ಹುಟ್ಟು ದಾರಿದ್ರ್ಯ ಆಗಿದ್ರೂ ಸಾವು ಚರಿತ್ರೆ ಆಗ್ಬೇಕು ಇಂಥಹ ಒಂದು ಖಡಕ್ ಡೈಲಾಗ್ ಇರುವ  ಸತೀಶ್ ನೀನಾಸಂ ಅವರ ಗೋದ್ರಾ ಚಿತ್ರದ ಟೀಸರ್ ಬಿಡುಗಡೆ ಆಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಗೋದ್ರಾ ಚಿತ್ರದಲ್ಲಿ ಪತ್ರಿಕೋದ್ಯಮದ ವಿದ್ಯಾರ್ಥಿ ಪಾತ್ರದಲ್ಲಿ ಸತೀಶ್ ನೀನಾಸಂ ಕಾಣಿಸಿಕೊಳ್ಳಲಿದ್ದಾರೆ. ಈ‌ ಹಿಂದೆ ಚಂಬಲ್ ಚಿತ್ರದಲ್ಲಿ  ಖಡಕ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಸತೀಶ್. ಈ ಚಿತ್ರದ ಮೋಷನ್ ಪೋಸ್ಟರ್ ಈಗಾಗಲೇ ಸಿನಿರಸಿಕರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾರತ ಜಾತ್ಯಾತೀತವಾಗಿಲ್ಲದಿದ್ದರೆ ಅದು ಭಾರತವಲ್ಲ ಎಂಬ ಘೋಷ ವಾಕ್ಯದೊಂದಿಗೆ ಸಿನಿರಸಿಕರ ಮನಗೆದ್ದಿತ್ತು.

ಈಗ ಇಲ್ಲಿ ಬಲಾಡ್ಯ ಬದುಕಿ ಬಡವ ಮಾತ್ರ ನಿತ್ಯ ಸಾಯ್ತಾನೆ ಅಂದರೆ ವ್ಯವಸ್ಥೆಯಲ್ಲಿ ದೋಷವಿರಬೇಕು. ಫ್ರೀಡಂ ಯಾವಾಗಲೂ ಫ್ರೀಯಾಗಿ ಸಿಗಲ್ಲ ರಕ್ತ ಹರಿಸಬೇಕು ಇಂತಹ ರಗಡ್ ಡೈಲಾಗ್ ಗಳಿಂದ ಗೋದ್ರಾದಲ್ಲಿ ಮಿಂಚಲಿದ್ದಾರೆ ಸತೀಶ್ ನೀನಾಸಂ. ಸತೀಶ್ ನೀನಾಸಂ ಕಾಲೇಜು ವಿದ್ಯಾರ್ಥಿಯಾಗಿ ಮೊದಲು ಕಾಣಿಸಿಕೊಂಡರೆ ನಂತರದಲ್ಲಿ ಹೋರಾಟಗಾರನಾಗಿ ಎರಡು ಮುಖದ ಪಾತ್ರದಲ್ಲಿ ಅನಾವರಣಗೊಳ್ಳಲಿದ್ದಾರೆ. ವಸಿಷ್ಠ ಸಿಂಹ ವಿದ್ಯಾರ್ಥಿ ಹಾಗೂ ಪೈಲೆಟ್ ಪಾತ್ರದಲ್ಲಿ ಮಿಂಚಿದ್ದರೆ ಶ್ರದ್ಧಾ ಶ್ರೀನಾಥ್ ಪತ್ರಿಕೋದ್ಯಮ ವಿದ್ಯಾರ್ಥಿ ಅಗಿ ಸತೀಶ್ ಜೊತೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಜೂದ್ ಸ್ಯಾಂಡಿ ಅವರ ಸಂಗೀತ ಸೊಗಸಾಗಿ ಮೂಡಿಬಂದಿದೆ. ಒಟ್ಟಾರೆ ಚಿತ್ರ ಜನರ ಮನಸ್ಸಿನಲ್ಲಿ ಈಗಾಗಲೇ ಸದ್ದು ಮಾಡಲು ಪ್ರಾರಂಭಿಸಿದೆ.ಗೋದ್ರಾ ದ ಮೂಲಕ ಸತೀಶ್ ನೀನಾಸಂ ಮತ್ತೊಂದು ದಾಖಲೆ ಬರೆಯುತ್ತಾರ ಎಂದು ಅಭಿಮಾನಿಗಳು ಕಾತರರಾಗಿದ್ದಾರೆ.  ಗೋದ್ರಾ ಚಿತ್ರದ ಟೀಸರ್ ಈಗಾಗಲೇ ಸಕತ್ ವೈರಲ್ ಆಗುತ್ತಿದ್ದು  ಸತೀಶ್ ನೀನಾಸಂ ಅವರ ಅಭಿಮಾನಿಗಳು ಮಾತ್ರವಲ್ಲದೆ ಕನ್ನಡ ಸಿನಿರಸಿಕರು ಸಿನಿಮಾಗಾಗಿ ಕಾಯುವಂತೆ ಆಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here