ನಟಿ ಪ್ರಣೀತಾ ಅವರೊಂದು ಅತ್ಯುತ್ತಮ‌ವಾದ ಕೆಲಸವನ್ನು ಮಾಡಿದ್ದಾರೆ. ಅದನ್ನು ಒಂದು ಸಾಧನೆ ಎಂದು ಕೂಡಾ ಕರೆಯಬಹುದಾಗಿದೆ. ಪ್ರಣೀತ ಅವರ ಪ್ರಯತ್ನದಿಂದಾಗಿ, ವಿದ್ಯಾರ್ಥಿಗಳ ಕೊರತೆಯಿಂದ ಇನ್ನೇನು ಮುಚ್ಚುವ ಸ್ಥಿತಿಯಲ್ಲಿದ್ದ ಸರ್ಕಾರಿ ಶಾಲೆಯೊಂದು ಮತ್ತೆ ಮೈದುಂಬಿಕೊಂಡು ನಿಂತಿದೆ. ಈ ಸಾಧನೆ ಕೇವಲ ಒಂದೇ ವರ್ಷದಲ್ಲಿ ಆಗಿದ್ದು, ವಿದ್ಯಾರ್ಥಿಗಳೇ ಇಲ್ಲ ಎಂದು ಸೊರಗಿದ್ದ ಶಾಲೆಯ ಕೊಠಡಿಯಲ್ಲಿ ಈಗ ಶಾಲಾ ಮಕ್ಕಳು ಕುಳಿತು ಪಾಠ ಕೇಳುವಂತಾಗಿದೆ‌. ಇಂತಹ ಒಂದು ಬಹಳ ಅರ್ಥ ಪೂರ್ಣ ಹಾಗೂ ಮಹತ್ವದ ಸಾಧನೆಗೆ ಪ್ರಣೀತ ಅವರು ವಹಿಸಿರುವ ಪರಿಶ್ರಮ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ನಟಿ ಪ್ರಣೀತಾ ಸುಭಾಷ್ ಅವರು ಕಳೆದ ವರ್ಷ ಹಾಸನದ ​ಬಳುಘಟ್ಟ ಸರ್ಕಾರಿ ಶಾಲೆಯನ್ನು ದತ್ತು ಪಡೆದುಕೊಂಡಿದ್ದರು. ಅವರು ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ‘ಸರ್ಕಾರಿ ಶಾಲೆ ಉಳಿಸು’ ಆಂದೋಲನಕ್ಕೆ ಕೈ ಜೋಡಿಸಿದ್ದರು. ಅನಂತರ ಪ್ರಣೀತಾ ಅವರು ಶಾಲೆಯ ಅಭಿವೃದ್ಧಿಯಲ್ಲಿ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿಕೊಂಡರು. ಇದರಿಂದಾಗಿ ಕೇವಲ ಒಂದೇ ವರ್ಷದಲ್ಲಿ ಅವರು ಮುಚ್ಚುವ ಹಂತಕ್ಕೆ ತಲುಪಿದ್ದ ಶಾಲೆಯನ್ನು ಮತ್ತೆ ನಡೆಸುವಂತೆ ಮಾಡಿದ್ದಾರೆ. ಮೊದಲು 22 ಇದ್ದ ವಿದ್ಯಾರ್ಥಿಗಳ ಸಂಖ್ಯೆ ಈಗ 62 ಕ್ಕೆ ಏರಿಕೆಯಾಗಿದೆ.

ಅದು ಮಾತ್ರವಲ್ಲದೆ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಕೂಡಾ ಹೆಚ್ಚಳವಾಗಿದೆ. ಈ ಶಾಲೆಯ ಸಂಭ್ರಮಕ್ಕೆ ಮುಖ್ಯ ಕಾರಣ ನಟಿ ಪ್ರಣೀತಾ ಅವರ ಅವಿರತ ಪರಿಶ್ರಮವೇ. ಕೇವಲ ಒಂದು ವರ್ಷದ ಅವಧಿಯಲ್ಲಿ ಶಾಲೆಯಲ್ಲಿ ಅಗತ್ಯವಿದ್ದ ಮೂಲಭೂತ ಸೌಲಭ್ಯಗಳನ್ನು ಅವರು ಒದಗಿಸಿದ್ದಾರೆ. ಎಲ್ಲಾ ಇದ್ದರೂ ಮಕ್ಕಳು ಇಲ್ಲದೆ ಶಾಲೆ ಇಲ್ಲ. ಅದಕ್ಕೆ ಶಾಲೆಗೆ ಮಕ್ಕಳನ್ನು ಕರೆತರಲು ಹಲವು ಯೋಜನೆಗಳಿಗೆ ಕಾರ್ಯ ರೂಪ ನೀಡಿದ್ದಾರೆ. ಇದೆಲ್ಲದರ ಫಲವಾಗಿ ಮಕ್ಕಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಪ್ರಣೀತಾ ಅವರು ಈ ಸಂತೋಷದ ವಿಚಾರವನ್ನು ತಮ್ಮ ಫೇಸ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here