ಜಾಗತಿಕ ಮಾರುಕಟ್ಟೆ ಇಂಧನ ದರ ಏರಿಕೆ ಪರಿಣಾಮವಾಗಿ ಅಡುಗೆ ಅನಿಲ ದರಗಳನ್ನು ಬುಧವಾರದಿಂದಲೇ ಜಾರಿಗೆ ಬರುವಂತೆ ಪ್ರತಿ ಸಿಲಿಂಡರ್‌ಗೆ ೧೪೪ ರೂಗಳಷ್ಟು ಹೆಚ್ಚಿಸಲಾಗಿದೆ. ಈ ಹಿಂದೆ ೭೧೪ ರೂಗಳಿದ್ದ ೧೪.೨ಕಿಲೋ ಎಲ್‌ಪಿಜಿ ಸಿಲಿಂಡರ್ ಬೆಲೆ ಇದೀಗ ೮೫೮ ರೂಗಳಿಗೆ ಏರಿಕೆಯಾಗಿದೆ.
ಈ ವಿಪರೀತ ದರ ಏರಿಕೆಯ ಬಿಸಿಯಿಂದ ಗೃಹಬಳಕೆ ಗ್ರಾಹಕರನ್ನು ಸಂರಕ್ಷಿಸಲು ಕೇಂದ್ರ ಸರ್ಕಾರ ಸಬ್ಸಿಡಿ ಮೊತ್ತವನ್ನು ದುಪಟ್ಟುಗೊಳಿಸಿದೆ. ಸಬ್ಸಿಡಿ ಮೊತ್ತವನ್ನು ೧೫೩.೮೬ ರೂಗಳಿಂದ ೨೯೧.೪೮ ರೂಗೆ ಹೆಚ್ಚಿಸಲಾಗಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸಬ್ಸಿಡಿಯ ಮೊತ್ತವನ್ನು ೧೭೪.೮೬ ರೂಗಳಿಂದ ೩೧೨.೪೮ ರೂಗಳಿಗೆ ಪರಿಷ್ಕರಿಸಲಾಗಿದೆ.
೨೦೧೪ ಜನವರಿಯ ನಂತರ ಇದು ಅತ್ಯಧಿಕ ಪ್ರಮಾಣದ ದರ ಏರಿಕೆಯಾಗಿದೆ. ಆಗ ಪ್ರತಿ ಸಿಲಿಂಡರ್ ಬೆಲೆ ೨೨೦ ರೂಗಳಷ್ಟು ಏರಿಕೆಯಾಗಿ ೧೨೪೧ ರೂಗಳಿಗೆ ಜಿಗಿದಿತ್ತು. ಸದ್ಯ ಗೃಹಬಳಕೆದಾರರಿಗೆ ವಾರ್ಷಿಕ ೧೨ ಸಬ್ಸಿಡಿ ಸಿಲಿಂಡರ್‌ಗಳ ಮಿತಿ ಚಾಲ್ತಿಯಲ್ಲಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here