ಚಂದನವನದಲ್ಲಿ ಒಂದು ದೊಡ್ಡ ಐತಿಹಾಸಿಕ ಸಿನಿಮಾ ಸಿದ್ಧವಾಗುತ್ತಿದೆ. ಅದೇ ಗಂಡುಗಲಿ ಮದಕರಿ ನಾಯಕ. ಈ ಸಿನಿಮಾ ಬಹು ದಿನಗಳಿಂದ ಜನರ ಕುತೂಹಲವನ್ನು ಕೆರಳಿಸಿತ್ತು. ಈ ಎಲ್ಲಾ ಕುತೂಹಲಗಳಿಗೆ ಉತ್ತರ ಇದೇ ಡಿಸೆಂಬರ್ 6 ರಂದು ಸೆಟ್ಟೇರಲಿದ್ದು ಬೆಂಗಳೂರಿನಲ್ಲಿ ಮುಹೂರ್ತ ನೆರವೇರಲಿದೆ. ಸಂಗೊಳ್ಳಿ ರಾಯಣ್ಣನಾಗಿ ಜನ ಮನವನ್ನು ಗೆದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮದಕರಿ ನಾಯಕನಾಗಿ ಅಬ್ಬರಿಸಲು ಸಿದ್ಧವಾಗಿದ್ದಾರೆ. ಈ ಸಿನಿಮಾವನ್ನು ರಾಕ್ ಲೈನ್ ವೆಂಕಟೇಶ್ ಅವರು ನಿರ್ಮಾಣ ಮಾಡುತ್ತಿದ್ದು, ರಾಜೇಂದ್ರ ಸಿಂಗ್ ಬಾಬು ಅವರು ನಿರ್ದೇಶನ ಮಾಡುತ್ತಿದ್ದು, ನಾದ ಬ್ರಹ್ಮ ಹಂಸಲೇಖ ಸಂಗೀತ ಸಂಯೋಜನೆ ಮಾಡಲಿದ್ದಾರೆ.

ಸಿನಿಮಾದಲ್ಲಿ ಅದ್ದೂರಿ ತಾರಗಣವಿದ್ದು ಸ್ಯಾಂಡಲ್ ವುಡ್ ನ ಹಿರಿಯ ತಾರೆಯರೆಲ್ಲರ ಆಗಮನ ಇಲ್ಲಾಗಲಿದೆ. ಇನ್ನು ಇಂತಹ ಪ್ರತಿಷ್ಠಿತ ಸಿನಿಮಾಕ್ಕೆ ನಾಯಕಿ ಯಾರೆಂಬ ಪ್ರಶ್ನೆ ಮೂಡಿತ್ತು. ಈ ವಿಷಯದಲ್ಲಿ ನಟಿ ರಮ್ಯಾ ದರ್ಶನ್ ಅವರಿಗೆ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಕೂಡಾ ಹರಡಿತ್ತು. ಈ ಸಿನಿಮಾ ಮೂಲಕ ರಮ್ಯ ಅವರು ಸ್ಯಾಂಡಲ್ ವುಡ್ ಗೆ ಮರು ಪ್ರವೇಶ ಮಾಡಲಿದ್ದಾರೆ ಎಂಬ ಸುದ್ದಿ ಕೂಡಾ ಹರಡಿರುವಾಗಲೇ, ಈ ಎಲ್ಲಾ ಸುದ್ದಿಗಳಿಗೆ ಪೂರ್ಣ ವಿರಾಮ ಬಿದ್ದಿದೆ. ಏಕೆಂದರೆ ಈ ಸಿನಿಮಾದ ನಾಯಕಿಯರು ಯಾರೆಂಬ ಸುದ್ದಿ ಹೊರ ಬಂದಿದೆ.

 

ಗಂಡುಗಲಿ ಮದಕರಿ ನಾಯಕ ಸಿನಿಮಾದಲ್ಲಿ ಇಬ್ಬರು ನಾಯಕಿಯರನ್ನು ಆಯ್ಕೆ ಮಾಡಲಾಗಿದೆ. ದರ್ಶನ್ ಅವರ ಜೊತೆ ತೆರೆ ಹಂಚಿಕೊಳ್ಳಲಿರುವ ಇಬ್ಬರು ನಾಯಕಿಯರು ಮತ್ತಾರೂ ಅಲ್ಲ, ದಕ್ಷಿಣದ ಖ್ಯಾತ ನಟಿ ಕೀರ್ತಿ ಸುರೇಶ್ ಮತ್ತು ಅವರ ಜೊತೆ ಮತ್ತೊಬ್ಬ ನಾಯಕಿಯಾಗಿ ಪೂಜಾ ಹೆಗ್ಡೆ ಕೂಡಾ ಜೊತೆಯಾಗಲಿದ್ದಾರೆ. ಇಬ್ಬರು ನಾಯಕಿಯರ ಬಗ್ಗೆ ಮುಹೂರ್ತದ ದಿನ ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ ಎನ್ನಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here