ಸ್ಯಾಂಡಲ್ ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜನ್ಮದಿನ ಇಂದು. ಈಗಾಗಲೇ ಅವರ ಅಭಿಮಾನಿಗಳು ಹಾಗೂ ನಟರು ಕೂಡಾ ಗಣೇಶ್ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸುತ್ತಿದ್ದಾರೆ. ಕಿಚ್ಚ ಸುದೀಪ್ ಅವರಂತೂ ಈ ಬಾರಿ ಎರಡು ದಿನ ಮುಂಚಿತವಾಗಿಯೇ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಜನ್ಮದಿನದ ಶುಭಾಶಯನ್ನು ತಿಳಿಸಿದ್ದರು. ಇನ್ನು ಜನ್ಮದಿನದ ಒಂದು ದಿನ ಮುಂಚಿತವಾಗಿ ಗಣೇಶ್ ಅವರ ಹೊಸ ಸಿನಿಮಾ ಸಖತ್ ನ ರ್ಯಾಪ್ ಮೋಷನ್ ಪೋಸ್ಟರ್ ಅನ್ನು ಯೂ ಟ್ಯೂಬ್ ನಲ್ಲಿ ಬಿಡುಗಡೆ ಮಾಡಿ ಅವರ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆಯನ್ನು ನೀಡಲಾಗಿದೆ.

ಗೋಲ್ಡನ್ ಸ್ಟಾರ್ ಗಣೇಶ್ ಅವರ ಮುಂಬರಲಿರುವ ಸಿನಿಮಾ ಸಖತ್, ಕೆವಿನ್ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ  ಸುಪ್ರೀತ್ ಮತ್ತು ನಿಶಾ ವೆಂಕಟ್ ಅವರು ನಿರ್ಮಾಪಕರಾಗಿರುವ ಈ ಸಿನಿಮಾದ ನಿರ್ದೇಶನದ ಸಾರಥ್ಯವನ್ನು ವಹಿಸಿದ್ದಾರೆ ಖ್ಯಾತ ನಿರ್ದೇಶಕ  ಸುನಿ ಅವರು. ಈ ಹೊಸ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಅವರಿಗೆ ನಾಯಕಿಯಾಗಿದ್ದಾರೆ ಸುರಭಿ ಪುರಾಣಿಕ್ ಅವರು. ಗಣೇಶ್ ಅವರ ಈ ಹೊಸ ಸಿನಿಮಾದ ರ್ಯಾಪ್ ಪೋಸ್ಟರ್ ನಿನ್ನೆಯಷ್ಟೇ ಬಿಡುಗಡೆಯಾಗಿದ್ದು ಈಗಾಗಲೇ 2 ಲಕ್ಷ, 35 ಸಾವಿರಕ್ಕಿಂತ ಅಧಿಕ ಜನರು ಇದನ್ನು ವೀಕ್ಷಣೆಯನ್ನು ಮಾಡಿದ್ದಾರೆ.

ಸಖತ್ ಸಿನಿಮಾದ ಈ ರ್ಯಾಪ್ ಪೋಸ್ಟರ್ ನ ಹಾಡು ಜಬರ್ದಸ್ತ್ ಆಗಿ ಮೂಡಿ ಬಂದಿದ್ದು, ಕೇಳುಗರಿಗೆ ಕಿಕ್ ನೀಡುವಂತೆ ಇದೆ. ಜುದಾ ಸ್ಯಾಂಡಿ ಸಂಗೀತ ಕೂಡಾ ಅಬ್ಬರವನ್ನೇ ಸೃಷ್ಟಿಸಿದ್ದು ಕೇಳುಗರ ಮನಸ್ಸನ್ನು ರಂಜಿಸುತ್ತಿದೆ. ರ್ಯಾಪ್ ಮೋಷನ್ ಪೋಸ್ಟರ್ ಸಖತ್ ಸದ್ದು ಮಾಡುತ್ತಿದ್ದು, ಅಭಿಮಾನಿಗಳಿಗೆ ಇದು ಗಣೇಶ್ ಅವರ ಜನ್ಮದಿನದ ಉಡುಗೊರೆಯಾದರೆ, ರ್ಯಾಪ್ ಪ್ರಿಯರಿಗೆ ಈ ರ್ಯಾಪ್ ಪೋಸ್ಟರ್ ಭರ್ಜರಿ ಮನರಂಜನೆಯನ್ನು ನೀಡುತ್ತಾ ಮುನ್ನುಗ್ಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here