ತೊಂಬತ್ಮೂರು ವಯಸ್ಸಿನ ವೃದ್ಧೆಯೊಬ್ಬರನ್ನು ಗ್ರೇಟರ್ ಮ್ಯಾಂಚೆಸ್ಟರ್ ಪೋಲಿಸರು ಬಂಧಿಸಿ , ಜೈಲಿನಲ್ಲಿ ಇಟ್ಟ ಘಟನೆಯೊಂದು ವರದಿಯಾಗಿದೆ. ಇಳಿವಯಸ್ಸಿನ ಆಕೆಯನ್ನೇಕೆ ಅರೆಸ್ಟ್ ಮಾಡಿ ಜೈಲಿನಲ್ಲಿಟ್ಟರು? ಅಂತಹ ತಪ್ಪೇನು ಮಾಡಿದಳು ಆಕೆ? ಎಂಬ ಎಲ್ಲಾ ಅನುಮಾನಗಳು ಈಗ ಮೂಡಿರಬೇಕು ಅಲ್ಲವೇ? ಅಲ್ಲದೆ ಕೆಲವರಿಗೆ ಹಿರಿಯ ಮಹಿಳೆಯನ್ನು ಬಂಧಿಸಿದ್ದಾರೆ ಎಂದಾಗ ಅಯ್ಯೋ ಪಾಪ ಅಂತ ಕೂಡಾ ಅನಿಸಬಹುದು. ಆದರೆ ಈ ಘಟನೆಯ ಹಿಂದೆ ಒಂದು ವಿಶೇಷವಾದ ಕಾರಣವೇ ಇದೆ. ಬಹುಶಃ ಕಾರಣ ಕೇಳಿದ ಮೇಲೆ ಎಲ್ಲರ ಪ್ರಶ್ನೆಗಳಿಗೂ ಸಮರ್ಪಕವಾದ ಉತ್ತರ ದೊರೆಯಬಹುದು.

ವೃದ್ಧಾಪ್ಯ ಬಂದಂತೆ ಕೆಲವರಿಗೆ ತಮ್ಮ ಕಡೆಯ ದಿನಗಳನ್ನು ತಮಗೆ ಇಷ್ಟವಾದಂತೆ ಕಳೆಯಬೇಕೆಂಬ ಆಸೆಗಳಿರುತ್ತವೆ. ಮತ್ತೆ ಕೆಲವರಿಗೆ ತಮ್ಮ ಜೀವನದಲ್ಲಿ ತೀರದ ಕೆಲವು ಆಸೆಗಳನ್ನು ತಾವು ಸಾಯುವ ಮುನ್ನ ತೀರಿಸಿಕೊಂಡು, ಯಾವುದೇ ಕೊರತೆಯಿಲ್ಲದಂತೆ ಸಾಯಬೇಕೆನ್ನುವ ಆಸೆ ಕೂಡಾ ಇರುತ್ತದೆ. ಅದರಂತೆ ಗ್ರೇಟ್ ಮ್ಯಾಂಚೆಸ್ಟರ್‌ ನಲ್ಲಿ ವಾಸವಿರುವ ,93 ರ ಹರೆಯದ ಜೈಸಿ ಬರ್ಡ್ಸ್ ಎಂಬ ವಯೋವೃದ್ಧೆ ತನ್ನ ಕಡೆಯ ಆಸೆ ಏನೆಂದು ತಿಳಿಸಿದ್ದಾರೆ. ಆಕೆಯ ಆಸೆ ಸ್ವಲ್ಪ ವಿಚಿತ್ರ ಎನಿಸಿದರು, ಅದನ್ನು ತೀರಿಸಲಾಗಿದೆ. ಆಕೆ ತಾನು ಸಾಯುವ ಮುನ್ನ ಒಮ್ಮೆಯಾದರೂ ಅರೆಸ್ಟ್ ಆಗಿ ಜೈಲಿನಲ್ಲಿರುವ ಅನುಭವ ಬೇಕೆಂದು ಕೇಳಿದ್ದಾರೆ.

ಅಜ್ಜಿಯ ಆಸೆಯನ್ನು ತಿಳಿದ ಪೋಲಿಸರು, ಆಕೆಯ ಕಡೆಯ ಆಸೆಯನ್ನು ನೆರವೇರಿಸುವ ಉದ್ದೇಶದಿಂದ ಆಕೆಗೆ ಕೋಳ ತೊಡಿಸಿದ್ದಾರೆ. ಅನಂತರ ಲಾಕಪ್ ನಲ್ಲಿ ಕೆಲವು ಗಂಟೆಗಳ ಕಾಲ ಇರಿಸಿದ್ದಾರೆ. ಈ ಮೂಲಕ ಆ ಅಜ್ಜಿ ತಾನು ಜೈಲಿನಲ್ಲಿ ಇರಬೇಕೆಂದು ಬಯಸಿದ ಆಸೆಯನ್ನು ಪೂರೈಸಲು ಗ್ರೇಟ್ ಮ್ಯಾಂಚೆಸ್ಟರ್‌ ನ ಪೋಲಿಸ್ ಸಹಾಯ ಮಾಡಿದ್ದಾರೆ. ಈ ವಿಷಯವನ್ನು ಜೈಸಿ ಅವರ ಮೊಮ್ಮಗ ಪಾಮ್ ಸ್ಮಿತ್ ಎಂಬುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ಪೋಲಿಸರಿಗೆ ಧನ್ಯವಾದಗಳನ್ನು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here