ದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಮಹಾತ್ಮ ಗಾಂಧೀಜಿಯವರ 154ನೇ ಜನ್ಮದಿನಾಚರಣೆ ಪ್ರಯುಕ್ತ ದೆಹಲಿಯ ರಾಜ್ಘಾಟ್ಗೆ ಭೇಟಿ ನೀಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ್ದಾರೆ. ಗಾಂಧೀಜಿಯವರ ತತ್ವಗಳು ಇಡೀ ಜಗತ್ತಿಗೆ ಆದರ್ಶವಾಗಿವೆ. ಗಾಂಧಿ ಅವರ ಬೋಧನೆಗಳು ನಮಗೆಲ್ಲ ಮಾರ್ಗದರ್ಶನವಾಗಿವೆ. ಮಹಾತ್ಮ ಗಾಂಧಿ ನಡೆದು ಬಂದ ಹಾದಿ ತತ್ವಗಳು ಜಾಗತಿಕ ಮಟ್ಟದಲ್ಲಿ ಪ್ರಭಾವ ಬೀರಿವೆ. ಮಾನವೀಯತೆ, ಸಹಾನಭೂತಿ ಹೆಚ್ಚಿಸಲು ಪ್ರೇರಣೆ. ಗಾಂಧಿ ಕನಸು ನನಸಾಗಬೇಕಾದರೆ ಈ ನಿಟ್ಟಿನಲ್ಲಿ ನಾವೆಲ್ಲಾ ಜೊತೆಗೂಡಿ ಕೆಲಸ ಮಾಡೋಣ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇಂದು ಗಾಂಧಿ ಜನ್ಮದಿನಾಚರಣೆ ಹಿನ್ನೆಲೆ ಕಾಂಗ್ರೆಸ್ ನಾಯಕರು ದೆಹಲಿಯ ರಾಜ್ಘಾಟ್ಗೆ ಭೇಟಿ ನೀಡಿದ್ದಾರೆ. ಗಾಂಧಿ ಸಮಾಧಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುಷ್ಪಾರ್ಚನೆ ಮಾಡಿ ನಮಿಸಿದ್ದಾರೆ.
ವರದಿಗಾರ ಎ ಚಿದಾನಂದ
Disclaimer: This Story is auto-aggregated by a Syndicated Feed and has not been Created or Edited By City Big News Staff.