ಉತ್ತರ ಭಾರತದಲ್ಲಿ ಈ ಬಾರಿ ಮಾನ್ಸೂನ್ ಕಾರಣದಿಂದ ಬಹುತೇಕ ರಾಜ್ಯಗಳಲ್ಲಿನ‌ ನದಿಗಳು ತುಂಬಿ, ಪ್ರವಾಹಗಳು ಹರಿದು ಜನರಿಗೆ ತೊಂದರೆಯಾಗಿದೆ. ಕೆಲವು ಪ್ರದೇಶಗಳಲ್ಲಿ ನಿರಂತರ ಮಳೆಯಿಂದಾಗಿ ನೀರು ನಿಂತ ಕಾರಣ ಕೆಲವು ಗ್ರಾಮಗಳು ನಗರ ಹಾಗೂ ಪಟ್ಟಣಗಳ ಸಂಪರ್ಕ ಕಳೆದುಕೊಂಡಿವೆ. ಉತ್ತರ ಪ್ರದೇಶ ದಲ್ಲೂ ಇಂತಹದೆ ಪರಿಸ್ಥಿತಿ ಇದ್ದು, ಇಲ್ಲಿನ‌ ಗ್ರಾಮವೊಂದರಲ್ಲಿ ತೀವ್ರ ಮಳೆಯಿಂದಾಗಿ‌ ಜಲಾವೃತವಾಗಿದ್ದು, ರಸ್ತೆಗಳೆಲ್ಲಾ ಹಾಳಾಗಿ, ಜನ‌ ಸಂಚಾರ ದುರ್ಬರವಾಗಿದೆ. ಆದರೆ ಎಲ್ಲರಂತೆ ನೋಡಿ ಸುಮ್ಮನಾಗದೆ, ತನ್ನ ಸಮಸ್ಯೆ ಕುರಿತು ಹದಿಮೂರು ವರ್ಷದ ಬಾಲಕಿಯೊಬ್ಬಳು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥರಿಗೆ ಬರೆದಿರುವ ಪತ್ರ ಈಗ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿದೆ ಹಾಗೂ ಸಮಸ್ಯೆಗಳನ್ನು ಕುರಿತು ಮಾತನಾಡಿ ಸುಮ್ಮನಾಗುವ ಅನೇಕರಿಗೆ ಛಡಿಯೇಟು ನೀಡುವಂತಿದೆ.

ಮಾನ್ಸೂನ್ ಬಂದರೆ ಮಥುರಾದ ಬಹುತೇಕ ರಸ್ತೆಗಳ ಸ್ಥಿತಿ, ದುಸ್ಥಿತಿಗೆ ತಲುಪುತ್ತದೆ. ಎಲ್ಲ ಕಡೆ ನೀರು ನಿಂತು ಶಾಲೆಗೆ ಹೋಗುವ ಮಕ್ಕಳು ಕಾಲು‌ಜಾರಿ ಬೀಳುವುದು ಸಾಮಾನ್ಯ. ಈ ಕುರಿತಂತೆ ಮಥುರಾ ಜಿಲ್ಲೆಯ ಮರಹಲಾ ಎಂಬ ಹಳ್ಳಿಯ ಹುಡುಗಿ ಭಾವನಾ ತನ್ನೂರಿನಿಂದ , ತನ್ನ ಶಾಲೆಯಿರವ ಹಸನ್ ಪುರಕ್ಕೆ ಹೋಗುವ ರಸ್ತೆ ಹದಗೆಟ್ಟಿದ್ದು, ಅದನ್ನು ದುರಸ್ತಿಗೊಳಿಸಿ ಸಂಚಾರ ಯೋಗ್ಯ ಮಾಡಿರೆಂದು ರಾಜ್ಯದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯ ನಾಥರಿಗೆ ಪತ್ರ ಬರೆದಿದ್ದು, ವಿಷಯ ಅಷ್ಟೇ ಆಗಿದ್ದರೆ ಎಲ್ಲರ ಗಮನ ಆ ಪತ್ರದ ಕಡೆ ಹೋಗುತ್ತಿರಲಿಲ್ಲ.‌ಆಕೆ ಪತ್ರದಲ್ಲಿ ಇಟ್ಟಿರುವ ಬೇಡಿಕೆಯ ಎಲ್ಲರ ಕುತೂಹಲ ಕೆರಳಿಸಿದ್ದು , ಎಲ್ಲರ ಗಮನವನ್ನೊಮ್ಮೆ ತನ್ನತ್ತ ಸೆಳಿಯುತ್ತಿದೆ.

