮೆಮೆ ಪೋಸ್ಟ್ ಗಳಲ್ಲಿ ಕೆಲವರಿಗೆ ಟಾಂಗ್ ಕೊಡೋಕೆ ಇತ್ತೀಚಿನ ದಿನಗಳಲ್ಲಿ ಗಡ್ಡಪ್ಪ ಅವರನ್ನು ಹೆಚ್ಚಾಗಿ ಬಳಸಿಕೊಂಡಿದ್ದು ಗಡ್ಡಪ್ಪ ಅವರ ಜನಪ್ರಿಯತೆಗೆ ಸಾಕ್ಷಿ. ಗಡ್ಡಪ್ಪ ಅವರಿಗೆ ವಯಸ್ಸಾಗಿದೆ. ಆದರೆ ಅವರಿಗೆ ಇರುವ ಜನಪ್ರಿಯತೆ ಕಂಡ ಕೆಲವರು ಗಡ್ಡಪ್ಪ ಅವರನ್ನು ಸಿಕ್ಕ ಸಿಕ್ಕ ಪಾತ್ರಗಳಿಗೆ ಬಳಸಿಕೊಂಡು ಕೈ ಬಿಟ್ಟರು.ಇದೀಗ ಗಡ್ಡಪ್ಪ ಅವರ ಆರೋಗ್ಯದಲ್ಲಿ ಏರುಪೇರಾಗಿದೆ.

ಮಂಡ್ಯ ತಾಲೂಕಿನ ನೊದೇಕೊಪ್ಪಲು ಗ್ರಾಮದವರಾದ ಚನ್ನೇಗೌಡ ಅವರು ಗಡ್ಡಪ್ಪ ಹೆಸರಿನಿಂದಲೇ ಪ್ರಸಿದ್ಧಿ ಪಡೆದಿದ್ದಾರೆ. ತಿಥಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಗಡ್ಡಪ್ಪ ಅವರಿಗೆ ನಾಲ್ಕು ದಿನಗಳ ಹಿಂದೆ ಪಾರ್ಶ್ವವಾಯು ಸಮಸ್ಯೆ ಕಾಣಿಸಿಕೊಂಡಿದೆ. ಇದರಿಂದ ಅವರಿಗೆ ಮಾತನಾಡಲೂ ಕೂಡ ಕಷ್ಟ ಆಗಿದೆ.ಮೊದಲೇ ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ ಗಡ್ಡಪ್ಪ ಅವರ ಆರೋಗ್ಯದಲ್ಲಿ ಏರುಪೇರಾದ್ದರಿಂದ ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಸದ್ಯಕ್ಕೆ ಗಡ್ಡಪ್ಪಗೆ ವೈದ್ಯರು ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿದ್ದಾರೆ. ಗಡ್ಡಪ್ಪಗೆ ಚಿಕಿತ್ಸೆ ನೀಡಿರುವ ವೈದ್ಯರು ಬೆಡ್ ರೆಸ್ಟ್ ತೆಗೆದುಕೊಳ್ಳಲು ಸೂಚಿಸಿದ್ದಾರೆ. ವೈದ್ಯರ ಸಲಹೆಯಂತೆ ಗಡ್ಡಪ್ಪಗೆ ಸಂಬಂಧಿಕರು ಔಷಧೋಪಚಾರ ಮಾಡುತ್ತಿದ್ದಾರೆ.ತಿಥಿ ಸಿನಿಮಾವನ್ನು ಈರೇಗೌಡ ಕಥೆ ರಚಿಸಿ ರಾಮ್ ರೆಡ್ಡಿ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಕರ್ನಾಟಕದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತ್ತು. ಅಷ್ಟೇ ಅಲ್ಲದೇ 63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಪ್ರಾದೇಶಿಕ ಚಲನಚಿತ್ರ ವಿಭಾಗ ಪ್ರಶಸ್ತಿಗಳಲ್ಲಿ ‘ತಿಥಿ’ ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿತ್ತು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here