Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ವಿದ್ಯಾಭ್ಯಾಸಕ್ಕೆ ಆದ್ಯತೆ ಕೊಟ್ಟು ಸಮಾಜಕ್ಕೆ ಗೌರವ ತನ್ನಿ-ಹಿರಿಯ ಸಿವಿಲ್ ನ್ಯಾಯಧೀಶ ಎಂ. ವಿಜಯ್

 

ಚಿತ್ರದುರ್ಗ:  ಓದುವ ವಯಸ್ಸಿನಲ್ಲಿ ವಿದ್ಯಾರ್ಥಿಗಳ ಮನಸ್ಸು ಚಂಚಲದಿಂದ ಕೂಡಿರುತ್ತದೆ, ಹೀಗಾಗಿ ಯಾವುದೇ ಇತರೆ ಆಕರ್ಷಣೆಗೆ ಒಳಪಡದೆ  ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ಕೊಟ್ಟು ಸಮಾಜಕ್ಕೆ ಗೌರವ ತರಬೇಕು, ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿ ಎಂ. ವಿಜಯ್ ಹೇಳಿದರು.

ನಗರದ ಚಳ್ಳಕೆರೆ ರಸ್ತೆಯ ಜ್ಞಾನ ವಿಕಾಸ ಪಾಲಿಟೆಕ್ನಿಕ್ ಕಾಲೇಜಿನಲ್ಲಿ  ಶುಕ್ರವಾರ  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜ್ಞಾನ ವಿಕಾಸ ಪಾಲಿಟೆಕ್ನಿಕ್  ಕಾಲೇಜು ವತಿಯಿಂದ ಆಯೋಜಿಸಿದ್ದ  ಪೆÇೀಕ್ಸೋ ಕಾಯ್ದೆ ಮತ್ತು ಮಾದಕ ವಸ್ತುಗಳ ನಿμÉೀಧ ಕಾಯ್ದೆ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚಿತ್ರದುರ್ಗ ಜಿಲ್ಲೆಯು ಎಸೆಸೆಲ್ಸಿ ಫಲಿತಾಂಶದಲ್ಲಿ ಮೊದಲನೇ ಸ್ಥಾನವನ್ನು ಗಳಿಸಿದೆ ಆದರೆ ಪೆÇೀಕ್ಸೋ ಪ್ರಕರಣದಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದರು.  18 ವರ್ಷದ ಒಳಗಿನ ಮಕ್ಕಳು ಓದುವ ವಯಸ್ಸಿನಲ್ಲಿ  ಶಿಕ್ಷಣಕ್ಕೆ ಹೆಚ್ಚು ಆದ್ಯತೆ ಕೊಟ್ಟು ತಂದೆ ತಾಯಿಗಳಿಗೆ ಹಾಗೂ ಸಮಾಜಕ್ಕೆ ಕೀರ್ತಿ ತರಬೇಕು, ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ವಕೀಲರ ಸಂಘದ ಅಧ್ಯಕ್ಷ  ವೈ. ತಿಪ್ಪೇಸ್ವಾಮಿ ಮಾತನಾಡಿ, ಸಾಮಾಜಿಕ ಜಾಲತಾಣಗಳಿಂದ ಸಮಾಜದಲ್ಲಿ ಬಹಳಷ್ಟು ಕೆಟ್ಟ ಬದಲಾವಣೆಗಳಾಗುತ್ತಿವೆ,  ಇವುಗಳಿಂದ ನಮ್ಮನ್ನು ನಾವು ರಕ್ಷಣೆ ಪಡೆಯುವಲ್ಲಿ ವಿಫಲರಾಗುತ್ತಿದ್ದೇವೆ.  ಪ್ರೀತಿ ಪ್ರೇಮದ ಬಗ್ಗೆ ಹೆಚ್ಚು ಗಮನ ಹರಿಸುತ್ತಿರುವುದು 18ರ ವಯಸ್ಸಿನ  ಒಳಗಿನ ಮಕ್ಕಳು. 18ರ ವಯಸ್ಸಿನಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ, ತಪ್ಪು ನಿರ್ಧಾರಗಳಿಂದ ಜೀವನವೇ ಹಾಳಾಗುವ ಸಂಭವ ಇರುತ್ತದೆ, ಹೀಗಾಗಿ ಎಚ್ಚರಿಕೆಯ ಹೆಜ್ಜೆ ಇಡಬೇಕು.  ಯುವ ಪೀಳೀಗೆ ಈ ದೇಶದ ಸಂಪತ್ತು, ಹೀಗಾಗಿ ಯುವಜನತೆ ಉನ್ನತ ಸ್ಥಾನಗಳ ಕನಸುಗಳನ್ನು ಕಾಣಬೇಕು ಎಂದು ಹೇಳಿದರು.

