ಹೆಣ್ಣು ಮಕ್ಕಳು ಹುಟ್ಟಿದರೆ ತಂದೆ ತಾಯಿ ಆಲೋಚಿಸುವುದು ಭವಿಷ್ಯದಲ್ಲಿ ಅವರ ಮದುವೆಯ ಬಗ್ಗೆ, ಕಾಲ ಬದಲಾದರೂ ಆಲೋಚನೆಗಳು ಬದಲಾಗದ ಹೆಣ್ಣೆಂದರೆ ಮದುವೆ, ಮನೆ, ಮಕ್ಕಳಿಗೆ ಎಂದು ಸೀಮಿತ ಆಲೋಚನೆ ಹೊಂದಿರುವವರಿಗೆ ತಕ್ಕ ಉತ್ತರವನ್ನು ನೀಡಿದ್ದಾರೆ ಒಂದೇ ಮನೆಯ ಅಕ್ಕ-ತಂಗಿಯರಾದ ರೂಪಾಲಿ ಹಾಗೂ ದೀಪಾಲಿ. ಈ ಅಕ್ಕ ತಂಗಿಯರ ಸಾಧನೆಯನ್ನು ಈಗ ಎಲ್ಲರೂ ಕೊಂಡಾಡುವಂತಾದರೆ, ಈ ಇಬ್ಬರೂ ಸಾಧಿಸುವ ಛಲ ಇರುವ ಹೆಣ್ಣು ಮಕ್ಕಳಿಗೆ ಈಗ ಮಾದರಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಯಲ್ಪಾರಟ್ಟಿ ಗ್ರಾಮದ ಈ ಸಹೋದರಿಯರ ಸಾಧನೆ ಈಗ ದೊಡ್ಡ ಸುದ್ದಿಯಾಗಿದೆ.

ರೈತ ಶಿವಾನಂದ ಗೂಡೊಡಗಿಯವರು ಮೂರು ಜನ ಮಕ್ಕಳಲ್ಲಿ ಹಿರಿಯ ಮಗ ತಂದೆಗೆ ಕೃಷಿಯಲ್ಲಿ ನೆರವಾದರೆ ಈ ಇಬ್ಬರು ಹೆಣ್ಣು ಮಕ್ಕಳು ತಮ್ಮ ಶಿಕ್ಷಣವನ್ನು ಬಹಳ ಶ್ರದ್ಧೆಯಿಂದ ಮಾಡಿದ್ದಾರೆ. ಬಿಬಿಎ ಪದವೀಧರರಾದ ಈ ಇಬ್ಬರೂ ಒಂದೇ ಸಲಕ್ಕೆ ಪಿಎಸ್ಐ ಹುದ್ದೆಗೆ ಆಯ್ಕೆಯಾಗಿರುವುದು ಈಗ ಎಲ್ಲರ ಗಮನವನ್ನು ಸೆಳೆದಿದ್ದು, ಗ್ರಾಮೀಣ ಹೆಣ್ಣು ಮಕ್ಕಳ ಸಾಧನೆಗೆ ಸಲಾಂ ಹೊಡೆಯುವಂತೆ ಮಾಡಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹುಟ್ಟೂರಿನಲ್ಲಿ, ಪಿಯು ಶಿಕ್ಷಣವನ್ನು ಬಿ.ಎಲ್.ಡಿ. ಕಾಲೇಜು, ಪದವಿಯನ್ನು ಬಸವಪ್ರಭು ಕೋರೆ ಕಾಲೇಜು ಚಿಕ್ಕೋಡಿಯಲ್ಲಿ ಮಾಡಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ಹಿಂದುಳಿದ ವರ್ಗಗಳಿಗೆ ನೀಡುವ ಉಚಿತ ತರಬೇತಿಯನ್ನು ಪಡೆದು ಪ್ರವೇಶ ಪರೀಕ್ಷೆ ತೇರ್ಗಡೆಯಾಗಿ, ಬೆಂಗಳೂರಿನ ಜೈನ್ ಸಂಸ್ಥೆಯಲ್ಲಿ ಒಂಬತ್ತು ತಿಂಗಳು ತರಬೇತಿ ಪಡೆದು, ಧಾರವಾಡದಲ್ಲಿ ಬಾಡಿಗೆ ಮನೆ ಮಾಡಿ, ಅದ್ಯಯನಕ್ಕೆ ಒತ್ತು ನೀಡಿದ್ದರ ಫಲ ಇಂದು ಅಕ್ಕ ತಂಗಿ ಇಬ್ಬರೂ ತಮ್ಮ ಮೊದಲ ಪ್ರಯತ್ನದಲ್ಲೇ ಪಿಎಸ್ಐ ಹುದ್ದೆ ಪಡೆದು ತಮ್ಮ ತಂದೆಗೆ ಕೀರ್ತಿ ತಂದಿದ್ದಾರೆ. ಅದೆಷ್ಟೋ ಹೆಣ್ಣು ಮಕ್ಕಳಿಗೆ ಇಂದು ಮಾದರಿಯಾಗಿ ಕಾಣುತ್ತಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here