ಪ್ರತೀ ವರ್ಷ ಡಿಸೆಂಬರ್ 23 ರಂದು ನಮ್ಮ ದೇಶದಲ್ಲಿ ರೈತರ ದಿನಾಚರಣೆಯನ್ನು ಆಚರಿಸಲಾಗಿತ್ತದೆ.
ವಿಪರ್ಯಾಸವೆಂದರೆ ಇಲ್ಲ ಸಲ್ಲದ ಆಚರಣೆ ಜಯಂತಿಯನ್ನು ಆಚರಿಸುವ ನಮ್ಮ ಸರ್ಕಾರಕ್ಕೆ ಅದರ ಬಗ್ಗೆ ಗಮನವೇ ಇಲ್ಲ. ಹಾಗೆಯೇ ಈ ಸಮಾಜಕ್ಕೂ ರೈತ ದಿನಾಚರಣೆಯ ಬಗ್ಗೆ ಕಾಳಜಿಯೇ ಇಲ್ಲ

ಅನ್ನ ತಿನ್ನುವ ಮುನ್ನ ನೆನಪು ಮಾಡಿಕೊಳ್ಖ ಬೇಕಾದವರ ಬಗ್ಗೆ ಕಿಂಚತ್ತೂ ಕಾಳಜಿ ಇಲ್ಲ ನಮ್ಮ ರಾಷ್ಟ್ರ ನಾಯಕರಿಗೆ.ಎಷ್ಟೊ ಜನರಿಗೆ ಇದರ ಬಗ್ಗೆ ಮಾಹಿತಿ ಯೂ ಸಹ ಇಲ್ಲ. ಇನ್ನು ಮುಂದಾರರೂ ಸರ್ಕಾರಕ್ಕೆ ಜಾಗೃತಿಯನ್ನು ಮೂಡಿಸಿ ಅಂದು ಇಂದು ದಿನವಾದರೂ ರೈತರಿಗೆ ಗೌರವಾರ್ಥ ಒಂದು ಕಾರ್ಯಕ್ರಮ ರೂಪಿಸಿ ರೈತರ ಕಷ್ಟಗಳಿಗೆ ಸ್ಫಂದಿಸಲಿ ಎಂದು ಕಿವಿಮಾತು ಹೇಳೋಣ . ಎಲ್ಲರೂ ಒಟ್ಟಾಗಿ ಸೇರಿ ಸರ್ಕಾರ ಕ್ಕೆ ಮನವಿಯನ್ನು ಸಲ್ಲಿಸಬೇಕು.

ಅನ್ನ ತಿನ್ನುವ ಮುನ್ನ ನೆನೆಯಬೇಕಾದ ರೈತರ ಬಗ್ಗೆ ಯಾಕೋ ಯಾರಿಗೂ ಕಾಳಜಿ ಇಲ್ಲ. 70 ರ ದಶಕ ಅಂದು ಅಣ್ಣಾವ್ರ ಬಂಗಾರದ ಮನುಷ್ಯ ಸಿನಿಮಾದಿಂದ ಪ್ರೇರಿತರಾದ ಯಾವ ಜನಾಂಗ ಪಟ್ಟಣ ಬಿಟ್ಟು ಹಳ್ಳಿಯನ್ನು ಸೇರಿ ಕೊಂಡರು. ಅಂದು ರೈತರನ್ನು ಪೂಜ್ಯ ಭಾವನೆಯಿಂದ ಕಾಣುತ್ತಿದ್ದರು.

ಆದರೆ ಇಂದು ಬರೀ ರಾಜಕೀಯ ಎಲ್ಲೆಲ್ಲೂ ತುಂಬಿದ್ದು ಕಷ್ಟಪಟ್ಟು ದುಡಿದು ಬೆಳೆ ಬೆಳೆಯುವ ರೈತರಿಗೆ ದಲ್ಲಾಳಿಗಳ ಮಧ್ಯಸ್ಥಿಕೆ ಯಿಂದ ಅವರು ಉತ್ತು ಬಿತ್ತಿಲು ಮಾಡಿದ ಖರ್ಚು ವೆಚ್ಚ ಗಳು ಸಹ ಸಿಗದಂತಾಗಿದೆ. ಇನ್ನೊಂದೆಡೆ ಅತಿವೃಷ್ಟಿ . ಅನಾವೃಷ್ಟಿ. ಇದರಿಂದ ನೊಂದ ರೈತರು ಆತ್ಮಹತ್ಯೆಯ ಕಡೆ ಮುಖ ಮಾಡಿದ್ದಾರೆ.

ಯಾವ ಯಾವುದಕ್ಕೊ ಕೋಟಿ ಕೋಟಿ ಹಣ ವ್ಯಯ ಮಾಡುವ ಸರ್ಕಾರ ಇವರು ಬೆಳೆದ ಬೆಲೆಗೆ ನಿಖರವಾದ ಬೆಲೆ ನಿಗದಿಪಡಿಸಿ ರೈತರೇ ಖುದ್ದಾಗಿ ಬಂದು ಮಾರಾಟ ಮಾಡುವ ವ್ಯವಸ್ಥೆ ಮಾಡಿ ಅದನ್ನು ಸರ್ಕಾರವೇ ಖರೀದಿ ಸಿದರೆ ರೈತರು ನಿಟ್ಟಿಸಿರು ಬಿಡಬಹುದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here