ಬಾವನಾ ಪತ್ರದಲ್ಲಿ ತಮ್ಮ ಹಳ್ಳಿಯಿಂದ ಶಾಲೆಗೆ ಹೋಗುವ ದಾರಿಯು ಮಳೆ ಬಂದರೆ ಸಂಪೂರ್ಣವಾಗಿ ಜಲಮಯವಾಗುತ್ತದೆ. ಅಲ್ಲದೆ ರೈತರು ರಸ್ತೆಯನ್ನೂ ಕೆಲವು ಕಡೆ ತಮ್ಮ ಜಮೀನಿಗೆ ಸೇರಿಸಿ ಉತ್ತಿದ್ದಾರೆ. ಆದ್ದರಿಂದ ನಮಗೆ ಅಂದರೆ ವಿದ್ಯಾರ್ಥಿಗಳಿಗೆ ಮನೆಯಿಂದ ಹೊರಗೆ ಬರಲೂ, ರಸ್ತೆಯಲ್ಲಿ ನಡೆಯಲೂ ಆಗದ ಪರಿಸ್ಥಿತಿ ಇದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಶಾಲೆಗೂ ಹೋಗಲಾಗುತ್ತಿಲ್ಲ. ಇಂತಹ ದುಸ್ಥಿತಿಯಲ್ಲಿ ನಮಗೆ ಶಿಕ್ಷಣ ಪಡೆಯಲು ಆಗುತ್ತಿಲ್ಲ. ನಾವು ಶಾಲೆಗಳಿಂದ ದೂರವಾಗುತ್ತಿದ್ದೇವೆ ಎಂದು ಬರೆದಿರುವ ಭಾವನಾ, ಆದಷ್ಟು ಬೇಗ ರಸ್ತೆಗಳನ್ನು ದುರಸ್ತಿ ಮಾಡಿಸಿ, ಇಲ್ಲವಾದರೆ ಕನಿಷ್ಠ ಪಕ್ಷ ಒಂದು ಹೆಲಿಕಾಪ್ಟರ್ ಆದರೂ ನಮಗೆ ನೀಡಿ, ಅಥವಾ ಸ್ಟೀಮರ್ ಗಳನ್ನು ಕಳುಹಿಸಿ ಎಂದು ಕೋರಿದ್ದಾಳೆ.

ಭಾವನಾ ಬರೆದಿರುವ ಪತ್ರ ಸಾಮಾನ್ಯ ಎನಿಸಿದರು ಆಕೆ ಸರ್ಕಾರ ಹೇಗೆ ಗ್ರಾಮದ ರಸ್ತೆಗಳ ಕಡೆ ನಿರ್ಲಕ್ಷ್ಯ ತೋರಿದೆ ಎಂಬುದನ್ನು ಎತ್ತಿ ಹಿಡಿದಿದ್ದಾಳೆ. ಈ ಬಾಲಕಿಗಿರುವ ಧೈರ್ಯ ಕೂಡಾ ಯಾರೊಬ್ಬ ಹಿರಿಯರಿಗೂ ಇಲ್ಲದಿರುವುದು ವಿಷಾದನೀಯ. ಈಕೆಗೆ ಇರುವ ಕಾಳಜಿ ಪ್ರತಿಯೊಬ್ಬರಿಗೂ ಇದ್ದಿದ್ದರೆ ಸರ್ಕಾರವನ್ನು ಪ್ರಶ್ನಿಸಿದ್ದರೆ, ಇಂದು ಹಲವು ಸಮಸ್ಯೆಗಳಿಗೆ ಪರಿಹಾರ ದೊರೆತಿರಿತ್ತಿತ್ತು. ಸರ್ಕಾರದ ಬಗ್ಗೆ ಫೇಸ್ ಬುಕ್ , ಟ್ವಿಟರ್ ಗಳಲ್ಲಿ ಜಗಳವಾಡುವ ಮಂದಿ ಈ ಪುಟ್ಟ ಬಾಲಕಿಯಿಂದ ಆದರೂ ಪಾಠ ಅರಿತರೆ ಬದಲಾವಣೆ ಬಹುಬೇಗ ಮೂಡುತ್ತದೆ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here