ಶಾಲೆ ಹಾಗೂ ಕಾಲೇಜಿನಲ್ಲಿ ಸಾಮಾನ್ಯವಾಗಿ ಪಾಠ,ಆಟ ಹಾಗೂ ಪಠ್ಯೇತರ ಚಟುವಟಿಕೆಗಳು ನಡೆಯುತ್ತವೆ ಎಂದು ಎಲ್ಲರಿಗೂ ತಿಳಿದಿದೆ. ಇಲ್ಲಿ ಆಗಾಗ ರಾಷ್ಟ್ರೀಯ ಹಬ್ಬಗಳು ಹಾಗೂ ವಿಶೇಷ ದಿನಗಳ ಆಚರಣೆಗಳನ್ನು ಕೂಡಾ ನೆರವೇರಿಸಲಾಗುತ್ತದೆ. ಮಡಿಕೇರಿಯ ಕಾಲೇಜೊಂದರಲ್ಲಿ ಇವೆಲ್ಲಕ್ಕಿಂತ ಭಿನ್ನವಾಗಿ, ಒಂದು ಆತ್ಮೀಯ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿನಿಯೊಬ್ಬಳ ಸೀಮಂತ ಶಾಸ್ತ್ರವನ್ನು ಬೋಧಕ ವರ್ಗದವರೆಲ್ಲಾ ಸೇರಿ ಆಚರಿಸಿರುವ ಇಂದು ವಿಶೇಷ ಘಟನೆಯು ನಡೆದಿದ್ದು, ಎಲ್ಲರ ಗಮನವನ್ನು ಸೆಳೆದು, ಮಾದ್ಯಮಗಳಲ್ಲಿ ಸುದ್ದಿಯಾಗಿದೆ.

ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ , ದ್ವಿತೀಯ ಎಂ.ಕಾಂ. ಅಧ್ಯಯನ ಮಾಡುತ್ತಿರುವ ಶಾಲಿನಿ ಎಂಬ ವಿದ್ಯಾರ್ಥಿನಿಯ ಸೀಮಂತ ಶಾಸ್ತ್ರವನ್ನು ಆಚರಿಸಿ ಆಕೆಯ ಸಹಪಾಠಿಗಳೆಲ್ಲಾ ಸಂಭ್ರಮಿಸಿದ್ದಾರೆ. ಶಾಲಿನಿ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಂದರ್ಭದಲ್ಲಿ ಅವರಿಗೆ ಸದಾ ನೆನಪಿನಲ್ಲಿ ಉಳಿಯುವಂತಹ ಕಾಣಿಕೆಯನ್ನು ಆಕೆಯ ಸಹಪಾಠಿ ಮಿತ್ರರು ಹಾಗೂ ಕಾಲೇಜಿನ ಬೋಧಕ ವರ್ಗ ನೀಡಿ ಆಕೆಗೆ ಸಂತಸವನ್ನು ನೀಡಿದ್ದಾರೆ. ಕಳೆದ ಗುರುವಾರ ನಿತ್ಯ ದಂತೆ ಕಾಲೇಜಿಗೆ ಹೋದಾಗ, ಅಲ್ಲಿ ಅವರಿಗಾಗಿ ಆಶ್ಚರ್ಯ ಕಾದಿತ್ತು. ಅದೇನೆಂದರೆ ಸಹಪಾಠಿಗಳು ಹಾಗೂ ಬೋಧಕರು ಸೇರಿ ಆಕೆಯ ಸೀಮಂತ ಮಾಡಲು ಯೋಚಿಸಿರುವುದು‌.

ಕಾಲೇಜಿನಲ್ಲಿ ಇದ್ದ ಹೆಣ್ಣುಮಕ್ಕಳು ಸೀಮಂತ ಶಾಸ್ತ್ರಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನು ಅಣಿ ಮಾಡಿದ್ದಾರೆ. ಹೆಣ್ಣು ಮಕ್ಕಳು ಆರತಿ ತಟ್ಟೆ ಹಿಡಿದು, ಅರಿಶಿಣ ಕುಂಕುಮ , ಹಚ್ಚಿ, ಗರ್ಭಿಣಿಗೆ ಹೂ ಮುಡಿಸಿ, ಆರತಿಯನ್ನು ಬೆಳಗಿದ್ದಾರೆ ಹಾಗೂ ಉಡುಗೊರೆಗಳನ್ನು ಸಹಾ ನೀಡಿದ್ದಾರೆ. ನಿಜಕ್ಕೂ ಇದೊಂದು ಅಪೂರ್ವ ಅನುಭವವನ್ನು ಶಾಲಿನಿ ಯವರಿಗೆ ‌ನೀಡಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಕಾಲೇಜಿನಲ್ಲಿ ವಿದ್ಯಾರ್ಥಿನಿಯೊಬ್ಬಳ ಸೀಮಂತ ಶಾಸ್ತ್ರವನ್ನು ನಡೆಸಿರುವುದು ಇದೇ ಮೊದಲು ಎಂದು ಕೂಡಾ ಹೇಳಬಹುದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here