ಕೇರಳದ ಮಹಿಳಾ ಐಪಿಎಸ್ ಅಧಿಕಾರಿ ಮೆರಿನ್ ಜೋಸೆಫ್ , ಕೊಲ್ಲಂ ನ ಪೋಲಿಸ್ ಕಮೀಷನರ್ ಆಗಿ ಅಧಿಕಾರ ವಹಿಸಿಕೊಂಡು ಇನ್ನೂ ಒಂದು ತಿಂಗಳಾಗಿದೆ. ಆದರೆ ಈ ಒಂದು ತಿಂಗಳಲ್ಲೇ ದಿಟ್ಟತನ ಮೆರೆದಿರುವ ಅವರ ಸಾಧನೆ ಈಗ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಕೇರಳದ ಕೊಲ್ಲಂ ನಲ್ಲಿ 2017 ರಲ್ಲಿ ಮೂರು ತಿಂಗಳ ಕಾಲ 13 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ , ಆ ಬಾಲಕಿಯ ತಂದೆಯ ಸ್ನೇಹಿತನಾದ 38 ವರ್ಷ ವಯಸ್ಸಿನ ಸುನೀಲ್ ಕುಮಾರ್ ಭದ್ರನ್ ಎಂಬ ಕಿರಾತಕ. ಅವನು ಸೌದಿಯಲ್ಲಿ ನೆಲೆಸಿದ್ದವನಾದ್ದರಿಂದ ರಜೆ ಗಾಗಿ ಭಾರತಕ್ಕೆ ಬಂದಿದ್ದಾಗ ಇಂತಹ ಅಕೃತ್ಯವೆಸಗಿ ಸೌದಿ ಗೆ ಮರಳಿದ್ದ.

 

ಬಾಲಕಿ ವಿಷಯ ಪೋಷಕರಿಗೆ ಹೇಳಿದ ಮೇಲೆ ಪೋಲಿಸ್ ಗೆ ದೂರು ಕೊಟ್ಟರಾದರೂ ಅದಾಗಲೇ ಆ ಕಿರಾತಕನು ದುಬೈ ಗೆ ಹೊರಟು ಹೋಗಿದ್ದ.‌ ಇದಾದ ಮೇಲೆ ಆ ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಅಲ್ಲದೆ ಭದ್ರನ್ ನನ್ನು ಆ ಕುಟುಂಬಕ್ಕೆ ಪರಿಚಯ ಮಾಡಿಸಿದ ವ್ಯಕ್ತಿ ಕೂಡಾ ತನ್ನಿಂದಲೇ ಬಾಲಕಿಗೆ ಅಂತಹ ಪರಿಸ್ಥಿತಿ ಎದುರಾಯಿತೆಂಬ ನೋವಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದ. ಪೋಲಿಸರು ಕೂಡಾ ಕೇಸ್ ಬಗ್ಗೆ ಅಷ್ಟು ಗಮನ ಕೊಡಲಿಲ್ಲ. ಆದರೆ ಕುಕೃತ್ಯ ಎಸಗಿದ ವ್ಯಕ್ತಿ ಮಾತ್ರ ಸೌದಿಯಲ್ಲಿ ಆರಾಮವಾಗಿದ್ದ.

 

2019 ರಲ್ಲಿ ಅಧಿಕಾರ ವಹಿಸಿಕೊಂಡ ಮೆರಿನ್ ಜೋಸೆಫ್ ಅವರು , ಈ ಕೇಸ್ ಬಗ್ಗೆ ಸಾರ್ವಜನಿಕರಿಂದ ವ್ಯಕ್ತವಾಗಿರುವ ಆಕ್ರೋಶವನ್ನು ಅರಿತು, ತಮ್ಮ ಕೈ ಗೆ ತೆಗೆದುಕೊಂಡರು. ಕೊಲ್ಲಂ ಪೊಲೀಸ್ ಇಂಟರ್ನ್ಯಾಷನಲ್ ಇನ್ವೆಸ್ಟಿಗೆಷನ್ ಜೊತೆ ನಿರಂತರವಾಗಿ ಸಂಪರ್ಕದಲ್ಲಿ ಇದ್ದುದ್ದರಿಂದ, ಅವರಿಂದ ಕೇಸ್ ಬಗ್ಗೆ ಅಪ್ಡೇಟ್ ಗಳನ್ನು ಪಡೆದು, ಅಲ್ಲಿನ ಅಧಿಕಾರಿಗಳು ಭದ್ರನ್ ನನ್ನು ಬಂಧಿಸಿದ ಮೇಲೆ ಮೆರೀನ್ ಜೋಸೆಫ್ ಅವರು ಸ್ವತಃ ತಾನೇ ದುಬೈ ಗೆ ತೆರಳಿ ಅಪರಾಧಿಯನ್ನು ಬಂಧಿಸಿ ಭಾರತಕ್ಕೆ ಎಳೆ ತಂದಿದ್ದಾರೆ. ಆಕೆ ವಹಿಸಿದ ಕಾಳಜಿ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here