ವಿಘ್ನ ನಿವಾರಕ ಗಣಪತಿಗೆ ಅನೇಕ ಹೆಸರುಗಳಿವೆ. ಅದರಲ್ಲಿ ಏಕದಂತ ಅನ್ನುವುದು ಕೂಡಾ ಒಂದು. ಹಾಗಾದರೆ ಈ ಹೆಸರು ಹೇಗೆ ಬಂತು? ಗಣಪ ಏಕದಂತ ಹೇಗಾದ ಎಂಬುದಕ್ಕೆ ನಮ್ಮ ಪುರಾಣಗಳಲ್ಲಿ ಹೇಳಿರುವ ಮೂರು ಭಿನ್ನ ಕಥೆಗಳನ್ನು ತಿಳಿಯೋಣ ಬನ್ನಿ. ಮೊದಲನೆಯದಾಗಿ ಮಹಾವಿಷ್ಣುವಿನ ಆರನೇ ಅವತಾರವಾದ ಪರಶುರಾಮರು, ಕಾರ್ತ್ಯವೀರಾರ್ಜುನನನ್ನು, ಅವನ ನೆರವಿಗೆ ನಿಂತ ರಾಜರನ್ನು ಕೊಂದ ನಂತರ, ತನ್ನ ಗೆಲುವಿಗೆ ಕಾರಣನಾದ ಮಹಾಶಿವನಿಗೆ ಧನ್ಯವಾದ ಹೇಳಲು ಕೈಲಾಸಕ್ಕೆ ಬಂದಾಗ, ಗಣೇಶನು ತನ್ನ ತಂದೆ ವಿಶ್ರಾಂತಿ ಪಡೆಯುತ್ತಿದ್ದಾರೆಂದು ಪರಶುರಾಮರನ್ನು ತಡೆದಾಗ, ಪರಶು ರಾಮರು ಕೋಪಗೊಂಡು ಗಣೇಶನೊಡನೆ ಯುದ್ಧಕ್ಕೆ ನಿಂತರು. ಆಗ ಅವರು ತಮ್ಮ ಕೊಡಲಿಯನ್ನು ಪ್ರಯೋಗಿಸಿದಾಗ ಅದು ಮಹಾಶಿವನು ನೀಡಿದ್ದ ಆಯುಧವಾದ್ದರಿಂದ ಗಣೇಶನು ಅದನ್ನು ತಡೆಯಲಿಲ್ಲ. ಆಗ ಅದು ತಗುಲಿ ಗಣೇಶನ ಒಂದು ದಂತ ಭಗ್ನ ವಾಯಿತು ಎನ್ನುತ್ತದೆ ಬ್ರಹ್ಮಾಂಡ ಪುರಾಣ‌.

ಎರಡನೆಯ ಕಥೆಯಲ್ಲಿ ವೇದ ವ್ಯಾಸರಿಗೆ ಗಣಪನು ಅವರು ಮಹಾಭಾರತ ಮಹಾಕಾವ್ಯ ರಚಿಸುವಾಗ ಎಲ್ಲೂ‌ ನಿಲ್ಲಿಸದೆ ಹೇಳುತ್ತಲೇ ಇರಬೇಕೆಂದು ನಿಯಮ ವಿಧಿಸಿದ, ಆಗ ವ್ಯಾಸರು ಗಣಪನು ಪ್ರತಿ ಶ್ಲೋಕವನ್ನು ಅರ್ಥಮಾಡಿಕೊಂಡು ಎಲ್ಲೂ ನಿಲ್ಲಿಸದೆ ಬರೆಯಬೇಕು ಎಂದು ಸಿದ್ಧಿ ಪ್ರದಾಯಕನಾದ ಗಣಪನಿಗೆ ಹೇಳಿದರು. ಆಗ ಮಹಾಭಾರತ ಮಹಾಕಾವ್ಯ ಬರೆಯುವಾಗ ಲೇಖನಿಯಾಗಿ ಬಳಸುತ್ತಿದ್ದ ಗರಿಯು ಮುರಿದಾಗ ಗಣೇಶನು ಕೊಟ್ಟ ಮಾತನ್ನು ನಡೆಸಲು, ತನ್ನ ದಂತವನ್ನೇ ಮುರಿದು ಲೇಖನಿಯಾಗಿ ಮಾಡಿಕೊಂಡ ಎಂದು ಒಂದು ಕಥೆಯಲ್ಲಿ ಹೇಳಲಾಗಿದೆ.

ಇನ್ನು ಮೂರನೇ ಕಥೆಯಲ್ಲಿ ಒಮ್ಮೆ ಕುಬೇರನು ಕೊಟ್ಟ ಭೂರಿ ಭೋಜನವನ್ನು ಮುಗಿಸಿಕೊಂಡು, ರಾತ್ರಿ ವೇಳೆ ಕೈಲಾಸಕ್ಕೆ ಮರಳಿ ಬರುತ್ತಿದ್ದ ಗಣಪನ ಹೊಟ್ಟೆ ಒಡೆದು ತಿಂದಿದ್ದ ಮೋದಕಗಳು ಹೊರಗೆ ಬಂದವೆಂದು, ಆತ ಅವನ್ನು ಮತ್ತೆ ಹೊಟ್ಟೆಗೆ ಸೇರಿಸಿ, ತನ್ನ ಹೊಟ್ಟಗೆ ಹಾವನ್ನು ಸುತ್ತಿಕೊಂಡ. ಆಗ ಗಣಪನ ಸ್ಥಿತಿ ನೋಡಿ ಆಗಸದಲ್ಲಿದ್ದ ಚಂದ್ರನು ನಕ್ಕನು. ಚಂದ್ರನು ಹಾಸ್ಯ ಮಾಡಿದ್ದು ನೋಡಿ ಕುಪಿತನಾದ ಗಣಪನು, ತನ್ನ ಒಂದು ದಂತವನ್ನು ಕಿತ್ತು, ಚಂದ್ರನತ್ತ ಎಸೆದ‌ ಆಗ ಚಂದ್ರ ಛಿದ್ರನಾದನು. ಅಲ್ಲದೆ ಗಣೇಶನು, ಚಂದ್ರನು ಇನ್ನೆಂದು ಪೂರ್ಣನಾಗಿ ಕಾಣುವುದಿರಲಿ, ಅವನ ಕಾಂತಿ ಕುಗ್ಗಲಿ ಎಂದು ಶಪಿಸಿದನು‌. ಆದರೆ ನಂತರ ದೇವತೆಗಳ ಕೋರಿಕೆಯಂತೆ ಶಾಪ ಉಪಸಂಹರಿಸಿದರೂ, ಗಣೇಶ ಚತುರ್ಥಿಯಂದ ಚಂದ್ರನನ್ನು ನೋಡುವುದು ಶುಭವಲ್ಲ ಎಂದೇ ಹೇಳಲಾಗಿದೆ‌.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here