ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಗೀತಾ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದು ಗೀತಾ ಚಿತ್ರದ ಟೀಸರ್ ಮತ್ತು  ಹಾಡುಗಳು ಜನರ ಮನಸ್ಸಿನಲ್ಲಿ ಭರವಸೆ ಮೂಡಿಸಿದೆ. ಗೀತಾ ಚಿತ್ರದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಡಿರುವ ಕನ್ನಡಿಗ ಎಂಬ ಹಾಡು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಹುಟ್ಟಿಸಿದೆ. ಗೀತಾ ಚಿತ್ರದ ಬಗ್ಗೆ ನಿರೀಕ್ಷೆಗಳು ಸಹ ಹೆಚ್ಚಾಗಿದ್ದು  ಗೀತಾ ಚಿತ್ರದ ಬಗ್ಗೆ ಗೋಲ್ಡನ್ ಸ್ಟಾರ್ ಗಣೇಶ್ ಅವರು ಹಂಚಿಕೊಂಡ ಒಂದು ಪೋಸ್ಟ್  ಸಾಮಾಜಿಕ ಜಾಲತಾಣದಲ್ಲಿ ಈಗ ಆಗುತ್ತಿದೆ. ಗೋಕಾಕ್ ಚಳುವಳಿಯ ಸಂದರ್ಭದಲ್ಲಿ ಕನ್ನಡಿಗರ ಕಣ್ಮಣಿ ವರನಟ ಡಾಕ್ಟರ್ ರಾಜಕುಮಾರ್ ಅವರು ಕನ್ನಡದ ಬಗ್ಗೆ ಬರೆದಿದ್ದ ಪತ್ರವನ್ನು ಗೋಲ್ಡನ್ ಸ್ಟಾರ್ ಗಣೇಶ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ಆ ಪೋಸ್ಟ್ ಗೆ  ಈಗ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.

ಅಪರೂಪದ ಫೋಟೋಗಳನ್ನು ಸೇರ್ ಮಾಡಿದಕ್ಕಾಗಿ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಚಿತ್ರರಂಗದ ಎಲ್ಲಾ ಅಭಿಮಾನಿಗಳು ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ ಗೋಕಾಕ್ ಚಳುವಳಿಯ ಬಗ್ಗೆ ಸಂಪೂರ್ಣವಾಗಿ ತೋರಿಸಲಾಗಿದೆ ಎಂದು ಹೇಳಲಾಗುತ್ತಿದ್ದು ಗೀತಾ ಚಿತ್ರದ ಬಗ್ಗೆ ದಿನದಿಂದ ದಿನಕ್ಕೆ ಅಭಿಮಾನಿಗಳಿಗೆ ಕುತೂಹಲ ಸಹ ಹೆಚ್ಚಾಗುತ್ತಿದೆ.

ಗೋಲ್ಡನ್ ಸ್ಟಾರ್ ಗಣೇಶ್ ಹಂಚಿಕೊಂಡಿರುವ ಡಾಕ್ಟರ್ ರಾಜಕುಮಾರ್ ಅವರ ಪತ್ರದ ಸಾರಾಂಶ ಹೀಗಿದೆ..

ನನ್ನ ಹುಟ್ಟೂರಾದ ಕರ್ನಾಟಕ ನನ್ನ ತಾಯಿನುಡಿಯಾದ ಕನ್ನಡತಾಯಿನುಡಿಯಾದ ಕನ್ನಡ2 ನನ್ನ ರಕ್ತದ ಭಾಗವಾಗಿದೆ ಎರಡೂ ನನ್ನ ರಕ್ತದ ಭಾಗವಾಗಿದೆ. ನನ್ನ ಬದುಕನ್ನೇ ಅವುಗಳಿಗಾಗಿ ಮೀಸಲಿಟ್ಟು  ಕಿಂಚಿತ್ ಕಲಾಸೇವೆಯನ್ನು ಮಾಡುತ್ತಿದ್ದೇನೆ. ಈಗ ಕರ್ನಾಟಕದಲ್ಲಿ ಕನ್ನಡಕ್ಕೆ ಕನ್ನಡಿಗರಿಗೆ  ಕುತ್ತು ಬಂದಿರುವುದು ವಿಷಾಧಕರ. ಗೋಕಾಕ್ ವರದಿಯ ಬಗ್ಗೆ ಸರ್ಕಾರದ ವಿಳಂಬ ನೀತಿಯನ್ನು ವಿರೋಧಿಸಿ ಕನ್ನಡ ಜನತೆ ಚಳುವಳಿಗೆ ಇಳಿದಾಗ ಕನ್ನಡಿಗರ ಪ್ರೀತಿ ವಿಶ್ವಾಸಗಳನ್ನು ಮನಸಾರೆ ಉಂಡಿರುವ ನಾನು ಬೆಂಗಳೂರಿಗೆ ಬಂದು ನನ್ನ ನಿಲುವನ್ನು ಸ್ಪಷ್ಟವಾಗಿ ಹೇಳಿದೆ.

ಕಳೆದ 19 ನೇ ತಾರೀಕು ಕರ್ನಾಟಕ ಸರ್ಕಾರ ಪ್ರಕಟಿಸಿದ ಭಾಷಾ ಸೂತ್ರವನ್ನು ಗಮನಿಸಿದ್ದೇನೆ. ಎಲ್ಲಾ ರೀತಿಯಿಂದಲೂ ಸಮರ್ಪಕವಾಗಿದ್ದು ಗೋಕಾಕ್ ಆಯೋಗದ ಶಿಫಾರಸನ್ನು ಕಡೆಗಣಿಸಿ ಸರ್ಕಾರವು ತನ್ನದೇ ಆದ ಸೂತ್ರವನ್ನು ಮುಂದಿಟ್ಟಿರುವ ನನಗೆ ಹಾಗೂ ನನ್ನಂತಹ ನೂರಾರು  ಕಲಾವಿದರಿಗೆ,  ಸಾಹಿತಿಗಳಿಗೆ ಕನ್ನಡ ಕುಲಕೋಟಿಗೆ ತೀವ್ರ ಅಸಮಾಧಾನವನ್ನು ಉಂಟುಮಾಡಿದೆ. ಗೋಕಾಕ್ ಆಯೋಗದ ಶಿಫಾರಸನ್ನು ಜಾರಿಗೆ ತರಬೇಕೆಂದು ಸರ್ಕಾರವನ್ನು ಒತ್ತಾಯಿಸಿ ನಡೆಯುತ್ತಿರುವ ಈಗಿನ ಕನ್ನಡ ಜನತೆಯ ಶಾಂತಿಯ ಚಳುವಳಿಗೆ ನನ್ನ ಅಖಂಡ ಬೆಂಬಲವಿದೆ. ಈ ಕಾರಣಕ್ಕಾಗಿ ಕರ್ನಾಟಕದಿಂದ ಅಂದರೆ ನನ್ನ ತಾಯ್ನಾಡಿನಿಂದ ಯಾವುದೇ ಕಾರ್ಯ ಬಂದರೂ ನನ್ನೆಲ್ಲ ಶಕ್ತಿಯನ್ನು ನನ್ನ ತಾಯಿಗಾಗಿ ಮುಡಿಪಾಗಿಡಲು ಸಿದ್ಧನಾಗಿದ್ದೇನೆ…

ಇಂತಿ ಡಾ. ರಾಜಕುಮಾರ್.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here