ಕಿರಿಯ ಕಾನೂನು ಅಧಿಕಾರಿ ಶಂಶೀರ್ ಅಲಿ ಖಾನ್ ಮಾದಕ ವಸ್ತುಗಳ ನಿμÉೀಧ ಕಾಯ್ದೆ ಕುರಿತು ಉಪನ್ಯಾಸ ನೀಡಿ, ಓದುವ ವಯಸ್ಸಿನಲ್ಲಿ ಜ್ಞಾನವನ್ನು ಪಡೆಯಬೇಕು   ಒಳ್ಳೆಯ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಾದಕ ವಸ್ತುಗಳಿಂದ ನಾವು ದೂರವಿರಬೇಕು, ವ್ಯಸನವು ಸಾಲಗಾರರನ್ನಾಗಿ ಮಾಡುತ್ತದೆ ಇಂತಹ ಸಮಾಜ ಘಾತಕದಿಂದ ದೂರವಿರಬೇಕು. ವ್ಯಸನಗಳಿಂದ ತಮ್ಮ ಜೀವನಗಳನ್ನು ಹಾಳು ಮಾಡಿಕೊಳ್ಳುವುದರ ಜೊತೆಗೆ ಸಾವಿಗೆ ಹತ್ತಿರವಾಗುತ್ತೇವೆ. ವ್ಯಸನಗಳಿಂದ ದೂರವಿದ್ದು ತಂದೆ ತಾಯಿಗಳಿಗೆ ಒಳ್ಳೆಯ ಮಕ್ಕಳಾಗಿ ಬದುಕಬೇಕು. ಒಂದು ಸಲ ಮಾದಕ ವ್ಯಸನಗಳನ್ನು ತೆಗೆದುಕೊಂಡರೆ ಅದು ಮತ್ತೆ ಮತ್ತೆ ಬೇಕೆನಿಸುತ್ತದೆ ಇದರಿಂದ ದೂರವಿರಬೇಕು  ಎಂದು ತಿಳಿಸಿದರು.

ಪ್ಯಾನಲ್ ವಕೀಲರು ಮತ್ತು ಪ್ರಧಾನ ಕಾನೂನು ನೆರವು ಅಭಿರಕ್ಷಕ ಎಸ್.ವಿಜಯ್ ಕುಮಾರ್  ಪೋಕ್ಸೋ ಕಾಯ್ದೆ ಕುರಿತು ಉಪನ್ಯಾಸ ನೀಡಿ, ಕಾನೂನನ್ನು ಗೌರವಿಸಿದರೆ ಅದು ನಮ್ಮನ್ನು ರಕ್ಷಣೆ ಮಾಡುತ್ತದೆ, ಪ್ರತಿಯೊಬ್ಬ ವ್ಯಕ್ತಿಗೂ  ಹುಟ್ಟಿನಿಂದ ಸಾಯುವವರೆಗೂ ಕಾನೂನಿನ ಅವಶ್ಯಕತೆ ಇದೆ, ವಿದ್ಯಾರ್ಥಿಗಳು ಕಾನೂನಿನ ಮಹತ್ವ ತಿಳಿದುಕೊಳ್ಳಬೇಕು  ಪೆÇೀಕ್ಸೋ ಕಾಯ್ದೆಯು 2012 ರಲ್ಲಿ ಜಾರಿಗೆ ತರಲಾಯಿತು, ಜಿಲ್ಲೆಯು ಪೋಕ್ಸೋ ಪ್ರಕರಣದಲ್ಲಿ ಎರಡನೇ ಸ್ಥಾನದಲ್ಲಿದೆ ಇದಕ್ಕೆ ಕಾರಣ ಪೆÇೀಕ್ಸೋ ಕಾಯ್ದೆ ಬಗ್ಗೆ ಸರಿಯಾಗಿ ತಿಳಿಯದೆ ಇರುವುದು.  ಲೈಂಗಿಕ ದೌರ್ಜನ್ಯದಿಂದ ಮಕ್ಕಳ ಭವಿಷ್ಯ ಹಾಳಾಗುತ್ತದೆ ಹಾಗೂ ಮಾನಸಿಕವಾಗಿಯೂ ಕುಗ್ಗುತ್ತಾರೆ ಎಂದರು.

ಈ ಸಂದರ್ಭದಲ್ಲಿ  ಜ್ಞಾನ ವಿಕಾಸ ಪಾಲಿಟೆಕ್ನಿಕ್ ಪ್ರಾಂಶುಪಾಲರಾದ ಜಿ.ಸುರೇಶ್, ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ.ಅನಿಲ್ ಕುಮಾರ್ ಸೇರಿದಂತೆ  ಕಾಲೇಜಿನ ಬೋಧಕ ಬೋಧಕೇತರು  ಹಾಗೂ ವಿದ್ಯಾರ್ಥಿಗಳು ಇದ್ದರು.