: ಬೆಂಗಳೂರಿನ ಗಾಂಧಿ ಬಜಾರ್ ನಲ್ಲಿರುವ ವಿದ್ಯಾರ್ಥಿ ಭವನ ಹೆಸರು ಕೇಳುತ್ತಿದ್ದಂತೆಯೇ ಕೆಲವರ ಬಾಯಲ್ಲಿ ನೀರೂರುತ್ತದೆ. ಏಕೆಂದರೆ. ಇಲ್ಲಿನ ತುಪ್ಪದ ಮಸಾಲೆ ದೋಸೆ ಮಹತ್ವದ ಅಂತಹದ್ದು. ದಶಕದ ಇತಿಹಾಸವನ್ನು ಹೊಂದಿರುವ ವಿದ್ಯಾರ್ಥಿ ಭವನ 75ರ ಸಂಭ್ರಮದಲ್ಲಿದೆ.

ಬೆಂಗಳೂರು ನಗರದ ಬೆಳವಣಿಗೆಯ ಜೊತೆ ಜೊತೆಗೆ ಉದ್ಯಾನ ನಗರಿಯ ಸಂಸ್ಕೃತಿಯೊಂದಿಗೆ ತಳುಕಿಹಾಕಿಕೊಂಡಿರುವ ತಿನಿಸುತಾಣ ಈ ವಿದ್ಯಾರ್ಥಿ ಭವನ. ತಿನಿಸು ಪ್ರಿಯರಿಗೆ ಮರೆಯಲಾಗದ ತಾಣ ಕೂಡ ಹೌದು. ಈ ವಿದ್ಯಾರ್ಥಿ ಭವನದಲ್ಲಿ ತಯಾರಿಸಲಾಗುವ ರುಚಿಕರವಾದ ಮಸಾಲೆ ದೋಸೆಯನ್ನು ತಿನ್ನುವ ಸಲುವಾಗಿಯೇ ನಗರದ ಮೂಲೆ ಮೂಲೆಗಳಿಂದ ಜನರು ಇಲ್ಲಿಗೆ ಬರುತ್ತಾರೆ. ದಶಕಗಳಿಂದಲೂ ಕೈಗೆಟುವ ದರದಲ್ಲಿಯೇ ಇಲ್ಲಿನ ಸವಿರುಚಿಗಳನ್ನು ಉಣಬಡಿಸಲಾಗುತ್ತಿದ್ದು, ಎಷ್ಟೇ ಜನ ಇದ್ದರೂ ಸಾಲಿನಲ್ಲಿ ನಿಂತುಕೊಳ್ಳುವ ಜನರು ಇಲ್ಲಿನ ದೋಸೆಯನ್ನು ಸವಿದು ಹೋಗುತ್ತಾರೆ.

 

1943ರಲ್ಲಿ ಉಡುಪಿಯ ಕುಂದಾಪುರ ಮೂಲಕ ವೆಂಕಟರಮಣ ಮತ್ತು ಪರಮೇಶ್ವರ ಎಂಬ ಸಹೋದರರು ಈ ಹೋಟೆಲ್ ನ್ನು ಆರಂಭಿಸಿದ್ದರು. ಈ ವಿದ್ಯಾರ್ಥಿ ಭವನ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಚಳುವಳಿಕಾರರು, ಕಮ್ಯೂನಿಸ್ಟ್ ನಾಯಕರು ಹಾಗೂ ಸಾಹಿತಿ, ನಟರ ನೆಚ್ಚಿನ ತಾಣವಾಗಿತ್ತು. ಮೊದಲು ಸಣ್ಣದಾಗಿ ಆರಂಭವಾಗಿದ್ದ ಈ ಹೋಟೆಲ್ ನಂತರ ನವೀಕರಣಗೊಳಪಟ್ಟು ಸ್ಥಳಾಂತರಗೊಂಡಿದ್ದು 1948ರಲ್ಲಿ ಎಂದು ಹೇಳಲಾಗುತ್ತಿದೆ.

