ಸ್ಯಾಂಡಲ್ ವುಡ್ ನಲ್ಲಿ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ನಾಡಿನ ಜನತೆಗೆ ಹಾಗೂ ತಮ್ಮ ಅಭಿಮಾನಿಗಳಿಗೆ ಶುಭಾಶಯ ಕೋರುವುದು ಸ್ಯಾಂಡಲ್ ವುಡ್ ಸೆಲೆಬ್ರಿಟಿ ಗಳ ವಾಡಿಕೆ. ಈಗೆಲ್ಲಾ ಸೋಷಿಯಲ್ ಮೀಡಿಯಾ ಗಳಲ್ಲಿ ತಮ್ಮ ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿ ಇರುವ ಸೆಲೆಬ್ರಿಟಿ ಗಳು ಹಬ್ಬದ ದಿನಗಳಲ್ಲಿ ವಿಶೇಷ ಪೋಸ್ಟ್ ಅಥವಾ ಹಬ್ಬದ ಸಂಭ್ರಮದ ಫೋಟೋ ಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಾಕಿ‌ ಶುಭಾಶಯ ತಿಳಿಸುತ್ತಾರೆ.  ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಫೀಮೇಲ್ ಅಭಿಮಾನಿಗಳನ್ನು ಹೊಂದಿರುವ ಖ್ಯಾತ ನಟಿ ಅಮೂಲ್ಯ .ಚೆಲುವಿನ ಚಿತ್ತಾರದ ಬೆಡಗಿ ನಟಿ ಅಮೂಲ್ಯ ಕನ್ನಡ ಚಿತ್ರ ರಂಗದ ಅಮುಲ್ ಬೇಬಿ ಎಂದೇ ಹೆಸರಾದವರು.

ಈ ಬಾರಿ ಅಮೂಲ್ಯ ಮತ್ತು ಜಗದೀಶ್ ದಂಪತಿಗಳು ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಶಿಲ್ಪ ಗಣೇಶ್ ಕುಟುಂಬದ ಜೊತೆ ಸೇರಿ ದೀಪಾವಳಿ ಸಂಭ್ರಮ ಆಚರಿಸಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಕುಟುಂಬಕ್ಕೆ ಮತ್ತು ಅಮೂಲ್ಯ ಕುಟುಂಬಕ್ಕೆ ಆತ್ಮೀಯ ಸಂಬಂಧ ಇರುವುದು ಗೊತ್ತೇ ಇದೆ. ಶಿಲ್ಪಾ ಗಣೇಶ್ ಅವರೇ ಅಮೂಲ್ಯ ಮತ್ತು ಜಗದೀಶ್ ಮದುವೆಯನ್ನು ಮುಂದಾಳತ್ವ ವಹಿಸಿ ಮಾಡಿಸಿದ್ದರು. ಹಬ್ಬದ ಹಾಗೂ ವಿಶೇಷವಾದ ದಿನಗಳಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಕುಟುಂಬ ಮತ್ತು ಅಮೂಲ್ಯ ಅವರ ಕುಟುಂಬ ಜೊತೆಯಾಗಿ ಸೇರಿ ಹಬ್ಬ ಆಚರಣೆ ಮಾಡುತ್ತಾರೆ.

ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೆ ಪತಿ ಜಗದೀಶ್ ಜೊತೆ, ಮಾವನ ಜೊತೆ ರಾಜಕೀಯದಲ್ಲಿ ಬ್ಯುಸಿ ಆಗಿರುವ ಅಮೂಲ್ಯ ಸಂಭ್ರಮದ ದೀಪಾವಳಿ ಹಬ್ಬದ ಆಚರಣೆಯಲ್ಲಿ ತೊಡಗಿದ್ದಾರೆ. ಅಮೂಲ್ಯ ಅವರು ನಟಿಯಾಗಿ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದರೂ, ಮದುವೆಯ ನಂತರ ಯಾವುದೇ ಸಿನಿಮಾ ಮಾಡಿಲ್ಲ. ಆದಾಗ್ಯೂ ತಮ್ಮ ಅಭಿಮಾನಿಗಳಿಗೆ ನಿರಾಸೆ ಮಾಡದ ಅಮೂಲ್ಯ ಸೋಶಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ.

ದೀಪಾವಳಿ ಹಬ್ಬವನ್ನು ಪತಿಯೊಂದಿಗೆ ಆಚರಿಸಿದ ವೀಡಿಯೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ವೀಡಿಯೋದಲ್ಲಿ ಪತಿ ಜಗದೀಶ್ ಜೊತೆ ದೀಪ ಬೆಳಗಿಸುತ್ತಿರುವ ಅಮೂಲ್ಯ, ಹಳದಿ ಸೀರೆಯಲ್ಲಿ ಸಖತ್ ಕ್ಯೂಟ್ ಆಗಿ ಕಾಣುತ್ತಾರೆ. ಅಷ್ಟೇ ಅಲ್ಲದೆ, ಅಭಿಮಾನಿಗಳಿಗೂ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ. ನಟಿ ಅಮೂಲ್ಯ-ಜಗದೀಶ್ ಅವರ ವಿವಾಹವು 2017ರ ಮೇ 12 ರಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನದಲ್ಲಿ ನೆರವೇರಿತ್ತು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here