ನಮ್ಮ ಸುತ್ತ ಮುತ್ತ ನಮಗೆ ಪ್ರೇರಣೆಯನ್ನು ನೀಡೋ ಹಲವು ಜನರಿದ್ದಾರೆ. ಆದ್ರೆ ಅವರೆಲ್ಲಾ ಸಾಮಾನ್ಯರಾದ್ದರಿಂದ ನಮಗೆ ಅವರ ಸಾಧನೆಗಳು ಸಾಮಾನ್ಯ ಅನಿಸಿ ಬಿಡುತ್ತೇ ಹೊರತು ಅದನ್ನು ತುಂಬು ಮನಸ್ಸಿನಿಂದ ಒಪ್ಪಿಕೊಳ್ಳೋಕೆ, ಅಂತಹವರಿಗೆ ಸನ್ಮಾನ ಸತ್ಕಾರ ಮಾಡೋಕೆ ನಾವು ಆಲೋಚನೆ ಮಾಡೋದೇ ಇಲ್ಲ. ಎಲ್ಲೋ ಯಾರೋ ಸಾಧನೆ ಮಾಡಿದ್ದಾರೆ ಅಂತ ನೂರು ನುಡಿಗಳನ್ನು ಹೇಳೋ ಜನ ತಮ್ಮ ಸುತ್ತಲೇ ಇರೋ ರಿಯಲ್ ಲೈಫ್ ಹೀರೋ ಗಳನ್ನು ಗುರ್ತಿಸುವ ಪ್ರಯತ್ನ ಮಾಡೋದೆ ಇಲ್ಲ. ಈಗ ನಾವು ಹೇಳ್ತಾ ಇರೋದು ಅಂತಹ ಒಬ್ಬ ರಿಯಲ್ ಲೈಫ್ ನಾಯಕಿಯಾದ ಹೆಣ್ಣಿನ ಬಗ್ಗೆ .

ಅವರ ಹೆಸರು ಗಂಗಮ್ಮ. ಈಕೆಯ ಗಂಡ ವೃತ್ತಿಯಲ್ಲಿ ಕ್ಷೌರಿಕ. ಆತನೇ ಕುಟುಂಬದ ಆದಾಯದ ಮೂಲ. ಆದರೆ ಆತನ ನಿಧನಾನಂತರ ಕುಟುಂಬದ ಜವಾಬ್ದಾರಿ ಗಂಗಮ್ಮನಿಗೆ ಬಂತು‌. ಆಕೆ ಧೃತಿಗೆಡದೆ ಪತಿ ನಡೆಸುತ್ತಿದ್ದ ಕ್ಷೌರಿಕ ವೃತ್ತಿಯನ್ನು ಮುಂದುವರೆಸಿದ್ದಾರೆ. ಕಳೆದ 25 ವರ್ಷಗಳಿಂದಲೂ ಆಕೆ ಈ ವೃತ್ತಿ ನಡೆಸುತ್ತ ಜೀವನ ನಡೆಸುತ್ತಿದ್ದಾರೆ. ನೆಲಮಂಗಲದ ಕರೆಕತ್ತಿಗನೂರು ವಾಸಿಯಾದ ಇವರು ಸಣ್ಣದಾದ ಅಂಗಡಿಯನ್ನು ಇಟ್ಟುಕೊಂಡು ತಮ್ಮ ವೃತ್ತಿಯನ್ನು ನಡೆಸಿದ್ದಾರೆ. ಎಲ್ಲಾ ವಯಸ್ಸಿನವರಿಗೂ ಹೇರ್ ಕಟಿಂಗ್ ಹಾಗೂ ಶೇವಿಂಗನ್ನು ಮಾಡುವ ಈಕೆ ನಿಜಕ್ಕೂ ಒಬ್ಬ ಮಾದರಿ ಹೆಣ್ಣು.

 

 

ಮೂರು ಜನ ಮಕ್ಕಳನ್ನು ಸಾಕುತ್ತಾ, ಪಕ್ಕದ ಊರಿನ ಆಲಯದಲ್ಲಿ ಹರಕೆ ಎಂದು ಬರುವ ಭಕ್ತರ ಮುಡಿ ತೆಗೆಯುವ ಕೆಲಸ ಮಾಡಿ, ದುಡಿದು ತಿನ್ನುವ ಈಕೆ, ಉದ್ಯೋಗ ಮಾಡದೆ ಸೋಮಾರಿಗಳಂತೆ ಸುತ್ತುವವರ ಮುಖಕ್ಕೆ ಹೊಡೆದಂತೆ ಜೀವನ ನಡೆಸಿದ್ದಾರೆ. ಇಂತಹ ಮಹಿಳೆಯರು ನಿಜಕ್ಕೂ ಸಮಾಜಕ್ಕೆ ಘನತೆ ಹಾಗೂ ಗೌರವ. ಇಂತಹವರನ್ನು ಗುರ್ತಿಸಿ, ಗೌರವಿಸಿದರೆ ಇದರಿಂದ ಇನ್ನಷ್ಟು ಮಂದಿಗೆ ಬದುಕಿನ ಮೇಲೆ ಆಸೆ ಹಾಗೂ ಆಶಾಭಾವನೆಯನ್ನು ನಾವು ಮೂಡಿಸಬಹುದು. ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡ ಈಕೆಗೆ ನಮ್ಮದೊಂದ ಸೆಲ್ಯಟ್.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here