ನವ್ಯ ಹಾಗೂ ನವೋದಯ ಕನ್ನಡ ಸಾಹಿತ್ಯಕ ಪರಂಪರೆಯ ಬಹಳಷ್ಟು ಬರಹಗಳಲ್ಲಿ ವಿದ್ಯಾರ್ಥಿ ಭವನ್ ದೋಸೆಯ ಪ್ರಸ್ತಾಪ ಕೂಡ ಇದೆ. ಇಲ್ಲಿನ ಸುತ್ತಲು ಕಾಲೇಜುಗಳಿದ್ದು, ವಿದ್ಯಾರ್ಥಿಗಳನ್ನು ಈ ವಿದ್ಯಾರ್ಥಿ ಭವನ ಸೆಳೆಯುತ್ತಿದೆ. ವಿದ್ಯಾರ್ಹತೆಗೆಂದು ಬರುವ ವಿದ್ಯಾರ್ಥಿಗಳಂತೂ ಒಂದು ಬಾರಿಯಾದರೂ ಇಲ್ಲಿನ ದೋಸೆಯನ್ನು ಸವಿಯುತ್ತಾರೆ.

1970ರಲ್ಲಿ ಕುಂದಾಪುರದಿಂದ ನಗರಕ್ಕೆ ಆಗಮಿಸಿದ್ದ ರಾಮಕೃಷ್ಣ ಅಡಿಗ ಎಂಬುವವರು ವಿದ್ಯಾರ್ಥಿ ಭವನವನ್ನು ಖರೀದಿ ಮಾಡಿದ್ದರು. ಪ್ರಸ್ತುತ ರಾಮಕೃಷ್ಣ ಅವರ ಪುತ್ರ ಅರುಣ್ ಕುಮಾರ್ ಅಡಿಗ ಎಂದು ಹೋಟೆಲ್ ನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ವಿದ್ಯಾರ್ಥಿ ಭವನದ ಹಿಂದಿರುವ ಕಥೆಯನ್ನು ರಾಮಕೃಷ್ಣ ಅಡಿಗ ಅವರು ವಿವರಿಸಿದ್ದಾರೆ.

ಕುಂದಾಪುರ ಮೂಲದವರಾಗಿದ್ದ ನನ್ನ ತಂದೆ ಹೋಟೆಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಹೋಟೆಲ್ ಮಾಲೀಕರ ಪುತ್ರಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದರು. 1968ರಲ್ಲಿ ಇಬ್ಬರಿಗೂ ವಿವಾಹವಾಗಿತ್ತು.

ಕೆಲ ವರ್ಷಗಳ ಬಳಿಕ ಹೋಟೆಲ್ ವೊಂದರನ್ನು ಆರಂಭಿಸಲು ನನ್ನ ತಂದೆ ಬಯಸಿದ್ದರು. ಈ ವೇಳೆ ವಿದ್ಯಾರ್ಥಿ ಭವನದ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದರು. ನಂತರ ಅದರ ಮೆನುವಿನ ಬಗ್ಗೆ ತಿಳಿದುಕೊಳ್ಳಲು ಆರಂಭಿಸಿದ್ದರು. ಅಂದಿನಿಂದಲೂ ಉಪಹಾರ ಮಂದಿರಕ್ಕೆ ಶುಕ್ರವಾರದಂದು ರಜೆಯನ್ನು ನೀಡಲಾಗುತ್ತಿದೆ. ಶನಿವಾರ ಎಂದಿನಂತೆಯೇ ಕಾರ್ಯಗಳು ನಡೆಯುತ್ತವೆ. ಅಂದಿನಿಂದ ಇಂದಿನವರೆಗೂ ಗುಣಮಟ್ಟದಲ್ಲಾಗಲೀ ಅಥವಾ ರುಚಿಯಲ್ಲಾಗಲೀ ಯಾವುದೇ ಬದಲಾವಣೆಗಳಿಲ್ಲ. ರುಚಿಯಲ್ಲಿ ಬದಲಾವಣೆಗಳಿಲ್ಲದಿರುವುದರಿಂದ ಕೈಗಳ ಬದಲಾವಣೆಯಾದರೂ ಗ್ರಾಹಕರಿಗೆ ಇದರ ಬದಲಾವಣೆಗಳು ತಿಳಿಯುವುದಿಲ್ಲ. ಅಂದು ಒಂದು ದೋಸೆಗೆ 60 ಪೈಸೆ ಇದ್ದು ಎಂದು ಅರುಣ್ ಅವರು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here