ನಾಳೆ 1:30 ಒಳಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ವಿಧಾನಸೌಧದಲ್ಲಿ ಬಹುಮತ ಸಾಬೀತು ಮಾಡಲೇಬೇಕೆಂದು ಕರ್ನಾಟಕ ರಾಜ್ಯದ ರಾಜ್ಯಪಾಲರಾದ ವಾಜುಭಾಯಿ ವಾಲಾ ಅವರು ಆದೇಶ ನೀಡಿದ್ದಾರೆ. ಇಂದು ಸಂಜೆ ಈ ಮಾಹಿತಿಯನ್ನು ಕಾಂಗ್ರೆಸ್ ಪಕ್ಷದ ನಾಯಕರಾದ ಡಿಕೆ ಶಿವಕುಮಾರ್ ಅವರು ಮಾಧ್ಯಮಗಳಿಗೆ ರಾಜ್ಯಪಾಲರ ಕಚೇರಿಯಿಂದ ನಾಳೆ 1.30 ರವರೆಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಹುಮತ ಸಾಬೀತು ಪಡಿಸಬೇಕು ಎಂಬ ಮಾಹಿತಿ ಇರುವ ಪತ್ರವು ನಮಗೆ ತಲುಪಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

ಇಂದು ಬೆಳಗ್ಗೆ ನಡೆದ ಚರ್ಚೆಯಲ್ಲಿ ಕುಮಾರಸ್ವಾಮಿಯವರು ಯಾವುದೇ ವಿಶ್ವಾಸಮತ ನಿರ್ಣಯ ಕೈಗೊಳ್ಳದ ಕಾರಣ ಬಿಜೆಪಿ ನಾಯಕರು ರಾಜ್ಯಪಾಲರನ್ನು  ಬೇಟಿ ಮಾಡಿ ಕೂಡಲೇ ನೀವು ಮಧ್ಯಪ್ರವೇಶಿಸಿ ಸರ್ಕಾರದ ಬಗ್ಗೆ ತೀರ್ಮಾನ ಕೈಗೊಳ್ಳಬೇಕೆಂದು ಮನವಿ ಮಾಡಿದ್ದರು. ಇದೆಲ್ಲದರ ನಡುವೆಯೇ ರಾಜ್ಯಪಾಲರ ಕಾರ್ಯದರ್ಶಿಗಳು ವಿಧಾನಸಭೆಯ ಗ್ಯಾಲರಿಯಲ್ಲಿ ಕುಳಿತು ವಿಧಾನಸಭೆಯ ನಾಯಕರ ಚರ್ಚೆಗಳನ್ನು ಸೂಕ್ಷ್ಮವಾಗಿ ಗಮನಿಸಿ ರಾಜ್ಯಪಾಲರಿಗೆ ತಿಳಿಸುತ್ತಿದ್ದರು.

ಇಂದು ನಡೆದ ವಿಧಾನಸಭಾ ಅಧಿವೇಶನದಲ್ಲಿ ಕುಮಾರಸ್ವಾಮಿಯವರು ವಿಶ್ವಾಸಮತಯಾಚನೆ ಬಗ್ಗೆ ಯಾವುದೇ ಮಾತು ಆಡದ ಕುರಿತು ಸಿಡಿದೆದ್ದಿದ್ದ ಬಿಜೆಪಿ ಕಾರ್ಯಕರ್ತರು ಅಹೋರಾತ್ರಿ ವಿಧಾನಸೌಧದಲ್ಲಿ ಧರಣಿ ಕೂರುವುದಾಗಿ ತಿಳಿಸಿದ್ದರು. ಇದೀಗ ರಾಜ್ಯಪಾಲರ ಆದೇಶ ಬಿಜೆಪಿ ನಾಯಕರಿಗೆ ಸಂತೋಷ ಉಂಟು ಮಾಡಿದ್ದು ನಾಳೆ ಕುಮಾರಸ್ವಾಮಿಯವರು ವಿಧಾನಸೌಧದಲ್ಲಿ ವಿಶ್ವಾಸಮತಯಾಚನೆ ಮಾಡಬೇಕಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here