ಸೆಲೆಬ್ರಿಟಿಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅವುಗಳ ಅಭಿವೃದ್ಧಿ ಕಾರ್ಯವನ್ನು ಮಾಡುವುದು ಇತ್ತೀಚಿನ ದಿನಗಳಲ್ಲಿ ಒಂದು ಉತ್ತಮ ಬೆಳವಣಿಗೆ ಎನಿಸಿದೆ‌‌. ಆದರೆ ಅದೇ ಮಾದರಿಯ ಒಂದು ಅತ್ಯುತ್ತಮ ಕಾರ್ಯವನ್ನು ಪೋಲಿಸರು ಕೂಡಾ ಮಾಡಿ, ಸರ್ಕಾರಿ ಶಾಲೆಯನ್ನು ಯಾವುದೇ ಖಾಸಗಿ ಶಾಲೆಗಿಂತ ಕಡಿಮೆ ಇಲ್ಲ ಎನ್ನುವಂತೆ ತೋರಿಸಿದ್ದಾರೆ, ಮಾದರಿ ಶಾಲೆಯನ್ನಾಗಿ ಮಾಡಿದ್ದಾರೆ. ಕೊಪ್ಪಳದಲ್ಲಿ ಹಾಳಾಗುವ ಹಂತಕ್ಕೆ ತಲುಪಿದ್ದ ಒಂದು ಸರ್ಕಾರಿ ಶಾಲೆಯನ್ನು ಪೋಲಿಸರು ದತ್ತು ತೆಗದುಕೊಂಡು ಅದನ್ನೊಂದು ಮಾದರಿ ಶಾಲೆಯನ್ನಾಗಿ ಪರಿವರ್ತನೆ ಮಾಡಿದ್ದಾರೆ.

ಇಲ್ಲಿನ ಗಂಗಾವತಿ ನಗರದ ಎಪಿಎಂಸಿ ಗಂಜ್ ಹಮಾಲರ ಏರಿಯಾದಲ್ಲಿರುವ ಸರ್ಕಾರಿ ಪ್ರೌಢಶಾಲೆಯನ್ನು ಗಂಗಾವತಿ ಉಪವಿಭಾಗ ಡಿವೈಎಸ್ಪಿ ಡಾ.ಚಂದ್ರಶೇಖರ್ ಅವರ ನೇತೃತ್ವದಲ್ಲಿ ಶಾಲೆಯನ್ನು ದತ್ತು ಪಡೆದುಕೊಂಡ ಪೋಲಿಸರು ಶಾಲೆಗೆ ಹೊಸದಾಗಿ ಸುಣ್ಣ, ಬಣ್ಣ ಮಾಡಿಸಿ, ಶಾಲೆಯ ಗೋಡೆಗಳ ಮೇಲೆ ಸಾಹಿತ್ಯ, ವಿಜ್ಞಾನ, ಕಲೆ, ಹೀಗೆ ವಿವಿಧ ಕ್ಷೇತ್ರ ಗಳ ಮಾಹಿತಿ, ಹಾಗೂ ಸಾಧಕರ ಫೋಟೋ, ವಿವರಗಳನ್ನು ಚಿತ್ರಿಸಿ ಜ್ಞಾನವನ್ನು ಅರಳುವಂತೆ ಮಾಡಿದ್ದಾರೆ. ಬಹಳ ವರ್ಣರಂಜಿತವಾಗಿ ಕಾಣುವ ಶಾಲೆ ಜನರ ಗಮನವನ್ನು ಸೆಳೆಯುವಂತಾಗಿದೆ.

ಹಾಳು ಬಿದ್ದ ಈ ಶಾಲೆಯನ್ನು ಪೋಲಿಸರು ದತ್ತು ಪಡೆದು ಅದರ ಅಭಿವೃದ್ಧಿ ಮಾಡಿರುವ ವಿಷಯವನ್ನು ಮಾದ್ಯಮಗಳ ಮೂಲಕ ಮನಗಂಡ ಶಿಕ್ಷಣ ಸಚಿವರು ಕೂಡಾ ಪೋಲಿಸರ ಈ ಕಾರ್ಯವನ್ನು ಮೆಚ್ಚಿ ಧನ್ಯವಾದ ತಿಳಿಸಿದ್ದಾರೆ. ಡಿವೈಎಸ್ಪಿ ಅವರ ಜೊತೆಗೆ ಪಿಐ ಉದಯರವಿ ಹಾಗೂ ಸುರೇಶ್ ತಳವಾರ್ ಎಂಬುವವರು ತನ್ನ ಒಂದು ತಿಂಗಳ ವೇತನವನ್ನು ನೀಡಿ ಶಾಲೆಯ ಗ್ರಂಥಾಲಯಕ್ಕೆ ಬೇಕಾಗಿದ್ದ ಪುಸ್ತಕ ಖರೀದಿಸಲು ನೆರವು ನೀಡಿದ್ದರು. ಶಾಲೆಯು ಅಭಿವೃದ್ಧಿ ಆದ ಮೇಲೆ ವಿದ್ಯಾರ್ಥಿಗಳು ಕೂಡಾ ಬಹಳ ಉತ್ಸುಕತೆಯಿಂದ ಶಾಲೆಗೆ ಹಾಜರಾಗುತ್ತಿದ್ದಾರೆ. ಯಾವುದೇ ಖಾಸಗಿ ಶಾಲೆಗಿಂತ ಕಡಿಮೆಯೇನಿಲ್ಲ ಎಂಬಂತಹ ಕಲಿಕೆಗೆ ಪೂರಕವಾದ ವಾತಾವರಣ ಇಲ್ಲಿ ನಿರ್ಮಾಣವಾಗಿದೆ‌.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here