ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವವರೇ ಹೆಚ್ಚು. ಅದರಲ್ಲೂ ಸಿರಿವಂತರು, ಸೆಲೆಬ್ರಿಟಿಗಳು ಹಾಗೂ ಅಧಿಕಾರಿ ವರ್ಗದವರು ಸರ್ಕಾರಿ ಆಸ್ಪತ್ರೆಗಳ ಕಡೆ ತಿರುಗಿಯೂ ನೋಡುವುದಿಲ್ಲ.‌‌ ಒಂದು ಸಣ್ಣ ನೆಗಡಿ ಅಥವಾ ಜ್ವರ  ಬಂದರೂ ಸೂಪರ್  ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ಕಡೆ ಓಡುತ್ತಾರೆ. ಸಾವಿರ , ಲಕ್ಷಗಳು ಖರ್ಚು ಮಾಡುತ್ತಾರೆ. ಆದರೆ ಬಡವರಿಗೆ ಹಾಗೂ ಸಾಮಾನ್ಯ ಜನರಿಗೆ ಸರ್ಕಾರಿ ಆಸ್ಪತ್ರೆಗಳೇ ದಿಕ್ಕು. ಅಲ್ಲಿ ಸೌಲಭ್ಯವಿರಲಿ ಬಿಡಲಿ ಚಿಕಿತ್ಸೆ ಬೇಕೆಂದರೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಬೇಕು.  ಅಧಿಕಾರಿ ವರ್ಗದವರು ಸಹಾ ಸರ್ಕಾರಿ ಆಸ್ಪತ್ರೆಗಳ ಕಡೆ ಚಿಕಿತ್ಸೆಗೆಂದು ಹೋಗುವುದು ಬಹಳ ವಿರಳ. ಈಗ ಜಿಲ್ಲಾಧಿಕಾರಿಯೊಬ್ಬರು ತಮ್ಮ ಹೆಂಡತಿಯ ಹೆರಿಗೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮಾಡಿಸಿ ಮಾದರಿಯಾಗಿದ್ದಾರೆ.

ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯ ಜಿಲ್ಲಾಧಿಕಾರಿಯಾದ ಮನೀಶ್ ಕುಮಾರ್ ವರ್ಮಾ ಅವರು ಗರ್ಭಿಣಿಯಾದ ತಮ್ಮ ಪತ್ನಿಗೆ ಹೆರಿಗೆಯ ದಿನ‌ ಹತ್ತಿರವಾಗುತ್ತಿದ್ದಂತೆ ಕಾಣಿಸಿಕೊಂಡಾಗ ಯಾವುದೇ ಖಾಸಗಿ ಆಸ್ಪತ್ರೆ ಅಥವಾ ಮತ್ತಾವುದೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಹೋಗದೆ ಸರ್ಕಾರಿ ಆಸ್ಪತ್ರೆಯಲ್ಲಿ ತಮ್ಮ ಪತ್ನಿಯನ್ನು ದಾಖಲಿಸಿದ್ದಾರೆ. ಜಿಲ್ಲಾಧಿಕಾರಿ ಪತ್ನಿಯನ್ನು ಕಳೆದ ಶನಿವಾರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆ ದಿನದ ತಡರಾತ್ರಿಯಲ್ಲಿ ಆಕೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಈ ಮೂಲಕ ಅವರೊಬ್ಬ ಮಾದರಿ ಅಧಿಕಾರಿ ಎನಿಸಿದ್ದಾರೆ.

ಪ್ರಧಾನಿಯವರ ಸುರಕ್ಷಿತ ಮಾತೃತ್ವ ಯೋಜನೆಯ ಬಗ್ಗೆ ಜನರಲ್ಲಿ  ವಿಶೇಷವಾಗಿ ಮಹಿಳೆಯರಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಈ ಹೆಜ್ಜೆಯನ್ನು ಇಟ್ಟಿರುವುದಾಗಿ ಹೇಳಿದ್ದಾರೆ. ಅಲ್ಲದೆ ಪ್ರತಿ ಗರ್ಭಿಣಿ ಸ್ತ್ರೀಯೂ ಕೂಡಾ ಪ್ರಧಾನಿಯವರ ಸುರಕ್ಷಿತ ಮಾತೃತ್ವ ಯೋಜನೆಯ ಅಡಿಯಲ್ಲಿ, ಪ್ರಸವ ಮಾಡಿಸಿಕೊಂಡರೆ ಅವರಿಗೆ ಯೋಜನೆಯ ಸಂಪೂರ್ಣ ಲಾಭ ದೊರೆಯುವುದೆಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ. ಜಿಲ್ಲಾಧಿಕಾರಿಯವರ ಈ ನಡೆಯಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಸಹಾ ಖಾಸಗಿ ಆಸ್ಪತ್ರೆಗಳಂತಯೇ ಸೌಲಭ್ಯಗಳು ಇವೆ ಎಂಬುದು ಸಾಬೀತಾಗಿದೆ. ಅಲ್ಲದೆ ಜನರು ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಜನರು ತಮ್ಮ ದೃಷ್ಟಿ ಬದಲಿಸಿಕೊಳ್ಳಬೇಕೆಂಬ ನೀತಿಯನ್ನು ನೀಡಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here