ಗಂಗಾ ನದಿಯನ್ನು ಸ್ವಚ್ಛಗೊಳಿಸುವ ಕೇಂದ್ರದ ಯೋಜನೆಗಾಗಿ, ಹಣವನ್ನು ಸಂಗ್ರಹಿಸಲು ಪ್ರಧಾನಿ ಮೋದಿಯವರಿಗೆ ಉಡುಗೊರೆಯಾಗಿ ಬಂದಿರುವ ಶಾಲುಗಳಿಂದ ಹಿಡಿದು ಪ್ರತಿಮೆಗಳವರೆಗೆ , ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರು ಪಡೆದ ಉಡುಗೊರೆಗಳನ್ನು ಹರಾಜು ಮಾಡಲಾಗುತ್ತಿದೆ. ಇನ್ನು ಈ ವಸ್ತುಗಳ ಪ್ರದರ್ಶನವನ್ನು ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ದೆಹಲಿಯ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌ನಲ್ಲಿ ಶನಿವಾರ ಉದ್ಘಾಟಿಸಿದರು. ಮೋದಿಯವರಿಗೆ ಬಂದಿರುವ ಉಡುಗೊರೆಗಳನ್ನು ಕೆಳಗಿನ ಮೇಲ್ ಐಡಿ
ನಲ್ಲಿ ಶನಿವಾರದಿಂದ ಅಕ್ಟೋಬರ್ 3 ರವರೆಗೆ 2,700 ಕ್ಕೂ ಹೆಚ್ಚು ಮೆಮೆಂಟೋಗಳನ್ನು ಹರಾಜು ಮಾಡಲಾಗುತ್ತದೆ.

ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ (ಎನ್‌ಜಿಎಂಎ) ಯಲ್ಲಿ ಬೆಳಿಗ್ಗೆ 11 ರಿಂದ ರಾತ್ರಿ 8 ರವರೆಗೆ “ಸ್ಮೃತಿ ಚಿನ್ಹ್” ಎಂಬ ಹೆಸರಿನ ಪ್ರದರ್ಶನದಡಿಯಲ್ಲಿ ಸುಮಾರು 500 ಮೆಮೆಂಟೋಗಳನ್ನು ಪ್ರದರ್ಶಿಸಲಾಗಿದೆ ಎಂದು ಶ್ರೀ ಪಟೇಲ್ ಅವರು ಹೇಳಿದ್ದಾರೆ.” ಪ್ರದರ್ಶಿತ ಮೆಮೆಂಟೋಗಳನ್ನು ಪ್ರತಿ ವಾರ ಬದಲಾಯಿಸಲಾಗುವುದು ಎನ್ನಲಾಗಿದೆ. ವರ್ಣಚಿತ್ರಗಳು, ಮೆಮೆಂಟೋ, ಶಿಲ್ಪಗಳು, ಶಾಲುಗಳು, ಪಗ್ರಿ, ಜಾಕೆಟ್‌ಗಳು ಮತ್ತು ಸಾಂಪ್ರದಾಯಿಕ ಸಂಗೀತ ಉಪಕರಣಗಳು ಸೇರಿದಂತೆ ಉಡುಗೊರೆ ವಸ್ತುಗಳನ್ನು ಎನ್‌ಜಿಎಂಎ ಆಡಳಿತ ವಿಭಾಗದಲ್ಲಿ ಕಲಾತ್ಮಕವಾಗಿ ಪ್ರದರ್ಶಿಸಲಾಗುತ್ತದೆ” ಎಂದು ಅವರು ಹೇಳಿದರು.

ಮೆಮೆಂಟೋಗಳ ಮೂಲ ಬೆಲೆ ಕನಿಷ್ಠ 200 ರೂ. ಮತ್ತು ಗರಿಷ್ಠ 2.5 ಲಕ್ಷ ರೂ. ಗಳಾಗಿದೆ. ಮೋದಿಯವರು ಸದಾ ಒಂದಲ್ಲಾ ಒಂದು ಸಭೆ,ಸಮಾರಂಭಗಳಲ್ಲಿ ಭಾಗವಹಿಸುವುದರಿಂದ ಅವರಿಗೆ ಅನೇಕ ಉಡುಗೊರೆಗಳು ಬರುತ್ತಲೇ ಇರುತ್ತವೆ‌. ಈಗ ಅದೇ ಉಡುಗೊರೆಗಳನ್ನು ಹರಾಜು ಹಾಕುವ ಮೂಲಕ ಗಂಗಾ ನದಿ ಸ್ವಚ್ಚತಾ ಕಾರ್ಯಕ್ರಮಕ್ಕೆ ಹಣ ಸಂಗ್ರಹಣೆ ಮಾಡುವ ಕೆಲಸ ಆರಂಭವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here