2017 ರಲ್ಲಿ ತೆರೆಕಂಡು ಬಾಕ್ಸಾಫೀಸ್ ನಲ್ಲಿ ಭಾರಿ ಸದ್ದು ಮಾಡಿದ ಚಿತ್ರಗಳು ಇದೇ ಸಂಕ್ರಾಂತಿಗೆ ನಿಮ್ಮ ಮನೆಯ ಕಿರುತೆರೆಯಲ್ಲಿ ಮೊದಲಬಾರಿಗೆ ಪ್ರಸಾರವಾಗಲಿವೆ.ಹೌದು ಈ ಸಂಕ್ರಾಂತಿಗೆ ಕನ್ನಡ ಸಿನಿರಸಿಕರಿಗೆ ಸೂಪರ್ ಹಿಟ್ ಚಿತ್ರಗಳನ್ನು ತೋರಿಸಲು ಸಜ್ಜಾಗಿವೆ ಕನ್ನಡದ ಜನಪ್ರಿಯ ಚಾನಲ್ ಗಳು.ಈ ಬಾರಿ ಬಾರಿ ಪೈಪೋಟಟಿಗೆ ಇಳಿದಿವೆ ಕನ್ನಡದ ಟಾಪ್ ಚಾನಲ್ ಗಳು.ಕಳೆದ ವರ್ಷ ತೆರೆಕಂಡು ಭರ್ಜರಿಯಾಗಿ ಓಪನಿಂಗ್ ಪಡೆದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ದಿನಕರ್ ತೂಗುದೀಪ ಅಭಿನಯದ ಚಕ್ರವರ್ತಿ ಸಿನಿಮಾ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

ಇನ್ನು ಎರಡುವರ್ಷಗಳ ಬಳಿಕ ತೆರೆಕಂಡು ಇತ್ತೀಚೆಗಷ್ಟೇ ಶತದಿನ ಆಚರಿಸಿದ ಆಕ್ಷನ್ ಪ್ರಿನ್ಸ್  ಧೃವಾ ಸರ್ಜ ಅಭಿನಯದ ಬ್ಲಾಕ್ ಬಸ್ಟರ್ ಚಲನಚಿತ್ರ ಭರ್ಜರಿ ಕೂಡ ಸುವರ್ಣ ಟಿವಿಯಲ್ಲಿ ಸಂಕ್ರಾಂತಿಯ ಸಂಜೆ ಪ್ರಸಾರವಾಗುತ್ತಿದೆ.

ಇನ್ನು ಗೋಲ್ಡನ್  ಗಣೇಶ್ ಅಭಿನಯದ ಖ್ಯಾತ ನಿರ್ದೇಶಕ ಯೋಗರಾಜ ಭಟ್ ನಿರ್ದೇಶನದ ಮುಗುಳುನಗೆ ಚಿತ್ರ ಕೂಡ ಜೀ ಕನ್ನಡ ವಾಹಿನಿಯಲ್ಲಿ ಇದೇ ಸಂಕ್ರಾಂತಿಗ ಪ್ರಯುಕ್ತ ಪ್ರಸಾರವಾಗಲಿದ್ದು ಚಿತ್ರರಸಿಕರಿಗೆ ಈ ಬಾರಿ ಕನ್ನಡ ಕಿರುತೆರೆಯಲ್ಲಿ ಹಬ್ಬದ ಸಂಭ್ರಮ ಗ್ಯಾರಂಟಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here