2020 ವರ್ಷಾರಂಭವಾಗುವ ಮೊದಲೇ 2019 ನೇ ಸಾಲಿನಲ್ಲಿ ಗೂಗಲ್ ನಲ್ಲಿ ಯಾವ ವ್ಯಕ್ತಿಯ ಬಗ್ಗೆ ಭಾರತದಲ್ಲಿ ಅತಿ ಹೆಚ್ಚು ಹುಡುಕಾಟ ನಡೆಸಲಾಗಿದೆ ಎಂಬುದನ್ನು ಸರ್ಚ್ ಇಂಜಿನ್ ದೈತ್ಯ ಗೂಗಲ್ ಬಹಿರಂಗಪಡಿಸಿದ್ದು, ಈ ವರ್ಷ ಗೂಗಲ್ ನಲ್ಲಿ ಅತಿ ಹೆಚ್ಚು ಜನರಿಂದ ಹುಡುಕಾಟಕ್ಕೆ ಒಳಗಾದ ಟಾಪ್ 10 ವ್ಯಕ್ತಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇದ್ದಾರೆ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಹೆಸರಿದೆ. ಈ ಮೂಲಕ ಅವರು ಟಾಪ್ ಟೆನ್ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರನ್ನು ಬಿಟ್ಟರೆ ನಂತರದ ಸ್ಥಾನದಲ್ಲಿ ಬಾಲಿವುಡ್ ನ ಹಿರಿಯ ಗಾಯಕಿ ಲತಾಮಂಗೇಶ್ಕರ್, ಯುವರಾಜ್ ಸಿಂಗ್ ಇದ್ದಾರೆ.

ಮೂರ್ನಾಲ್ಕು ಜನರನ್ನು ಹೊರತು ಪಡಿಸಿದರೆ ಉಳಿದವರೆಲ್ಲರೂ ಕೂಡಾ ಸಿನಿಮಾ ಹಾಗೂ ಸಂಗೀತ ಕ್ಷೇತ್ರದವರೇ ಆಗಿದ್ದಾರೆ. ಟಾಪ್ ಟೆನ್ ಲಿಸ್ಟ್ ನಲ್ಲಿ ಇರುವ ವ್ಯಕ್ತಿಗಳು ಯಾರೆಂದರೆ . ಅಭಿನಂದನ್ ವರ್ಧಮಾನ್, ಲತಾ ಮಂಗೇಶ್ಕರ್, ಯುವರಾಜ್ ಸಿಂಗ್, ಆನಂದ್ ಕುಮಾರ್, ವಿಕ್ಕಿ ಕೌಶಲ್ ,ರಿಷಬ್ ಪಂತ್, ರಾನು ಮೊಂಡಲ್, ತಾರಾ ಸುತಾರಿಯಾ ಸಿದ್ಧಾರ್ಥ್ ಶುಕ್ಲಾ, ಕೋಯಿನಾ ಮಿತ್ರ ಅವರು ಈ ಪಟ್ಟಿಯಲ್ಲಿ ಇದ್ದಾರೆ. ಇದೇ ರೀತಿ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿ ಯಾರೆಂಬುದು ಕೂಡಾ ಬಹಿರಂಗಪಡಿಸಲಾಗಿದೆ.

ಈ ಬಾರಿ ದಕ್ಷಿಣ ಭಾರತದಲ್ಲಿ ಹುಡುಕಾಟಕ್ಕೆ ಒಳಗಾದ ವ್ಯಕ್ತಿಗಳಲ್ಲಿ ಅತಿ ಹೆಚ್ಚು ಸರ್ಚ್ ಆದ ವ್ಯಕ್ತಿಗಳಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ ಟಾಲಿವುಡ್ ನಟ ವಿಜಯ್ ದೇವರಕೊಂಡ. ಅರ್ಜುನ್ ರೆಡ್ಡಿ ಸಿನಿಮಾ ನಂತರ ಸ್ಟಾರ್ ಆಗಿ ಹೊರ ಹೊಮ್ಮಿರುವ ವಿಜಯ್ ದೇವರ ಕೊಂಡ ಅವರ ಬಗ್ಗೆ ಮೊದಲಿಗಿಂತ ಕ್ರೇಜ್ ಹೆಚ್ಚಿದ್ದು, ಬಾಲಿವುಡ್ ನಟಿಯರು ಕೂಡಾ ಅವರ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು ಕೂಡಾ ಸುದ್ದಿಯಾಗಿತ್ತು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here