ಮೈತ್ರಿ ಸರ್ಕಾರದ ಉಳಿವು ಅಳಿವಿನ ಪರಿಸ್ಥಿತಿ ರಾಜ್ಯ ರಾಜಕಾರಣದಲ್ಲಿ ನಡೆದಿದ್ದು, ರಾಜಕೀಯ ವ್ಯವಸ್ಥೆಯೇ ಡೋಲಾಯಮಾನ ಪರಿಸ್ಥಿತಿಯಲ್ಲಿ ಇದ್ದು, ರಾಜ್ಯದ ಜನತೆ, ಅವರ ಸಮಸ್ಯೆಗಳನ್ನು ತೀರಿಸಲು ಹೆಣಗಾಡದಷ್ಟು ಮಟ್ಟಕ್ಕೆ ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನಗಳು ಭರದಿಂದ ಸಾಗಿವೆ. ಒಂದೆಡೆ ಮೈತ್ರಿ ನಾಯಕರು ಕಳೆದ ಕೆಲವು ದಿನಗಳಿಂದ ತಮ್ಮೆಲ್ಲಾ ಶಕ್ತಿ ಬಳಸಿ ಸರ್ಕಾರವನ್ನು ಉಳಿಸಿಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈ ನಡುವೆ ಸೂಪರ್ ಸಿಎಂ ಹೆಚ್.ಡಿ.ರೇವಣ್ಣನವರು ಮಾತ್ರ ಸರ್ಕಾರ ಉಳಿಯಲು ದೇವರ ಮೊರೆ ಹೋಗಿದ್ದಾರೆ. ದೇವರಲ್ಲಿ ಸರ್ಕಾರಕ್ಕಾಗಿ ಮೊರೆಯಿಟ್ಟಿದ್ದಾರೆ.

ಮಂಗಳವಾರ ಬೆಳಿಗ್ಗೆ ಅವರು ಶೃಂಗೇರಿ ಶಾರದಾಂಬೆಯ ದೇಗುಲಕ್ಕೆ ಭೇಟಿ ನೀಡಿದ್ದರು. ಶಾರದಾಂಬೆ ಅವರ ಕುಟುಂಬದ ಇಷ್ಟ ದೈವವಾದ ಕಾರಣ ಒಂದೇ ವಾರದಲ್ಲಿ ಎರಡು ಬಾರಿ ಅಲ್ಲಿಗೆ ಭೇಟಿ ನೀಡಿದ ರೇವಣ್ಣನವರು ಅಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ. ಈ ಹಿಂದೆ ಕೂಡಾ ದೇವೇಗೌಡರು ಅತಿ ರುದ್ರ ಮಹಾಯಾಗವನ್ನು ಶೃಂಗೇರಿಯಲ್ಲಿ ನಡೆಸಿದುದ್ದನ್ನು ನಾವಿಲ್ಲಿ ಸ್ಮರಿಸಬಹುದು. ಅದು ಮಾತ್ರವಲ್ಲದೆ ಸರ್ಕಾರಕ್ಕೇನಾದರೂ ತೊಂದರೆ ಎಂದಾಗ ಅವರು ಸಾಮಾನ್ಯವಾಗಿ ಅಲ್ಲಿ ಯಾಗಗಳನ್ನು ಮಾಡಿಸಿದ್ದಾರೆ.

ಹೀಗೆ ಶೃಂಗೇರಿಯ ದರ್ಶನ ಮಾಡಿಕೊಂಡು ಬಂದ ರೇವಣ್ಣನವರು ಇಂದು ಬೆಳಿಗ್ಗೆಯೇ ತಿರುಪತಿ ಬೆಟ್ಟಕ್ಕೆ ಹೋಗಿ ಶ್ರೀ ವೆಂಕಟೇಶ್ವರನ ದರ್ಶನವನ್ನು ಮಾಡಿಕೊಂಡು, ಸರ್ಕಾರವನ್ನು ಉಳಿಸಲು ವೆಂಕಟೇಶ್ವರನಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ. ಕಳೆದ ಆರು ದಿನಗಳಿಂದ ಮತ್ತೊಂದು ವಿಶೇಷವೆಂದರೆ ರೇವಣ್ಣನವರು ಬರಿಗಾಲಲ್ಲೇ ಓಡಾಡುತ್ತಿದ್ದಾರೆ. ನಿನ್ನೆ ಅವರು ತಿರುಪತಿಗೆ ಹೊರಟು, ಇಂದು ಬೆಳಿಗ್ಗೆ ದೇವರ ದರ್ಶನ ಮಾಡಿ, ಪ್ರಾರ್ಥನೆ ಮಾಡಿಕೊಂಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here