https://www.facebook.com/suddimanenews/

ಭಾರತ ತಂಡದ ಮಾಜಿ ಕ್ರಿಕೆಟಿಗ ಗೌತಮ್‍ಗಂಭೀರ್ ಲೋಕಸಭಾ ಚುನಾವಣೆಯಲ್ಲಿ ನವದೆಹಲಿಯಿಂದ ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ಮುಖ್ಯಸ್ಥೆ ಮೀನಾಕ್ಷಿ ಲೇಕಿ ತಿಳಿಸಿದ್ದಾರೆ.ನವದೆಹಲಿಯಲ್ಲಿ 7 ಲೋಕಸಭಾ ಕ್ಷೇತ್ರಗಳಿದ್ದು ಗೌತಮ್ ಗಂಭೀರ್ ಅವರನ್ನು ಯಾವ ಕ್ಷೇತ್ರದಿಂದ ಕಣಕ್ಕಿಳಿಸಬೇಕು ಎಂಬುದನ್ನು ಇನ್ನೂ ನಿರ್ಧಾರ ಮಾಡಿಲ್ಲ ಎಂದು ಅವರು ತಿಳಿಸಿದ್ದಾರೆ.ಗೌತಮ್‍ಗಂಭೀರ್‍ಗೆ ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿ ಬಂದಿದ್ದು ತಮ್ಮ ಕ್ರಿಕೆಟ್ ಜೀವನದ ನಡುವೆಯೇ ರಾಜಕೀಯದಲ್ಲೂ ಗುರುತಿಸಿಕೊಂಡು ಬಿಜೆಪಿ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾ ಬಂದಿದ್ದಾರೆ. 2014ರಲ್ಲಿ ನಡೆದ ಚುನಾವಣೆಯಲ್ಲಿ ವಿತ್ತ ಸಚಿವ ಅರುಣ್‍ಜೇಟ್ಲಿ ಪರ ಗೌತಿ ಪ್ರಚಾರ ಮಾಡಿದ್ದರು.ಕಳೆದ ಡಿಸೆಂಬರ್‍ನಲ್ಲಿ ತಮ್ಮ 15 ವರ್ಷಗಳ ಸುದೀರ್ಘ ಕ್ರಿಕೆಟ್ ಜೀವನಕ್ಕೆ ಗಂಭೀರ್ ಗುಡ್‍ಬೈ ಹೇಳಿದ್ದರು.

ಅಂದಿನಿಂದಲೂ ಫೇಸ್‍ಬುಕ್, ಟ್ವಿಟ್ಟರ್‍ನಲ್ಲಿ ತಲ್ಲೀನರಾಗಿರುವ ಅವರು ಇತ್ತೀಚೆಗೆ ನಡೆದ ಪುಲ್ವಾಮ ದಾಳಿಯನ್ನು ಗಂಭೀರವಾಗಿ ಖಂಡಿಸಿದ್ದರು.ಈಗಾಗಲೇ ಕ್ರಿಕೆಟಿಗರಾದ ಕೀರ್ತಿ ಅಜಾದ್, ಮೊಹಮ್ಮದ್ ಅಜರುದ್ದೀನ್, ನವಜೋತ್‍ಸಿಂಗ್ ಸಿಧು, ಮೊಹಮದ್ ಕೇಫ್ ಅವರು ವಿವಿಧ ಪಕ್ಷಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಈಗ ಗಂಭೀರ್ ರಾಜಕೀಯ ಜೀವನದಲ್ಲಿ ತಮ್ಮ ನೂತನ ಇನ್ನಿಂಗ್ಸ್ ಆರಂಭಿಸಲು ಹೊರಟಿದ್ದಾರೆ.

ಗೌತಮ್‍ಗಂಭೀರ್ ಕೂಡ ನವದೆಹಲಿಯ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧಿಸಿ ಪ್ರಧಾನಿ ನರೇಂದ್ರ ಮೋದಿಯ ಅಲೆಯಲ್ಲಿ ಗೆದ್ದು ಬರುವ ಹುಮ್ಮಸ್ಸಿನಲ್ಲಿದ್ದಾರೆ. ನವದೆಹಲಿ ಲೋಕಸಭಾ ಚುನಾವಣೆಯು ಮೇ 12 ರಂದು ಜರುಗಲಿದ್ದು, ಮೇ 23 ರಂದು ಫಲಿತಾಂಶ ಹೊರಬೀಳಲಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here